ಒಂಟಿ ವೃದ್ದೆಯನ್ನ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾದ ಕಳ್ಳರು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೇಟಿ ಪ್ರಕರಣ ದಾಖಲು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಗ್ರಾಮದಲ್ಲಿ ಒಂಟಿಯಾಗಿ ವಾಸವಿದ್ದ ವೃದ್ದೆಯನ್ನು ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ ನಾಗಮ್ಮ (70) ಮೃತ ಮಹಿಳೆ,ಅಕ್ಕ ಪಕ್ಕದ ಮನೆಯವರು ವೃದ್ದೆ ನಾಗಮ್ಮ ಮನೆಯಾಚೆಗೆ ಬಾರದೆ ಇರುವುದನ್ನು ಗಮನಿಸಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ತಾಯಿ ಬೆಂಗಳೂರಿಗೆ ಬಂದಿದ್ದಾರ ಎಂದು ವಿಚಾರಿಸಿದ್ದಾರೆ ಊರಿನಲ್ಲೆ ಇದ್ದಾರೆ ಬೆಂಗಳೂರಿಗೆ ಬಂದಿಲ್ಲ ಎಂದು ಹೇಳಿದ ಕೂಡಲೆ ಅನುಮಾನಗೊಂಡ ಸ್ಥಳಿಯರು ಮನೆಯ ಕಿಟಕಿ ಹೊಡೆದು ನೋಡಿದಾಗ ನಾಗಮ್ಮ ಮನೆಯಲ್ಲೆ ಮಂಚದಮೇಲೆ ಮಲಗಿದ ಸ್ಥಿತಿಯಲ್ಲಿ ಇರುವುದು ಕಂಡುಬಂದಿದೆ ಬಳಿಕ ಬಾಗಿಲು ಹೊಡೆದು ನೋಡಿದಾಗ ಸಾವನ್ನಪ್ಪಿರುವುದು ತಿಳಿದುಬಂದಿದೆ ಬಳಿಕ
ಕುಟುಂಬಸ್ಥರು ಬಂದು ನೋಡಿದಾಗ ನಾಗಮ್ಮನ ಮೈಮೇಲೆ ಖಾರದ ಪುಡಿ ಚೆಲ್ಲಿರುವುದು ಹಾಗೂ ವೃದ್ದೆಯ ಮೈಮೇಲಿದ್ದ ಒಡವೆಗಳು ಕಾಣದೆ ಇದ್ದಾಗ ಅನುಮಾನಗೊಂಡ ಕುಟುಂಬಸ್ಥರು ಹುಲಿಯೂರುದುರ್ಗ ಪೊಲೀಸರಿಗೆ ಮಾಹಿತಿ ನಿಡಿದ್ದಾರೆ ಬಳಿಕ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್ ಕುಣಿಗಲ್ ಡಿವೈಎಸ್ಪಿ ಓಂಪ್ರಕಾಶ್,ಅಮೃತೂರು ಸಿಪಿಐ ನವೀನ್ಗೌಡ ಹುಲಿಯೂರುದುರ್ಗ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಶ್ವಾನಧಳ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಭಂದ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೇಲ್ನೋಟಕ್ಕೆ ಚಿನ್ನಾಭರಣಕ್ಕಾಗಿ ಕೊಲೆಗೈದು ಪರಾರಿಯಾದ್ದಾರೆ ಎನ್ನಲಾಗಿದೆ ಮೃತರಿಗೆ ಮೂವರು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ.ಬೆಂಗಳೂರಿನಲ್ಲಿ ವಾಸವಿದ್ದ.ವೃದ್ದೆ ನಾಗಮ್ಮ ಉಜ್ಜನಿ ಗ್ರಾಮದ ತಮ್ಮ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ನಾಗಮ್ಮ.ಕಳೆದ ಎರಡು ದಿನಗಳಿಂದ ಮನೆಯಿಂದ ಆಚೆ ಬಾರದನ್ನ ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ,ನಾಗಮ್ಮಳ ಕಣ್ಣಿಗೆ ಖಾರದ ಪುಡಿ ಎರಚಿ, ಉಸಿರುಗಟ್ಟಿಸಿ ಕೊಲೆ ಮಾಡಿರುವ ಕಳ್ಳರು.ನಾಗಮ್ಮನ ಕೈಯಲ್ಲಿದ್ದ ಚಿನ್ನದ ಬಳೆ, ಕಿವಿಯಲ್ಲಿದ್ದ ಓಲೆ, ಚಿನ್ನದ ಸರ ಸೇರಿದಂತೆ ಒಟ್ಟು 120 ಗ್ರಾಂ ಚಿನ್ನಾಭರಣ ಕದ್ದೋಯ್ದಿದ್ದಾರೆ.ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಬೆಳ್ಳೂರಿನ ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal