
ಕುಣಿಗಲ್;-ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡ ರೋಗಿಗಳ ಬಳಿ ಲ್ಯಾಬ್ ಟೆಕ್ನಿಷಿಯನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ನೌಕರ ರಕ್ತ ಪರೀಕ್ಷೆಗೆ ಬರುವ ರೋಗಿಗಳಿಂದ ಫೋನ್ ಪೇ ಮೂಲಕ ಲಂಚ ಪಡೆಯುತ್ತಿರುವುದು ಕಂಡುಬಂದಿದೆ ಹಿನ್ನೆಲೆ ಸದರಿ ನೌಕರನನ್ನು ಕೂಡಲೇ ಸೇವೆಯಿಂದ ವಜಾ ಮಾಡುವಂತೆ ತಾಲ್ಲೂಕು ಬಜರಂಗದಳದ ಮುಖಂಡರು ಒತ್ತಾಯಿಸಿದೆ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ನಿತ್ಯ ನೂರಾರು ಮಂದಿ ರೋಗಿಗಳು ಬರುತ್ತಾರೆ ಆದರೆ ಲ್ಯಾಬ್ ಟೆಕ್ನಿಷಿಯನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರಾಘವೇಂದ್ರ ಎಂಬತಾ ಆಸ್ಪತ್ರೆಗೆ ಬರುವ ರೈತರು,ಬಡವರ,ಕೂಲಿ ಕಾರ್ಮಿಕರು ರಕ್ತ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಬಂದಾಗ ಅವರಿಂದ ಹಣ ಪಡೆದು ರಕ್ತ ಪರೀಕ್ಷೆ ಮಾಡುತ್ತಿರುವ ಬಗ್ಗೆ ಹಲವು ದಿನಗಳಿಂದ ದೂರುಗಳು ಬರುತ್ತಿದ್ದರು ಸಹ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಯಾವುದೆ ರೀತಿಯ ಕ್ರಮ ಕೈಗೊಂಡಿರಲಿಲ್ಲ ಆದರೆ ಇತ್ತಿಚೇಗೆ ರೋಗಿಯೊಬ್ಬರಿಂದ 300 ರೂಪಾಯಿಗಳ ಲಂಚವನ್ನ ರಕ್ತ ಪರೀಕ್ಷೆ ಮಾಡಲು ಫೋನ್ ಪೇ ಮೂಲಕ ಪಡೆದಿರುವುದು ಕಂಡುಬಂದಿದೆ ಯಾವುದೇ ಸರ್ಕಾರಿ ರಶೀದಿ ನೀಡದೆ ವಂಚನೆ ಮಾಡುತ್ತಾ ಬಡ ರೋಗಿಗಳಿಂದ ಸುಲಿಗೆ ಮಾಡುತ್ತಿರುವ ಲ್ಯಾಬ್ ಟೆಕ್ನಿಷಿಯನ್ ರಾಘವೇಂದ್ರ ನನ್ನು ಕೂಡಲೆ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ,ಗಣೇಶ್ ಬಾಬು ರವರಿಗೆ ತಾಲ್ಲೂಕು ಬಜರಂಗದಳದ ಅಧ್ಯಕ್ಷ ಗಿರೀಶ್,ಹಾಗೂ ಸದಸ್ಯರಾದ ಹೇಮಂತ್, ಕಾರ್ತಿಕ್ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ@publicnewskunigalunigal