
ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಾಮಫಲಕ್ಕೆ ಡಿಕ್ಕಿಯಾಗಿ ಖಾಸಗಿ ಬಸ್ ಪಲ್ಟಿ ಓರ್ವ ಸಾವು ಹಲವರಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು!
ಕುಣಿಗಲ್ ಉಡುಪಿಯಿಂದ ಬೆಂಗಳೂರು ಕಡೆಗೆ ಕುಣಿಗಲ್ ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಅಳವಡಿಸಿದ್ದ ಸ್ವಾಗತ ಕೋರುವ ನಾಮಫಲಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಪಲ್ಟಿಯಾಗಿ ಚಾಲಕ ಮೃತಪಟ್ಟು 8 ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹೊರವಲಯ ರಾಷ್ಟ್ರೀಯ ಹೆದ್ದಾರಿ 75ರ ಅಂಚೇಪಾಳ್ಯ ಬಳಿ ಡಿಸೆಂಬರ್ 28 ಶನಿವಾರ ಬೆಳಗಿನ ಜಾವ 4-30 ರಲ್ಲಿ ಸಂಭವಿಸಿದೆ
ಮಂಗಳೂರು ಬಿ.ಸಿ.ರೋಡ್ ನಿವಾಸಿ, ಬಸ್ ಚಾಲಕ ಮಹಮ್ಮದ್ ಇಬ್ರಾಹಿಂ (40) ಮೃತಪಟ್ಟ ಖಾಸಗಿ ಬಸ್ ಚಾಲಕ ಉಡುಪಿಯ ಸುಭಾಷ್ ನಗರದಿಂದ ಶುಕ್ರವಾರ ರಾತ್ರಿ 7.45 ಕ್ಕೆ ಬೆಂಗಳೂರು ಕಡೆಗೆ ಹೊರಟಿದ್ದ ಖಾಸಗಿ ಬಸ್ ಕುಣಿಗಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಸ್ಥಳಕ್ಕೆ ತುಮಕೂರು ಎಎಸ್ಪಿ ಮರಿಯಪ್ಪ ಹಾಗೂ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal