
ಕುಣಿಗಲ್;-ಪ್ರಯಾಣಿಕರನ್ನು ತುಂಬಿದ್ದ ಸಾರಿಗೆ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ತುಂಬಿ ಹರಿಯುತ್ತಿರುವ ನಾಲೆಗೆ ನುಗ್ಗಿದೆ!
ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿ ವ್ಯಾಪ್ತಿಯ ದೊಡ್ಡ ಕಲ್ಲಹಳ್ಳಿ ಕಡೆಯಿಂದ ವಾಪಸ್ ಕುಣಿಗಲ್ ಕಡೆಗೆ ಪ್ರಯಾಣಿಕರನ್ನು ತುಂಬಿ ತೆರಳುತ್ತಿದ್ದ ಕೆ,ಎಸ್,ಆರ್,ಟಿ,ಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ್ದ ಹೇಮಾವತಿ ನಾಲೆಗೆ ನುಗ್ಗಿದೆ ಬಸ್ ನಲ್ಲಿ ಶಾಲಾ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಬಸ್ಸ್ ನಲ್ಲಿದ್ದು ಎಂಟರಿಂದ ಹತ್ತು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿಧದ್ದು ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಬವಿಸಿಲ್ಲ
ಮಾರ್ಕೋನಹಳ್ಳಿ ಜಲಾಶಯದಿಂದ ನೀರು ತುಂಬಿ ಹರಿಯುತ್ತಿದ್ದ ನಾಲೆಯೊಳಗೆ ಬಸ್ಸ್ ಇಳಿದಿದ್ದರಿಂದ ಬಸ್ಸಿನ ತುಂಬ ಪ್ರಯಾಣಿಕರು ಕುರುವ ಸೀಟಿನ ವರೆಗೆ ನೀರು ತುಂಬಿತ್ತು ಸ್ಥಳಿಯರ ನೆರವಿನಿಂದ ಬಸ್ಸಿನ ಒಳಗಿದ್ದ ಪ್ರಯಾಣಿಕರನ್ನು ಹೊರಗೆ ಕರೆತರಲಾಗಿದೆ
ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು ಗಾಯಾಳುಗಳನ್ನ ಅಮೃತೂರು ಸಮುದಾಯ ಆರೋಗ್ಯ ಕೇಂದ್ರ ಕುಣಿಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ @publicnewskunigal