ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದಿದ್ದ ಎರಡುವರೆ ತಿಂಗಳ ಮಗು ಸಾವು!

Spread the love

ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಪಡೆದಿದ್ದ ಎರಡುವರೆ ತಿಂಗಳ ಗಂಡು ಮಗು ಸಾವು‌ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆಯ ಬಳಿ ಪೋಷಕರ ಆಕ್ರಂದನ

ತುಮಕೂರು ಜಿಲ್ಲೆ,ಕುಣಿಗಲ್ ತಾಲೂಕಿನ ಸಿಂಗೋನಹಳ್ಳಿ ಗ್ರಾಮದ ಚೈತ್ರ ಹಾಗೂ ಮುರಳಿ ದಂಪತಿಯ ಎರಡುವರೆ ತಿಂಗಳಿನ ದಕ್ಷಿತ್ ಗೆ ಗುರುವಾರ ಭಕ್ತರಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಂದುವರೆ ತಿಂಗಳಿನ ಪೆಂಟಾ ಎಂಬ ಚುಚ್ಚುಮದ್ದು ಸೆರಿದಂತೆ ಮೂರು ಲಸಿಕೆ ಹಾಗೂ ಪೊಲಿಯೊ ಹನಿ ಕೊಡಿಸಲಾಗಿತ್ತು ಇದಾದ ಬಳಿಕ ಆಸ್ಪತ್ರೆಯಲ್ಲಿ ಆರ್ಧ ಗಂಟೆಗಳ ಕಾಲ ವೈದ್ಯರು ನಿಗಾ ವಹಿಸಿ ಯಾವುದೆ ಅಡ್ಡ ಪರಿಣಾಮ ಕಾಣದ ಕಾರಣ ಮಗುವನ್ನು ಮನೆಗೆ ಕಳುಹಿಸಿದ್ದಾರೆ ಇದಲ್ಲದೆ ಗುರುವಾರ ಒಟ್ಟು ಐದು ಮಕ್ಕಳಿಗೆ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗಿದೆ ಆಸ್ಪತ್ರೆಯಿಂದ ಮನೆಗೆ ಬಂದ ನಂತರ ಮಗು ಹಾಲು ಕುಡಿದು ಮಲಗಿತ್ತು ಆದರೆ ಶುಕ್ರವಾರ ಬೆಳಗಿನಜಾವ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಕುಟುಂಭಸ್ತರು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತರುವ ವೇಳೆಗೆ ಮಗು ಸಾವನ್ನಪ್ಪಿದೆ ಆದರೆ ವೈದ್ಯರ ಯಡವಟ್ಟಿನಿಂದಲೇ ಮಗು ಸಾವನ್ನಪ್ಪಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಆಸ್ಪತ್ರೆಯ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ನಿನ್ನೆ ಚೈತ್ರಾ ಎಂಬುವರ ಮಗು ಸೆರಿದಂತೆ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ಐದು ಮಕ್ಕಳಿಗೆ ಫೆಂಟಾ ವ್ಯಾಕ್ಸಿನೇಷನ್‌ ಮಾಡಲಾಗಿದೆ ಐದು ಮಕ್ಕಳ ಫೈಕಿ ಈ ಮಗು ಕೂಡಾ ವ್ಯಾಕ್ಸಿನೇಷನ್‌ ಹಾಕಿಸಿಕೊಂಡಿದೆ.ಇನ್ನುಳಿದ ನಾಲ್ಕು ಮಕ್ಕಳಿಗೆ ಯಾವುದೇ ತೊಂದರೆ ಆಗಿಲ್ಲ.ಈ ಬಗ್ಗೆ ತಾಯಿಯನ್ನ ವಿಚಾರ ಮಾಡಿದಾಗ,ನಿನ್ನೆ ಸಂಜೆ 4 ಗಂಟೆಯಲ್ಲಿ ಮಗು ಅಳೋದಕ್ಕೆ ಶುರುಮಾಡಿದೆ.ಮತ್ತೆ ಅಳು ನಿಲ್ಲಿಸಿ ಮಲಗಿದೆ.ಇವತ್ತು ಬೆಳಗ್ಗಿನಜಾವ 4 ಗಂಟೆಯಲ್ಲಿ ಮಗು ಜಾಸ್ತಿ ಅಳ್ತಿದೆ ಅಂತ ಮಗುವಿಗೆ ತಾಯಿ ಹಾಲು ಕುಡಿಸಿ ಮಲಗಿಸಿದ್ದಾರೆ.ಅವಾಗ ಮಗುವಿಗೆ ಉಸಿರಾಟದ ತೊಂದರೆಯಾಗಿದೆ.ಇದ್ದಕ್ಕಿದ್ದಂತೆ ಮಗು ಸಾವನ್ನಪ್ಪಿದೆ ಅಂತ ಮಗುವಿನ ತಾಯಿ ಹೇಳಿಕೆ ಕೊಟ್ಟಿದ್ದಾರೆ.ಅವರು ಕೂಡಲೇ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ.ಆದರೆ ಮಗು ಮರಣ ಹೊಂದಿರೋದು ಕಂಡುಬಂದಿದೆ.ಈ ಎಲ್ಲಾ ಮಾಹಿತಿಯನ್ನ ಕಲೆಹಾಕಿ ಮೇಲಾಧಿಕಾರಿಗಳ‌ ಗಮನಕ್ಕೆ ತಂದಿದ್ದು ಮಗುವಿನ ಮೃತ ದೇಹವನ್ನು ಮರಣೋತ್ತರ ಪರಿಕ್ಷೇಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಕುಣಿಗಲ್ THO ಡಾ ಮರಿಯಪ್ಪ ತಿಳಿದ್ದಾರೆ,@publicnewskunigal