
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಗೆ ಆನಾರೋಗ್ಯ ಹಿನ್ನೆಲೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ನಾರಾಯಣ್ ನಿರ್ದೇಶನದ ಮೇರೆಗೆ ಗುರುವಾರ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ,ಮರಿಯಪ್ಪ ಬೇಟಿ ನೀಡಿ ವಸತಿ ಶಾಲೆಯ ವಸ್ತು ಸ್ಥಿತಿಯನ್ನು ಪರಿಶೀಲನೆ ನಡೆಸಿದ್ದಾರೆ
ಪರಿಶೀಲನೆ ವೇಳೆ ಸಮಸ್ಯೆಗಳ ಅನಾವರಣ 180 ಮಕ್ಕಳಿಗೆ ಬೆಡ್ ವ್ಯವಸ್ಥೆ ಇಲ್ಲದೆ ನೆಲದ ಮೇಲೆ ಮಲಗುವ ಸ್ಥಿತಿ ನಿರ್ಮಾಣವಾಗಿದ್ದು 250 ಮಂದಿ ಮಕ್ಕಳು ಕಲಿಯುತ್ತಿರುವ ವಸತಿ ಶಾಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾದರೆ ಬದಲಿ ವ್ಯವಸ್ಥೆ ಇಲ್ಲವಾಗಿದೆ ಕಾಡಂಚಿನಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಇಲಾಖೆಯಿಂದ ಇದುವರೆಗೂ ಜನರೇಟರ್ ವ್ಯವಸ್ಥೆ ಕಲ್ಪಿಸಿಲ್ಲ ಕರೆಂಟ್ ಹೊದರೆ ಕತ್ತಲೆಯಲ್ಲಿ ಮಕ್ಕಳು ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ ಇರುವ ಒಂದು ಕೊಳವೆಬಾವಿಯಲ್ಲಿ ಪ್ಲೋರೆಡ್ ಮಿಶ್ರಿತ ನೀರು ಬರುತ್ತಿದ್ದು ಮಕ್ಕಳಿಗೆ ಕುಡಿಯಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೊಳವೆ ಬಾವಿ ಕೊರೆಯಲು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು ಸ್ಥಳ ಪರಿಶೀಲನೆ ನಡೆಸಿ ಹೊಗಿ ಹಲವು ದಿನಗಳು ಕಳೆದಿದೆ ಇದುವರೆಗೆ ಯಾವುದೆ ಕ್ರಮ ವಹಿಸದಿರುವುದು ಕಂಡುಬಂದಿದೆ
ಇನ್ನೂ ಅಧಿಕಾರಿಗಳ ಪರಿಶೀಲನೆ ವೇಳೆ ಮಕ್ಕಳು ಬಳಸುವ ನೀರಿನಲ್ಲಿ ಸ್ವಚ್ಚತೆ ಇಲ್ಲದಿರುವುದು ಕಂಡುಬಂದಿದೆ ಜೊತೆಗೆ ಸೊಲಾರ್ ಪ್ಯಾನಲ್ ಗಳನ್ನು ಸ್ವಚ್ಚಗೋಳಿಸದ ಕಾರಣ ಮಕ್ಕಳಿಗೆ ಸರಿಯಾದ ಬಿಸಿನೀರು ಸಿಗದಂತಾಗಿದೆ ಇದಲ್ಲದೆ ಸುಮಾರು ಇಪ್ಪತೈದರಿಂದ ಮೂವತ್ತು ಮಕ್ಕಳಲ್ಲಿ ನೆಗಡಿ ಕೆಮ್ಮು ಕಂಡುಬಂದಿದ್ದು ಉಳಿದಂತೆ ಹದಿನೈದು ಮಕ್ಕಳ ಕೈಗಳಲ್ಲಿ ತುರಿಕೆ ರೀತಿಯಲ್ಲಿ ಅಲರ್ಜಿ ಉಂಟಾಗಿರುವುದು ಕಂಡು ಬಂದಿದ್ದು ಬಾಲ ಸ್ವಾಸ್ಥ್ಯ ಮಿಷನ್ ಅಡಿಯಲ್ಲಿ ಎಲ್ಲಾ ಮಕ್ಕಳಿಗೂ ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ಅನಾರೋಗ್ಯ ಕಂಡುಬಂದ ಮಕ್ಕಳಿಗೆ ಸ್ಥಳದಲ್ಲಿ ಚಿಕಿತ್ಸೆ ನೀಡಲಾಯಿತು ಅಡುಗೆ ಮತ್ತು ಸ್ವಚ್ಚತ ಸಿಬ್ಬಂದಿಗಳಿಗೆ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಬಗ್ಗೆ ಮತ್ತು ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ತಿಳುವಳಿಕೆ ನೀಡಲಾಯಿತು ಈ ವೇಳೆ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ,ಅಕ್ಷಯ್, ವೈದ್ಯರಾದ ಕಾವೇರಿ, ಬಸವರಾಜು,ಉಜ್ಜನಿ ಪ್ರಾಥಮಿಕ ಆರೋಗ್ಯ ಕೆಂದ್ರದ ಆರೋಗ್ಯ ನಿರೀಕ್ಷಕ ರಾಜು, ಶೋಷಿತ ಸಮುದಾಯ ವೇದಿಕೆಯ ತಾಲೂಕು ಅಧ್ಯಕ್ಷ ಶಿವರಾಜು ಸಂಚಾಲಕ ಜಿಕೆ ನಾಗಣ್ಣ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು @publicnewskunigal