ಕುಣಿಗಲ್;- ಪಟ್ಟಣದಲ್ಲಿ ಸೋಮವಾರ ತಡರಾತ್ರಿ ಕರ್ತವ್ಯ ನಿರತ ಪೊಲೀಸರ ಮೇಲೆ ಗ್ರಾಮ ಲೆಕ್ಕಾಧಿಕಾರಿ ಸೆರಿದಂತೆ ಇಬ್ಬರು ವ್ಯಕ್ತಿಗಳು ಸೇರಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು ಇಬ್ಬರು ಆರೋಪಿಗಳನ್ನು ಪಟ್ಟಣದ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ
ಕುಣಿಗಲ್ ಪೊಲೀಸ್ ಠಾಣೆಯ ಪೇದೆಗಳಾದ ಮಿಥನ್,ಆಗೂ ಸುಮನ್,ಅವರ ಮೇಲೆ ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಗಳಾದ ಗ್ರಾಮಲೆಕ್ಕಿಗ ವೆಂಕಟೇಶ್ ಹಾಗೂ ರಾಮಚಂದ್ರ ಹಲ್ಲೆ ಮಾಡಿರುವ ವ್ಯಕ್ತಿಗಳು ಎಂದು ತಿಳಿದು ಬಂದಿದೆ.
ಘಟನೆ ವಿವರ: ಸೋಮವಾರ ರಾತ್ರಿ ಸುಮಾರು 11-45ರ ಸಮಯದಲ್ಲಿ ಪೊಲೀಸ್ ಪೇದೆಗಳಾದ ಮಿಥನ್ ಹಾಗೂ ಸುಮನ್ ಹೌಸಿಂಗ್ ಬೋರ್ಡ್ ಸ್ಟೇಲ್ಲಾ ಮೇರಿಸ್ ಶಾಲೆಯ ರಸ್ತೆಯಲ್ಲಿರುವ ಮೋದಿ ಕೇರ್ ಅಂಗಡಿ ಮಳಿಗೆಯ ಮುಂಭಾಗದಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಅಲ್ಲೆ ಎದುರಿನ ಮನೆ ಮೇಲೆ ಇದ್ದ ಇಬ್ಬರು ವ್ಯಕ್ತಿಗಳು ಸಮವಸ್ತ್ರದಲ್ಲಿದ್ದ ಪೋಲಿಸರನ್ನು ನೋಡಿ ಯಾರೋ ನೀವು ಮೋದಿ ಕೇರ್ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಿರಾ ಎಂದು ಅವಾಚ್ಯವಾದ ಶಬ್ದಗಳಿಂದ ನಿಂದಿಸಿ ಕೂಗಾಡಿದ್ದಾರೆ, ಬಳಿಕ ಪೇದೆಗಳಿಬ್ಬರು ನಾವು ರಾತ್ರಿ ಗಸ್ತಿನಲ್ಲಿರುವ ಪೋಲಿಸರು ನಮ್ಮ ಹಾಜರಾತಿಗಾಗಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ,
ಆಗ ಇಬ್ಬರು ವ್ಯಕ್ತಿಗಳು ಮನೆಯ ಮೇಲಿನಿಂದ ಕೆಳಗೆ ಇಳಿದು ಬಂದು ಕುಣಿಗಲ್‌ನಲ್ಲಿ ಇರುವ ಎಲ್ಲಾ ಮೋದಿ ಕೇರ್ ಮುಂದೆಯೂ ಸೆಲ್ಫಿ ಪೋಟೊ ತೆಗೆದುಕೊಳ್ಳುತ್ತೀರ ಎಂದು ಏರುದ್ವನಿಯಲ್ಲಿ ಕೂಗಾಡಿ ಸಮವಸ್ತ್ರದಲ್ಲಿದ್ದ ಇಬ್ಬರು ಪೊಲೀಸರ ಕೈಯಲ್ಲಿ ಲಾಠಿ ಕಸಿದುಕೊಂಡು ಹಲ್ಲೆ ನಡೆಸಿರುವುದಲ್ಲದೆ ಕೈಯಿಂದಲು ಗುದ್ದಿ ಹಲ್ಲೆ ನಡೆಸಿದ್ದಾರೆ ಬಳಿಕ ಪೊಲೀಸರ ಬಳಿ ಇದ್ದ ಮೋಬೈಲ್ ಪೋನ್ ಕಿತ್ತುಕೊಂಡು ಹಾಳುಮಾಡಿರುವ ಆರೋಪ ಕೇಳಿಬಂದಿದ್ದು
ಪೊಲೀಸ್ ಪೇದೆ ಮಿಥುನ್ ಠಾಣೆಗೆ ಬಂದು ದೂರು ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಪೊಲೀಸರು ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ