ಸಂತೆಪೇಟೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಂದ ಜನ ಸಂಪರ್ಕ ಸಭೆಯನ್ನು ಮಾರ್ಚಿ 18 ರಂದು ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್ ಕರಿಯ ನಾಯಕ್ ತಿಳಿಸಿದ್ದಾರೆ!
ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೊಬಳಿಯ ಸಂತೆಪೇಟೆ ಗ್ರಾಮದಲ್ಲಿ ಮಾರ್ಚಿ 18ರಂದು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೂ ನಂತರ ಕುಣಿಗಲ ತಾಲೂಕು ಕಚೇರಿ ಸಭಾಗಣದಲ್ಲಿ ಸಂಜೆಯವರೆಗು ಜನಸಂಪರ್ಕ ಸಭೆಯನ್ನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ತಾಲೂಕಿನ ರೈತರು ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನ ಕಂದಾಯ ಇಲಾಖೆಗೆ ಸಂಬಂಧಿಸಿದ ಆರ್ಟಿಸಿ ತಿದ್ದುಪಡಿ ದರ್ಕಾಸ್ ಪೋಡಿ ದುರಸ್ತಿ ವೃದ್ಧಪ್ತ ವೇತನ ಅಂಗವಿಕಲರ ವೇತನ ಪಡಿತರ ಚೀಟಿ ಸೇರಿದಂತೆ ಇನ್ನು ಹತ್ತು ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು ರೈತರಿಂದ ಸಾರ್ವಜನಿಕರಿಂದ ಸಮಸ್ಯೆ ಆಲಿಸಲಿದ್ದಾರೆ ಜನ ಸಂಪರ್ಕ ಸಭೆ ಏರ್ಪಡಿಸುವುದರಿಂದ ಈ ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವುದರಿಂದ ಸಾರ್ವಜನಿಕರು ರೈತರು ತಮ್ಮಗಳ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಸಲುವಾಗಿ ಈ ಜನಸಂಪರ್ಕ ಸಭೆಯ ಸದುಪಯೋಗ ಮಾಡಿಸಿಕೊಳ್ಳಬೇಕೆಂದು ತಹಶೀಲ್ದಾರ್ ಕರಿಯನಾಯ್ಕ್ ತಿಳಿಸಿದ್ದಾರೆ @publicnewskunigal