
ಮೊಲ ಹಿಡಿಯುವ ನೆಪದಲ್ಲಿ ತೋಟದ ಮನೆಗೆ ನುಗ್ಗಿ ದರೋಡೆ ಮಾಡಿ ಲಕ್ಷಾಂತರ ರೂಪಾಯಿಯ ಬೆಲೆ ಬಾಳುವ ಚಿನ್ನಾಭರಣ ಮತ್ತು ಹಣ ದೋಚಿ ಮಾಲೀಕನ ಮೇಲೆ ಹಲ್ಲೆ ನಡೆಸಿ ಪರಾರಿ!
ಬೆಳ್ಳಂಬೆಳಗ್ಗೆ ಮೊಲ ಹಿಡಿಯುವ ನೆಪದಲ್ಲಿ ಗ್ರಾಮಕ್ಕೆ ಬಂದಿದ್ದ ದರೋಡೆಕೊರರು ತೋಟದಲ್ಲಿದ್ದ ಒಂಟಿ ಮನೆಗೆ ನುಗ್ಗಿ ದರೋಡೆಮಾಡಿ ಮನೆ ಮಾಲೀಕ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ತಾಲೂಕಿನ ದೊಡ್ಡಮಧುರೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ,
ಮೊಲ ಹಿಡಿಯಲು ಬಲೆ ಬಿಟ್ಟಿದ್ದೇವೆ ಎಂದು ಎಂಟ್ರಿ ಕೊಟ್ಟ ಮೂವರು ದರೋಡೆಕೊರರು ದೊಡ್ಡಮಧುರೆ ಗ್ರಾಮದ ಚನ್ನೇಗೌಡ ಎಂಬುವರ ಮನೆಯ ಬಳಿ ಬಂದು ಮೊಲ ಬೇಕಾ ಎಂದು ಚನ್ನೇಗೌಡನ ಪತ್ನಿಯನ್ನು ಕೆಳಿದ್ದಾರೆ ಮನೆಯಲ್ಲಿ ನಮ್ಮ ಮನೆಯವರಿದ್ದಾರೆ ಅವರನ್ನು ಕೇಳಿ ಎಂದು ಹಾಲನ್ನು ತರಲು ತೆರಳಿದ್ದಾರೆ ಬಳಿಕ ಮನೆಯ ಬಳಿ ಬಂದು ಯಾರು ಇಲ್ಲದನ್ನು ಗಮನಿಸಿದ ಖದೀಮರು ಮನೆಯಲ್ಲಿದ್ದ ಚನ್ನೇಗೌಡ (75) ನನ್ನು ಬೆದರಿಸಿ ರಾಡ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಮನೆಯಲ್ಲಿದ್ದ ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ ಗಾಯಗೊಂಡಿದ್ದ ಚನ್ನೆಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್ ಪಿಎಸ್ಐ ಶಮಂತ್ ಗೌಡ ತಂಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal