ಸರ್ಕಾರಿ ಶಾಲೆಯ ಮಕ್ಕಳ ಬಿಸಿಯೂಟಕ್ಕೂ ಶಿಕ್ಷಕರ ಕನ್ನ!

Spread the love

ಸರ್ಕಾರಿ ಶಾಲೆಯ ಮಕ್ಕಳ ಬಿಸಿಯೂಟಕ್ಕೂ ಶಿಕ್ಷಕರ ಕನ್ನ!ಸರ್ಕಾರಿ ಶಾಲೆಯಲ್ಲಿ ಒದುತ್ತಿರುವ ಬಡ ಮಕ್ಕಳಿಗೆ ಹಸಿವಿನಿಂದ ಇರಬಾರದು ಎಂಬ ಕಾರಣಕ್ಕೆ ರಾಜ್ಯಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು 2002-03ನೇ ಸಾಲಿನಲ್ಲಿ ರಾಜ್ಯಾದ್ಯಂತ ಆರಂಭಿಸಿತು ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ ಆದರೆ ಈ ಯೋಜನೆ ಎಷ್ಟರ ಮಟ್ಟಿಗೆ ಅನುಷ್ಠಾನ ವಾಗುತ್ತಿದೆ ಎಂಬುದೆ ಇಲ್ಲಿ ಪ್ರಶ್ನೆಯಾಗಿದೆ ಮಕ್ಕಳ ಬಿಸಿಯೂಟಕ್ಕೂ ಇತ್ತಿಚೆಗೆ ಕನ್ನಾ ಹಾಕುತ್ತಿರುವುದು ಕಂಡುಬಂದಿದೆ,

ಕುಣಿಗಲ್ ತಾಲ್ಲೂಕಿನ ಅಮೃತೂರು ಹೊಬಳಿ ವ್ಯಾಪ್ತಿಯ ಕೆ,ಹೊನ್ನಮಾಚನಹಳ್ಳಿ ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಅನುದಾನಿತ ಪ್ರೌಢ ಶಾಲೆ ಇತ್ತಿಚೆಗೆ ದಾಖಲಾತಿ ಕುಸಿತ ಕಾರಣದಿಂದ ಶಾಲೆ ಮುಚ್ಚಲಾಗಿದ್ದು ಈ ವೇಳೆ ಶಾಲೆಯಲ್ಲಿ ಉಳಿದಿದ್ದ ಬಿಸಿಯೂಟ ಯೋಜನೆಯ (03) ಕ್ವಿಂಟಾಲ್ ಅಕ್ಕಿ,(50) ಕೆ,ಜಿ ತೊಗರಿಬೇಳೆ ಹಾಗೂ ಅಡಿಗೆ ಎಣ್ಣೆ ಎಲ್ಲವನ್ನೂ ಕೆ,ಹೆಚ್ ಹಳ್ಳಿ ಕ್ಲಸ್ಟರ್ ನ ಸಿಆರ್ಪಿ ಜಯರಾಮ್ ರವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ತಂದು ಇಟ್ಟಿದ್ದು ಬಳಿಕ ಬೇರೆ ಶಾಲೆಗೆ ನೀಡಬೇಕಾಗಿದೆ ಎಂದು ಶಿಕ್ಷಕರಿಗೆ ತಿಳಿಸಿ ತೆಗೆದುಕೊಂಡ ಹೊಗಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ

ಇದಲ್ಲದೆ ಹಾಲಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿದ್ದ ಪ್ರಿಂಟರ್ ಎಗರಿಸಿ ಮನೆಗೆ ಕೊಂಡೊಯ್ದಿದ್ದ ಮಹಾನುಭಾವನ ಬಗ್ಗೆ SDMC ಅಧ್ಯಕ್ಷರಾದ ತಿಮ್ಮಯ್ಯ ಮತ್ತು ರವಿ ಇವರು ಸಾಮಾಜಿಕ ಹೋರಾಟಗಾರರ ಹೆಚ್,ಜಿ ರಮೇಶ್ ರವರ ಗಮನಕ್ಕೆ ತಂದ ಕಾರಣ ಈ ಬಗ್ಗೆ ಮಾಹಿತಿ ಕಲೆ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಲಿಖಿತ ರೂಪದಲ್ಲಿ ದೂರು ನೀಡಿದ ಬಳಿಕ ಮಾರಾಟ ಮಾಡಿದ್ದ ಅಕ್ಕಿ ಬೇಳೆ ಹಾಗೂ ಪ್ರಿಂಟರ್ ಇದೀಗ ಕೆ,ಹೆಚ್ ಹಳ್ಳಿಯ ಶಾಲೆಗೆ ಬಂದಿವೆ ಇದಲ್ಲದೆ ಸಣಬಘಟ್ಟ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಆಂಜನಪ್ಪ ಶಾಲೆಗೆ ಸುಣ್ಣ ಬಣ್ಣ ಬಳಿಸುವುದಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು ಅನಿವಾಸಿ ಭಾರತೀಯರಿಂದ ತನ್ನ ಸ್ವಂತ ಬ್ಯಾಂಕ್ ಖಾತೆಗೆ ಸುಮಾರು 45 ರಿಂದ 50 ಸಾವಿರ ಹಣ ಹಾಕಿಸಿಕೊಂಡು ಶಾಲೆಗೆ ಬಣ್ಣ ಬಳಿಯುವ ಬದಲು ‘ನಾಮ’ ಬಳಿದಿರುವುದು ಇಗ ಬಟ ಬಯಲಾಗಿದೆ

ಇದಲ್ಲದೆ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರವಾಸ ಕರೆದೊಯ್ಯುವುದಾಗಿ ತಿಳಿಸಿ ಮಕ್ಕಳಿಂದ ಹೆಚ್ಚು ಹಣ ಪಡೆದು ಬಳಿಕ ಘಾಟಿ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿಸಿ ಹಣ ಲಪಟಯಿಸಿರುವುದು ಇಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ, ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರು ಬಡಮಕ್ಕಳ ಏಳಿಗೆಗಾಗಿ ಹಾಗೂ ಶಾಲೆಯ ಅಭಿವೃದ್ಧಗಾಗಿ ಅದೆಷ್ಟೊ ಮಂದಿ ಶಿಕ್ಷಕರು ತಮ್ಮ ಸಂಬಳದ ಹಣವನ್ನೆ ಬಳಸಿ ಅಭಿವೃದ್ದಿ ಪಡಿಸಿರುವುದು ಉಂಟು ಆದರೆ ಹಲವು ಉತ್ತಮ ಶಿಕ್ಷಕರ ನಡುವೆ ಇಂತಹ ಶಿಕ್ಷಕರು ಇಲಾಖೆಗೆ ಕಳಂಕ ಇಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಂಡು ಇಲಾಖೆ ಇವರನ್ನು ಸೇವೆಯಿಂದ ವಜಾಗೊಳಿಸ ಬೇಕು ಇಂತಹ (Business) ಶಿಕ್ಷಕರನ್ನು ಇಲಾಖೆಯಿಂದ ಹೋರ ಹಾಕಿ ಸರ್ಕಾರಿ ಶಾಲೆ ಉಳಿಸಿ ಎಂದು ಸಾರ್ವಜನಿಕರು ಹಾಗೂ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಗ್ರಹಸಿದೆ @publicnewskunigal