
ನ್ಯಾಯಾಲಯದ ಆದೇಶ ಅನ್ವಯ ವಿವಿಧ ಪ್ರಕರಣಗಳ ಅಡಿಯಲ್ಲಿ ವಶಪಡಿಸಿಕೊಂಡಿರುವ 50 ದ್ವಿಚಕ್ರ ವಾಹನಗಳನ್ನು ಜನವರಿ 4 ರಂದು ಶನಿವಾರ ಬಹಿರಂಗ ಹರಾಜು ಮಾಡಲಾಗು ವುದೆಂದು ಸಿಪಿಐ ಎಸ್.ಬಿ.ನವೀನ್ ಗೌಡ ತಿಳಿಸಿದ್ದಾರೆ!
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಡಿಯಲ್ಲಿ ಅಮಾನತು ಪಡಿಸಿಕೊಂಡಿರುವ ವಾರಸುದಾರರಿಲ್ಲದ ಸುಮಾರು 50 ದ್ವಿಚಕ್ರ ವಾಹನಗಳನ್ನು ಕ್ರಮ ಬದ್ಧತೆಯಂತೆ ವಿಲೇವಾರಿ ಮಾಡುವ ಸಲುವಾಗಿ ಗೌರವಾನ್ವಿತ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಕೆಎಂಎಫ್‌ಸಿ ಕುಣಿಗಲ್ ನ್ಯಾಯಾಲಯದ ಆದೇಶ ಪಡೆದುಕೊಂಡು ಕರ್ನಾಟಕ ರಾಜ್ಯ ಪತ್ರದಲ್ಲಿ ಮೇ 27 ರಂದು ಪ್ರಕಟಿಸಲಾಗಿರುತ್ತದೆ, ಅದ್ದುದರಿಂದ ಸದರಿ 50 ದ್ವಿಚಕ್ರ ವಾಹನಗಳನ್ನು ಜನವರಿ 4ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಪೊಲೀಸ್ ಠಾಣಾ ಆವರಣದಲ್ಲಿ ಸಾರ್ವಜನಿಕ ಬಹಿರಂಗ ಹರಾಜು ಮಾಡಲಾಗುವುದು ಆಸಕ್ತಿ ಇರುವ ಸಾರ್ವಜನಿಕರು ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದೆಂದು ಸಿಪಿಐ ನವೀನ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.@publicnewskunigal