ಕಾಂಗ್ರೆಸ್ ತೆಕ್ಕೆಗೆ ಸೇರಿದ ಯಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ!

Spread the love

ಕಾಂಗ್ರೆಸ್ ತೆಕ್ಕೆಗೆ ಯಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಗೆ ಮುಖಭಂಗ!

ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಕೋಘಟ್ಟ ರಾಜಣ್ಣ ಸಾಲಗಾರರ ಕ್ಷೇತ್ರದಿಂದ ಕಪನಯ್ಯ,ಗಂಗಶಾನಯ್ಯ,ಚಂದ್ರಪ್ಪ ಕೆ.ಹೆಚ್ ವಸಂತಕುಮಾರ್ ಕೆ.ಜಿ, ಶಿವಣ್ಣ, ಹೊನ್ನೇಗೌಡ ವೈ.ಎನ್, ಮಹಿಳಾ ಮೀಸಲು ಕ್ಷೇತ್ರದಿಂದ ನಯನ ಹಾಗೂ ರತ್ನಮ್ಮ,ಹಿಂದುಳಿದ ವರ್ಗ ಕ್ಷೇತ್ರದಿಂದ ಮಹಮದ್ ಸಮಿವುಲ್ಲಾ ಚುನಾವಣೆಯಲ್ಲಿ ಹೆಚ್ಚು ಮತ ಪಡೆದು ಜಯಗಳಿಸಿದ್ದಾರೆ ಈ ಬಾರಿಯು ಸಹ ಕಾಂಗ್ರೆಸ್ ಬೆಂಬಲಿತರು ಚುನಾವಣೆಯಲ್ಲಿ ಮೆಲುಗೈ ಸಾಧಿಸಿದ್ದು

ಯಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ ಸೇರಿದೆ ಒಟ್ಟು 1350 ಮತದಾರರಿದ್ದು 1225 ಮತಗಳು ಚಲವಣೆಯಾಗಿದೆ ಕಳೆದ ಬಾರಿ ಚುನಾವಣೆಯಲ್ಲಿ ಮತ ಚಲಾಯಿಸುವ ವೇಳೆ ಮಾತಿನ ಚಕಮಕಿ ನಡೆದು ಘಟನೆ ಕೈಕೈ ಮಿಲಾಯಿಸುವ ಹಂತ ತಲುಪಿದ್ದ ಕಾರಣ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು ಆದರೆ ಈ ಭಾರಿ ಚುನಾವಣೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಕುಣಿಗಲ್ ಸಿಪಿಐ ನವೀನ್‌ಗೌಡ ನೆತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು ಈ ವೇಳೆ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ ಹಾಗೂ ಪಿಎಸ್ಐ ಕೃಷ್ಣಕುಮಾರ್,ಎಎಸ್ಐ ಪ್ರಕಾಶ್, ಶ್ರೀಧರ್ ಸೇರಿದಂತೆ ಸ್ಥಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸಿಬ್ಬಂದಿಗಳು ಇದ್ದರು ಜಯ ಗಳಿಸಿದ ಅಭ್ಯರ್ಥಿಗಳಿಗೆ ಮುಖಂಡರು ಸಿಹಿ ತಿನಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿದರು @publicnewskunigal