
ಪ್ರಾಧ್ಯಾಪಕನ ವರ್ತನೆಗೆ ಬೆಸತ್ತ ವಿದ್ಯಾರ್ಥಿಗಳು ಮುಚ್ಚುವ ಅಂತ ತಲುಪಿದ ಪದವಿಪೂರ್ವ ಕಾಲೇಜು ಪರೀಕ್ಷೆ ಸಮೀಪಿಸಿದ್ದರು ಪೂರ್ಣಗೊಳ್ಳದ ಪಾಠ ಮಕ್ಕಳ ಗೋಳು ಕೇಳುವರ್ಯಾರು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಚೌಡನಕುಪ್ಪೆ ಗ್ರಾಮದಲ್ಲಿರುವ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸಮಯಕ್ಕೆ ಸರಿಯಾಗಿ ಬಂದು ಕರ್ತವ್ಯ ನಿರ್ವಹಿಸದ ಪ್ರಾಧ್ಯಾಪಕನಿಗೆ ಮೂರು ಹುದ್ದೆಯ ಜವಾಬ್ದಾರಿಯನ್ನು ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದೆ,ಕಳೆದ ಐದು ತಿಂಗಳುಗಳ ಹಿಂದೆ ಇದೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು ವರ್ಗವಣೆಯಾದ ಬಳಿಕ ಕಾಲೇಜಿನಲ್ಲಿ ಹೆಚ್ಚುವರಿಯಾಗಿ ಪ್ರಾಂಶುಪಾಲರ ಹಾಗೂ ಗುಮಾಸ್ತನ ಹುದ್ದೆಯನ್ನು ನಿರ್ವಹಿಸುತ್ತಿರುವ ಇತಿಹಾಸ ಪ್ರಾಧ್ಯಾಪಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸುರೇಶ್ ಕುಮಾರ್ ಸರಿಯಾದ ಸಮಯಕ್ಕೆ ಕಾಲೇಜಿಗೆ ಬಾರದ ಕಾರಣ ವಿದ್ಯಾರ್ಥಿಗಳು ಪಾಠದಿಂದ ಹಿಂದೆ ಉಳಿಯುವಂತಾಗಿದೆ
ಫೆಬ್ರವರಿ ಹಾಗೂ ಮಾರ್ಚಿ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭವಾಗಲಿದ್ದು ಆದರೆ ಇತಿಹಾಸದ ಪಾಠ ಇನ್ನೂ ಪೂರ್ಣಗೊಂಡಿಲ್ಲ ಬೇಕಾದಂತೆ ಕಾಲೇಜಿಗೆ ಬರುವ ಪ್ರಾಧ್ಯಾಪಕ ಹಾಗೂ ಪ್ರಭಾರ ಪ್ರಾಂಶುಪಾಲನ ವಿರುದ್ದ ವಿದ್ಯಾರ್ಥಿಗಳು ಹಾಗೂ ಸ್ಥಳಿಯರಿಂದ ಸಾಕಷ್ಟು ದೂರುಗಳು ಕೇಳಿಬಂದಿವೆ ಚೌಡನಕುಪ್ಪೆ ಗ್ರಾಮದಲ್ಲಿ 2007 ರಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಲಾಯಿತು ಕಾಲೇಜು ಪ್ರಾರಂಭವಾದ ದಿನಗಳಲ್ಲಿ 60 ರಿಂದ 70/90 ವಿದ್ಯಾರ್ಥಿಗಳ ವರೆಗೆ ದಾಖಲಾತಿಯಾಗುತ್ತಿದ್ದ ಕಾಲೇಜಿನಲ್ಲಿ ಇಂದು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕುಸಿತ ಕಂಡಿದೆ ಪ್ರಸ್ತುತ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಯಲ್ಲಿ ಹತ್ತು ಮಕ್ಕಳು

ಹಾಗೂ ದ್ವಿತೀಯ ಪಿಯುಸಿಯಲ್ಲಿ ಆರು ಮಕ್ಕಳು ಕಲಿಯುತ್ತಿದ್ದಾರೆ ನಾಲ್ಕು ಮಂದಿ ಅಥಿತಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಭಾರ ಪ್ರಾಂಶುಪಾಲನ ವರ್ತನೆಯಿಂದ ಎಲ್ಲರು ಬೆಸತ್ತಿದ್ದಾರೆ ಇದಲ್ಲದೆ ಇಬ್ಬರು ವಿದ್ಯಾರ್ಥಿಗಳು ಕಾಲೇಜು ತೊರೆದಿದ್ದಾರೆ ಕ್ಷುಲ್ಲಕ ಕಾರಣಕ್ಕೆ ಮಕ್ಕಳ ಮೇಲೆ ಹಲ್ಲೆ ಮಾಡಿದ ಕಾರಣ ಅವರು ಕಾಲೇಜಿಗೆ ಬರುತ್ತಿಲ್ಲ ಎಂದು ಸಹಪಾಠಿಗಳು ಆರೋಪಿಸಿದ್ದಾರೆ ಕಾಲೇಜಿನಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಾಂಶುಪಾಲರು ಪ್ರಾಧ್ಯಪಕನ ಅನುಚಿತ ವರ್ತನೆಗೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಶಿಸ್ತು ಕ್ರಮ ಕೈಗೊಳ್ಳುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಿಗೆ ಹಲವು ಭಾರಿ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರು ಆದರೆ ಇದುವರೆಗೆ ಕ್ರಮವಾಗಿಲ್ಲ ಬದಲಿಗೆ ಯಾರ ವಿರುದ್ದ ಆರೋಪ ಕೇಳಿಬಂದಿತ್ತೊ ಅವರನ್ನೆ ಇಗ ಕಾಲೇಜಿಗೆ ಪ್ರಾಂಶುಪಾಲರನ್ನಾಗಿ ನೇಮಿಸಲಾಗಿದೆ ಕಾಲೇಜು ಅವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ ಇನ್ನಾದರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತೆ ಮಾಡಬೇಕಿದೆ ಕಾಲೇಜು ಅವ್ಯವಸ್ಥೆಗೆ ಕಾರಣ ಕರ್ತರಾದ ಪ್ರಾಧ್ಯಾಪಕನ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕಿದೆ ಎಂದು ಸ್ಥಳಿಯರ ಆಗ್ರಹವಾಗಿದೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ಶುಚಿತ್ವ ಯೋಜನೆಯಡಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಬಳಸಲು ವರ್ಷದಲ್ಲಿ ಎರಡು ಭಾರಿ ಸ್ಯಾನಿಟರಿ ಪ್ಯಾಡ್ ಗಳನ್ನು ಉಚಿತವಾಗಿ ನಿಡುವಂತಹ ಯೋಜನೆಯನ್ನು ಜಾರಿಗೆ ತರಲಾಗಿದ್ದು ಎಲ್ಲಾ ಕಡೆಗೂ ಹೆಣ್ಣುಮಕ್ಕಳಿಗೆ ಉಚಿತವಾಗಿ ವಿತರಿಸಲಾಗುತ್ತಿದೆ ಆದರೆ ಕಾಲೇಜಿನಲ್ಲಿರುವ ವಿದ್ಯಾರ್ಥಿನಿಯರಿಗೆ ಒಂದೆರಡು ಪ್ಯಾಡ್ ಗಳನ್ನು ನೀಡಿ ಉಳಿದ ಸ್ಯಾನಿಟರಿ ನ್ಯಾಪ್ ಕೀನ್ ಗಳನ್ನು ಪ್ರಾಧ್ಯಾಪಕ ಸುರೇಶ್ ಕುಮಾರ್ ಮನೆಗೆ ಹೊತ್ತೊಯ್ದಿದ್ದಾರೆ.ಇದ್ದಲ್ಲದೆ ಕಾಲೇಜಿನಲ್ಲಿ ನಮ್ಮನ್ನು ಏಕವಚನ ಬಳಸಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ ಇದಲ್ಲದೆ ದಾಖಲಾತಿ ಶುಲ್ಕ ಹೊರತು ಪಡಿಸಿ ಬೆರೆ ಬೆರೆ ಚಟುವಟಿಕೆಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಎಂದು ವಿದ್ಯಾರ್ಥಿನಿಯರು ಅಸಮಾಧಾನ ವ್ಯಕ್ತಪಡಿಸಿದರು
ಕಳೆದೊಂದು ತಿಂಗಳ ಹಿಂದೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಕಾಲೇಜಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ಗೊಂಡ ಕಾಲೇಜು ವಿದ್ಯಾರ್ಥಿಗಳು ಕರೆ ಮಾಡಿ ದೂರು ನೀಡಿದಕ್ಕೆ ಮರು ದಿನ ಕಾಲೇಜಿಗೆ ಬಂದ ಪ್ರಾಧ್ಯಾಪಕ ಸುರೇಶ್ ಕುಮಾರ್ ನನ್ನ ವಿರುದ್ದ ಉಪ ನಿರ್ದೇಶಕರಿಗೆ ದೂರು ನೀಡಿದವರು ಯಾರು ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ಚೆನ್ನಾಗಿ ತಳಿಸಿರುವ ಆರೋಪವು ಕೇಳಿಬಂದಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದ್ದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಎಲ್ಲಾವನ್ನು ತಿಳಿದಿದ್ದರು ಸಹ ಕಣ್ಮುಚ್ಚಿ ಕುಳಿತಿದ್ದಾರೆ!
ಸ್ಥಳಿಯ ಸುದ್ದಿಗಳಿಗೆ ನಮ್ಮ ಪೆಜ್ ಪಾಲೋ ಮಾಡಿ ಪ್ರೋತ್ಸಾಹಿಸಿ www.kunigalnews.com