
ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಸಿ,ಟಿ ರವಿ ರವರಿಗೆ ಸ್ವಾಗತ ಕೊರಿದ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್
ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ಶನಿವಾರ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಕುಣಿಗಲ್ ಪಟ್ಟಣದ ಗ್ರಾಮದೇವತೆ ವೃತ್ತಕ್ಕೆ ಆಗಮಿಸಿದ ಚಿಕ್ಕಮಗಳೂರಿನ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ರವರಿಗೆ ಬಿಜೆಪಿ ಮುಖಂಡ ಡಿ,ಕೃಷ್ಣಕುಮಾರ್ ಸ್ವಾಗತಿಸಿ ಸನ್ಮಾನಿಸಿ ಅಭಿನಂದಿಸಿದರು
ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಂ.ಎಲ್.ಸಿ ಸಿಟಿ ರವಿ ರವರು ಮಾತನಾಡಿ ಬಿಜೆಪಿ ಕಾರ್ಯಕರ್ತರು ಹಾಗೂ ರಾಜ್ಯದ ಜನ ಎಲ್ಲವನ್ನು ನೊಡುತ್ತಿದ್ದಾರೆ ಈ ಸಂದರ್ಭದಲ್ಲಿ ನಾನು ಹೆಚ್ಚೆನು ಹೇಳಲಾರೆ ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಎಂದಿಗೂ ಆಬಾರಿಯಾಗಿರುತ್ತೆನೆ ಕಷ್ಟ ಕಾಲದಲ್ಲಿ ನಿವೆಲ್ಲರು ನನ್ನ ಜೊತೆ ನಿಂತಿದ್ದು ಸರ್ಕಾರದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಿರಾ ನಿಮ್ಮ ಕಷ್ಟದ ಸಮಯದಲ್ಲಿ ಎಂದಿಗೂ ಜೀವಕ್ಕೆ ಜೀವ ಕೊಟ್ಟು ನಿಮ್ಮ ಜೊತೆ ನಿಲ್ಲುವೆ ಎಂದರು ಇದೆ ವೇಳೆ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು @publicnewskunigal