ಯಡಿಯೂರಿನಲ್ಲಿ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ!

Spread the love

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು(ರಿ) ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನವನ್ನು ಕುಣಿಗಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಗಿಡಕ್ಕೆ ನೀರುಹಾಕುವ ಮೂಲಕ ಸಮ್ಮೇಳನದ ಸರ್ವಾಧ್ಯಕ್ಷರಾದ ಪ್ರಸಿದ್ಧ ಸಾಹಿತಿ ರಂಜಾನ್ ದರ್ಗಾ ರವರು ಸೆರಿದಂತೆ ಗಣ್ಯರು ಉದ್ಘಾಟಿಸಿದರು ಬಳಿಕ ಮಾತನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್,ಎನ್ ಮುಕುಂದರಾಜ್ ಮಾತನಾಡಿ ಕುಣಿಗಲ್ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಅಖಿಲ ಕರ್ನಾಟಕ ಪ್ರಥಮ ಶರಣ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ತಾಲೂಕಿನ ಹೆಮ್ಮೆಯ ವಿಷಯವಾಗಿದ್ದು ಈ ನಾಡಿನಲ್ಲಿ ಶರಣ ಪರಂಪರೆ 15ನೇ ಶತಮಾನದವರೆಗೆ ಲಿಂಗಾಯತರು ಉಸಿರಾಡದ ವಾತಾವರಣ ನಿರ್ಮಾಣವಾಗಿತ್ತು

ಅಂದು ಶರಣ ಧರ್ಮ ಉಳಿವಿಗಾಗಿ ಶಕ್ತಿಯನ್ನು ತುಂಬಿದ ಸಮುದಾಯದ ರಂಜಾನ್ ದರ್ಗಾ ರವರು ಇಂದು ಕುಣಿಗಲ್ ತಾಲ್ಲೂಕಿನಲ್ಲಿ ನಡೆಯುತ್ತಿರುವ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಹೆಮ್ಮೆಯ ವಿಷಯ ರಂಜಾನ್ ದರ್ಗಾ ರವರನ್ನು ಮುಸಲ್ಮಾನ್ ಎನ್ನುವುದಕ್ಕಿಂತ ಅವರೊಬ್ಬ ಅಪ್ಪಟ ಬಸವವಾದಿಯಾಗಿದ್ದಾರೆ ಹಿಂದೆ ಲಿಂಗಾಯತರಿಗೆ ಬಹುಮನಿ ಸುಲ್ತಾನರು ನೆರವಾಗದಿದ್ದಲ್ಲಿ ಹಾಗೂ ವಿಜಯನಗರ ಸಾಮ್ರಾಜ್ಯದ ಮೇಲೆ ಬಹುಮನಿ ಸುಲ್ತಾನರು ದಾಳಿ ಮಾಡಿದಾಗ ವಿಜಯನಗರ ಸಾಮ್ರಾಜ್ಯ ಪತನಗೊಳ್ಳದಿದ್ದರೆ ಲಿಂಗಾಯತ ಧರ್ಮ ಇಂದಿಗೆ ತಲೆ ಎತ್ತಲು ಸಾಧ್ಯವಾಗುತ್ತಿರಲಿಲ್ಲ ವಿಜಯನಗರ ಸಾಮ್ರಾಜ್ಯ ಪತನವಾದ ಕಾಲದಲ್ಲಿ ಯಡಿಯೂರಿನಲ್ಲಿ ಸಿದ್ದಲಿಂಗೇಶ್ವರರು ಹುಟ್ಟಿದ್ದು ಇಲ್ಲಿಂದ ಗದುಗಿನವರೆಗೆ ತೆರಳಿ ಲಿಂಗಾಯತ ಮಠಗಳನ್ನು ಪುನರ್ಜೀವನಗೊಳಿಸಿ ಶಕ್ತಿ ತುಂಬಿದರು ಇಲ್ಲದಿದ್ದರೆ ಇಂದಿಗೆ ಲಿಂಗಾಯತ ಸಮುದಾಯ ಉಳಿಯುತ್ತಿರಲಿಲ್ಲ ಎಂದರು

ಇದೆ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಆರು ಮಂದಿಯನ್ನು ಗುರುತಿಸಿ ಸಮ್ಮೇಳನದಲ್ಲಿ ಸರ್ವ ಸದಸ್ಯರಿಂದ ಸನ್ಮಾನಿಸಿ ಅಭಿನಂದಿಸಲಾಯಿತು

ಕಾರ್ಯಕ್ರಮದಲ್ಲಿ ತೋಂಟದಾರ್ಯ ಅನುಭವ ಮಂಟಪ ಆಳಂದ ಕಲ್ಬುರ್ಗಿಯ ಶ್ರೀ ಪಾರಣೇಶ್ವರ ಸ್ವಾಮೀಜಿ ಶಾಸಕ ಡಾ, ರಂಗನಾಥ್. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ಕರ್ನಾಟಕ ಸಾಹಿತ್ಯ ಆಕಾಡೆಮಿ ಬೆಂಗಳೂರು ಅಧ್ಯಕ್ಷರಾದ ಎಲ್.ಎನ್ ಮುಕುಂದರಾಜ್ ಸಾಹಿತಿ ಹಾಗೂ ಸಂಘಟಕಿ ಡಾ. ಬಿ.ಸಿ ಶೈಲಾ ನಾಗರಾಜ್ ತುಮಕೂರು.ಚಲನಚಿತ್ರ ನಟರಾದ ಡಾ.ಚಿಕ್ಕಜಾಜಿ ಮಹಾದೇವ್.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತುಮಕೂರು ಜಿಲ್ಲಾಧ್ಯಕ್ಷರಾದ ಡಾ.ವಿಜಯಕುಮಾರ. ತಾಲೂಕು ಅಧ್ಯಕ್ಷರಾದ ಡಾ.ಸೌಮ್ಯ ಹೋಬಳಿ ಅಧ್ಯಕ್ಷರಾದ ಸಿದ್ದೇಶ್ ಕುಮಾರ್ ವೈ.ಟಿ ಸೇರಿದಂತೆ ಹಲವು ಸಾಹಿತಿಗಳು ಶರಣರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು @publicnewskunigal