
ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಬ್ರಹ್ಮರಥೋತ್ಸವ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಇತಿಹಾಸ ಪ್ರಸಿದ್ಧ ಶ್ರೀ ಹೇಮಗಿರಿ ವರದರಾಜ ಸ್ವಾಮಿಯ ಭ್ರಹ್ಮರಥೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಕಾರ್ಯಕ್ರಮದಲ್ಲಿ ಭಾಗಿಯಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮಿಜಿಯವರು ರಥದ ಚಕ್ರಕ್ಕೆ ತೆಂಗಿನ ಕಾಯಿ ಹೊಡೆದು ಪೂಜೆ ಸಲ್ಲಿಸುವ ಮೂಲಕ ರಥೋತ್ಸವ ಕ್ಕೆ ಚಾಲನೆ ನೀಡಿದರು ಜಾತ್ರಮಹೊತ್ಸವ ಪ್ರಯುಕ್ತ ಶ್ರೀ ಹೇಮಗಿರಿ ವರದರಾಜ ಸ್ವಾಮಿಗೆ ವಿಷೇಶ ಹೂವಿನಿಂದ ಸಿಂಗರಿಸಿ ಅಲಂಕಾರ ಮಾಡಲಾಗಿತ್ತು ಐವತ್ತು ಸಾವಿರಕ್ಕೂ ಅಧಿಕಮಂದಿ ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾಗಿದ್ದರು ಜಾತ್ರಮಹೊತ್ಸವದಲ್ಲಿ ಭಾಗಿಯಾಗಿದ್ದ ಭಕ್ತರು ತೆಂಗಿನಕಾಯಿ.ಬಾಳೆಹಣ್ಣು.ಕಜ್ಜಾಯಾ.ಹಾಗೂ ಬಗೆ ಬಗೆಯ ಹಣ್ಣುಗಳಿಂದ ಪ್ರಸಾದ ತಯಾರಿಸಿ ರಥದ ಮುಂಭಾಗದಲ್ಲಿ ಮಣೆವು ಹಾಕಿದರು ಗೋವಿಂದ ಗೋವಿಂದ ಎನ್ನುವ ಮೂಲಕ ರಥಕ್ಕೆ ಹೂವು ಹಣ್ಣು ಬಿರುವ ಮೂಲಕ ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು
ರಥೋತವದ ವೇಳೆ ವರುಣನ ಸಿಂಚನ ಜಾತ್ರಮಹೊತ್ಸವದವೇಳೆ ಸಣ್ಣ ಸಣ್ಣ ಹನಿಗಳ ಮೂಲಕ ವರುಣ ಸಿಂಚನವಾಗುತ್ತಿದ್ದಂತೆ ಭಕ್ತರು ಹರ್ಷ ವ್ಯಕ್ತಪಡಿಸಿದರು ಜಾತ್ರಮಹೊತ್ಸವದ ಭದ್ರತೆಗಾಗಿ 150 ಕ್ಕೂ ಅಧಿಕ ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು ಯಾವುದೆ ಅಹಿತಕರ ಘಟನೆಯ ಸಂಭವಿಸದಂತೆ ಭದ್ರತೆ ಕೈಗೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಶಾಸಕ ಡಾ.ರಂಗನಾಥ್.ಸಂಸದ ಡಾ.ಸಿ.ಎನ್ ಮಂಜುನಾಥ್.ಸ್ಪಠಿಕಪುರಿ ಶ್ರೀ ನಂಜಾವದೂತ ಸ್ವಾಮೀಜಿ.ಅರೆಶಂಕರ ಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ.ಬಿಜೆಪಿ ಮುಖಂಡ ರಾಜೇಶ್ ಗೌಡ.ಜೆಡಿಎಸ್ ಮುಖಂಡ ಬಿ.ಎನ್ ಜಗದೀಶ್.ತಹಶೀಲ್ದಾರ್ ರಶ್ಮಿ.ಯು ಉಪ ತಹಶೀಲ್ದಾರ್ ರುದ್ರಾಣಮ್ಮ.ಕಂದಾಯಧಿಕಾರಿ ಪುರುಷೋತ್ತಮ್.ಹಾಗೂ ಕಂದಾಯ ಇಲಾಖೆಯ ಆಧಿಕಾರಿಗಳು ಸಿಬ್ಬಂದಿವರ್ಗ ಸೆರಿದಂತೆ ಸಾವಿರಾರು ಮಂದಿ ಭಕ್ತರು ಜಾತ್ರಮಹೊತ್ಸವದಲ್ಲಿ ಭಾಗಿಯಾಗಿದ್ದರು
ಸ್ಥಳಿಯ ಸುದ್ದಿ ಮತ್ತು ಜಾಹೀರಾತಿಗೆ ನಮ್ಮ ಪೇಜ್ ಪಾಲೊ ಮಾಡಿ ಪ್ರೋತ್ಸಾಹಿಸಿದ www.kunigalnews.com