ಆಹಾರ ಅರಸಿ ಮರವೆರಿದ ಚಿರತೆಗೆ ವಿದ್ಯುತ್ ಪ್ರವಹಿಸಿ ಸಾವು!

Spread the love

ಆಹಾರ ಅರಸಿ ಮರವನೆರಿದ ಚಿರತೆಗೆ ವಿದ್ಯುತ್ ಪ್ರವಹಿಸಿ ಸಾವು ಸ್ಥಳಕ್ಕೆ ಅರಣ್ಯಾಧಿಕಾರಿಗಳ ಬೇಟಿ!

ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬೆಣಚಕಲ್ಲು ಗ್ರಾಮದ ಬಳಿ ಸುಮಾರು 4 ವರ್ಷದ ಹೆಣ್ಣು ಚಿರತೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ ಬೆಣಚಕಲ್ಲು ಹಾಗೂ ಒಡ್ಡರಹಾಳು ಗ್ರಾಮದ ಮದ್ಯದಲ್ಲಿರುವ ಬನ್ನಿಮಂಟಪದ ಬಳಿ ಅರಳಿ ಮರದಲ್ಲಿ ಇದ್ದ ಬಾವಲಿಗಳನ್ನು ಹಿಡಿಯುವ ಸಲುವಾಗಿ ಆಹಾರ ಅರಸಿ ಶನಿವಾರ ತಡರಾತ್ರಿ ಅರಳಿ ಮರವನ್ನು ಏರಿದ ಚಿರತೆ ಮರದಲ್ಲಿ ಹಾದುಹೊಗಿರುವ ಹನ್ನೊಂದು ಕೆ.ವಿ ವಿದ್ಯುತ್ ಮಾರ್ಗದ ತಂತಿಯಲ್ಲಿ ವಿದ್ಯುತ್ ಪ್ರವಹಿಸಿ ಮರದಿಂದ ಕೆಳಗೆ ಬಿದ್ದು ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ 

ಬೆಳ್ಳಂಬೆಳಗ್ಗೆ ಚಿರತೆ ಕಂಡ ಗ್ರಾಮಸ್ಥರು ಗಾಬರಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಕಳೆಬರವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿ ಪಿ ಜಗದೀಶ್ ತಿಳಿಸಿದ್ದಾರೆ 

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಚಿರತೆ ಸಾವನ್ನಪ್ಪಿದೆ ಹಲವು ದಿನಗಳಿಂದ ಮರದೊಳಗೆ ಹಾದು ಹೋಗಿರುವ ವಿದ್ಯುತ್ ತಂತಿಯ ಬದಲಾಯಿಸಿ ಕೆಬಲ್ ಎಳೆಯುವಂತೆ ಮನವಿ ಮಾಡಿದರು ಇದು ವರೆಗೆ ಯಾವುದೆ ಕ್ರಮ ಕೈಗೊಂಡಿಲ್ಲ ಇದರಿಂದ ಆಹಾರ ಅರಸಿ ಬರುವ ಬಾವಲಿಗಳು ಸಹ ವಿದ್ಯುತ್ ತಗುಲಿ ಸಾವನ್ನಪ್ಪುತ್ತಿವೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮರದೊಳಗೆ ಹಾದುಹೋಗಿರುವ ವಿದ್ಯುತ್ ಲೈನ್ ಬದಲಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ @publicnewskunigal