KUNIGAL |ಫೆಂಟಾ ಲಸಿಕೆ ಪಡೆದಿದ್ದ ನವಜಾತ ಶಿಸುಗಳ ಸರಣಿ ಸಾವು ಪೋಷಕರಲ್ಲಿ ಆತಂಕ!

Spread the love

ವೈದ್ಯ ಶಾಸಕರು ಹಾಗೂ ವೈದ್ಯ ಸಂಸದರ ತವರು ಕ್ಷೇತ್ರದಲ್ಲಿ ಮಕ್ಕಳ ಜೀವಕ್ಕಿಲ್ಲ ಖಾತ್ರಿ ಫೆಂಟಾ ಲಸಿಕೆ ಪಡೆದಿದ್ದ ನವಜಾತ ಶಿಸುಗಳ ಸರಣಿ ಸಾವು ಪೋಷಕರಲ್ಲಿ ಹೆಚ್ಚಿದ ಆತಂಕ!

ಕುಣಿಗಲ್ ತಾಲೂಕಿನಲ್ಲಿ ಫೆಂಟಾ ಲಸಿಕೆ ಪಡೆದು ಎರಡುವರೆ ತಿಂಗಳ ಮಗು ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ವರದಿಯಾಗಿದ್ದು ನವಜಾತ ಶಿಶುಗಳನ್ನು ಹೊಂದಿರುವ ಪೋಷಕರ ಆತಂಕಕ್ಕೆ ಕಾರಣವಾಗಿದೆ ಕಳೆದು ಗುರುವಾರ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಹೊಸ ಬಡಾವಣೆಯ ನಿವಾಸಿ ವಿನೋದ್ ಮತ್ತು ರಂಜಿತಾ ದಂಪತಿಯ ಎರಡು ತಿಂಗಳ ಹೆಣ್ಣು ಮಗು ಯಶಿಕಾಗೆ ಗುರುವಾರ ಫೆಂಟಾ ಲಸಿಕೆ ಹಾಕಲಾಗಿತ್ತು ಶುಕ್ರವಾರ ಮಗುವಿನ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆ ಸ್ಥಳೀಯ ಆಸ್ಪತ್ರೆಯ ಮಕ್ಕಳ ತಜ್ಞರ ಸಲಹೆ ಮೇರೆಗೆ ಮಗುವನ್ನು ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮಗು ಮೃತಪಟ್ಟಿದ್ದು ಕುಣಿಗಲ್ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಶನಿವಾರ ಬೆಳಗ್ಗೆ ಮಗುವಿನ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಪೋಷಕರು ತಿಳಿಸಿದ್ದಾರೆ

WHO ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿ ಮೈಸೂರಿನ ಡಾ.ಸುಧೀರ್ ನಾಯಕ್, ಜಿಲ್ಲಾ ನೋಡಲ್ ಅಧಿಕಾರಿ ಡಾ.ಮೋಹನ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ತಂಡ ನಗರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಯೋಗಾಲಯದ ವರದಿ ಬಂದ ನಂತರ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ

ತಾಲ್ಲೂಕಿನಲ್ಲಿ ಎರಡು ಪ್ರಕರಣ ವರದಿಯಾದ ಬೆನ್ನಲ್ಲೇ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ರಾಜ್ಯ ನೋಡಲ್ ಅಧಿಕಾರಿಗಳು ಶನಿವಾರ ಭಕ್ತರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಕ್ಕೂ ಭೇಟಿ ನೀಡಿ ಲಸಿಕೆಯ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ

ವೈದ್ಯ ಶಾಸಕರು ಹಾಗೂ ವೈದ್ಯ ಸಂಸದರ ತವರು ಕ್ಷೇತ್ರದಲ್ಲಿ ಮಕ್ಕಳ ಜೀವಕ್ಕೆ ಖಾತ್ರಿ ಇಲ್ಲದಂತಾಗಿದೆ ಎಂಬೆಲ್ಲಾ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವರೆ ಕಾದು ನೋಡಬೇಕಿದೆ! @publicnewskunigal