ಗಣೇಶಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನಿರಾಕರಿಸಿದ ಹಿನ್ನೆಲೆ ಗ್ರಾಮ ಪಂಚಾಯ್ತಿ ಮುಂಭಾಗ ಪ್ರತಿಭಟನೆ!

Spread the love

KUNIGAL-ಕೆಂಪನಹಳ್ಳಿ ಗ್ರಾಮದಲ್ಲಿ ಗಣೇಶಮೂರ್ತಿ ಪ್ರತಿಷ್ಠಾನೆಗೆ ಅನುಮತಿ ನಿರಾಕರಣೆ ಹಿನ್ನೆಲೆ ಗ್ರಾಮ ಪಂಚಾಯತಿ ಮುಂಭಾಗ ಪ್ರತಿಭಟನೆ!

ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ಶ್ರೀ ವಿನಾಯಕ ಸಂಘದ ವತಿಯಿಂದ ಗಣೇಶಮೂರ್ತಿ ಪ್ರತಿಷ್ಟಾಪನೆಗೆ ಅನುಮತಿ ನೀರಾಕರಣೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿಯ ಮುಂಭಾಗ ಸೋಮವಾರ ಮಧ್ಯಾಹ್ನ ಗಣೇಶ ಮೂರ್ತಿ ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ ಗ್ರಾಮದಲ್ಲಿ ಐದು ದಿನಗಳ ವರೆಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಠಾಣೆಯಲ್ಲಿ ಶ್ರೀ ವಿನಾಯಕ ಸಂಘಕ್ಕೆ ಅನುಮತಿ ನೀಡಿದ ಕಾರಣ ಅದ್ದೂರಿ ಗಣೇಶೊತ್ಸವ ಆಚರಣೆಗೆ ಸಕಲ ಸಿದ್ದತೆ ಮಾಡಲಾಗಿತ್ತು ಈ ನಡುವೆ ಇನ್ನೂ ಗಣೇಶಮೂರ್ತಿ ಇಡುವ ಸ್ಥಳದಲ್ಲಿ ಭೂ ವಿವಾದ ಇರುವ ಹಿನ್ನೆಲೆಯಲ್ಲಿ ನೀಡಿರುವ ಅನುಮತಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ವಾಪಸ್ ಪಡೆದ ಹಿನ್ನೆಲೆಯಲ್ಲಿ

ಗ್ರಾಮಸ್ಥರು ಗ್ರಾಮ ಪಂಚಾಯ್ತಿಯ ಮುಂಭಾಗ ಗ್ರಾಮದಲ್ಲಿ ಇಡಲು ತಂದಿದ್ದ ಗಣೇಶಮೂರ್ತಿಯನ್ನಿಟ್ಟು ಪ್ರತಿಭಟನೆ ನಡೆಸಿದರು ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವಿನ್ ಗೌಡ ಬೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು ಬಳಿಕ ಗಣೆಶ ಮೂರ್ತಿಯನ್ನು ಗ್ರಾಮ ಪಂಚಾಯ್ತಿ ಯಿಂದ ಗ್ರಾಮಕ್ಕೆ ತಂದ ಗ್ರಾಮಸ್ಥರು ಕೆಂಪನಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನಿರಾಕರಣೆ ಮಾಡಿದ ಹಿನ್ನೆಲೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿಗಳ ಬಳಿ ಬಂದ ಗ್ರಾಮಸ್ಥರು ಗ್ರಾಮದಲ್ಲಿ ಗಣೇಶಮೂರ್ತಿ ಇಡಲು ಗ್ರಾಮ ಪಂಚಾಯಿತಿ ವತಿಯಿಂದ ಅನುಮತಿ ನೀಡಿ ಬಳಿಕ ಅನುಮತಿ ವಾಪಸ್ ಪಡೆಯಲಾಗಿದೆ ಗ್ರಾಮದಲ್ಲಿ ಹಬ್ಬ ಆಚರಣೆ ಮಾಡಿಲ್ಲ ಈ ಬಗ್ಗೆ ಅನುಮತಿ ವಾಪಸ್ ಪಡೆದ ಪಿಡಿಒ ವಿರುದ್ದ ಕ್ರಮ ಕೈಗೊಳ್ಳಿ ನಮಗೆ ಅನುಮತಿ ನೀಡಿ ಎಂದು ಗ್ರಾಮದ ಹಲವರು ಇಒ ನಾರಾಯಣ್ ಬಳಿ ಪಟ್ಟು ಹಿಡಿದು ಕುಳಿತರು ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ಕೆಲಹೊತ್ತು ಮಾತಿನ ಚಕಮಕಿ ನಡೆದು ಕೊನೆಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿಗಳು ತುರ್ತಾಗಿ ಗ್ರಾಮ ಪಂಚಾಯತಿ ಸದಸ್ಯರ ಹಾಗೂ ವಿವಾದಿತ ಸ್ಥಳದ ದೂರುದಾರರನ್ನು ಒಳಗೊಂಡಂತೆ ಸಭೆ ಕರೆದು ಗ್ರಾಮದಲ್ಲಿ ಗಣಪತಿಮೂರ್ತಿಯನ್ನು ಇಡಲು ಅವಕಾಶ ಕಲ್ಪಿಸುವಂತೆ ಕೆಂಪನಹಳ್ಳಿ ಗ್ರಾಮ ಪಂಚಾಯ್ತಿಯ ಪಿಡಿಒ ರಾಜಶೇಖರ್ ಗೆ ಇಒ ನಾರಾಯಣ್ ಸೂಚಿಸಿರುವ ಘಟನೆ ನಡೆದಿದೆ @publicnewskunigal