ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಸಂಬಂಧ ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಕುಣಿಗಲ್ ತಾಲ್ಲೂಕಿನ ಹಿಂದಿನ ತಹಶಿಲ್ದಾರ್ ಹಾಗೂ ಹುಲಿಯೂರುದುರ್ಗ ಗ್ರಾಮ ಪಂಚಾಯತಿ ಈ ಹಿಂದನ ಪಿಡಿಒಗೆ ಎರಡು ತಿಂಗಳು ಜೈಲು ಶಿಕ್ಷೆ ಹಾಗೂ ಎರಡು ಸಾವಿರ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿದೆ.
ಹುಲಿಯೂರುದುರ್ಗದ ಡಾಕ್ಟರ್ ಹೆಚ್.ಎಸ್ ಚಂದ್ರಶೇಖರ್ ಸೇರಿ 12 ಮಂದಿ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಬಿ, ವೀರಪ್ಪ ಹಾಗೂ ನ್ಯಾಯಮೂರ್ತಿ ವೆಂಕಟೇಶ್ ನಾಯಕ್ ಅವರಿದ್ದ ಪೀಠ ಈ ಆದೇಶ ಮಾಡಿದೆ, ಪ್ರಕರಣವೇನು ಹುಲಿಯೂರುದುರ್ಗದಲ್ಲಿ ಹಾದುಹೋಗಿರುವ ರಾಜ್ಯ ಹೆದ್ದಾರಿ ವಿಸ್ತರಣೆ ವೇಳೆ ಮನೆಗಳನ್ನು ತೆರವು ಮಾಡಲು ಮುಂದಾಗಿದ್ದ ಕ್ರಮ ಪ್ರಶ್ನಿಸಿ 2011ರಲ್ಲಿ ಅರ್ಜಿದಾರರು ಹೈಕೋರ್ಟ್ ಗೆ ತಕರಾರು ಸಲ್ಲಿಸಿದರು ಅರ್ಜಿ ವಿಚಾರ ನಡೆಸಿದ ಹೈಕೋರ್ಟ್ ತೆರವು ಕಾರ್ಯಚರಣೆ ಸಮಯದಲ್ಲಿ ಸೂಕ್ತ ಕಾನೂನು ಪ್ರಕ್ರಿಯೆ ಪಾಲನೆ ಮಾಡಬೇಕು ಒತ್ತುವರಿದಾರರಿಗೆ ನೋಟಿಸ್ ನೀಡಿ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಬೇಕು ಎಂದು ಜೂನ್ 22 2012 ರಲ್ಲಿ ಆದೇಶಿಸಿತ್ತು, ಹೀಗಿದ್ದರೂ ನ್ಯಾಯಾಲಯದ ಆದೇಶದ ವಿರುದ್ಧ ವಾಗಿ 2017ರಲ್ಲಿ ಕೆಲವು ಮನೆಗಳನ್ನು ತೆರೆವುಗೊಳಿಸಲಾಗಿತ್ತು ಇದರಿಂದ ಅರ್ಜಿದಾರರು ಹೈಕೋರ್ಟಿಗೆ ವಕೀಲ ರಮೇಶ್ ನೇತೃತ್ವದಲ್ಲಿ 12 ಮಂದಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದರು
ಹುಲಿಯೂರುದುರ್ಗ ಪಟ್ಟಣದ ಮುಖ್ಯ ರಸ್ತೆಯ ಅಗಲಿಕರಣ ಸಂಬಂಧ ಮನೆಗಳ ತೆರವು ವಿಚಾರದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಹೈಕೋರ್ಟ್ ನ ವಿಭಾಗೀಯ ಪೀಠ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ಮನೆಗಳನ್ನು ನೆಲಸಮಗೊಳಿಸಿರುವ ಅಂದಿನ ತಹಶಿಲ್ದಾರ್ ರಮೇಶ್ ಹಾಗೂ ಪಿಡಿಓ ಆರ್,ವಿನಾಯಕ್ ರವರಿಗೆ ಎರಡು ತಿಂಗಳು ಸಾಧಾರಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ ದಂಡ ಪಾವತಿಸಲು ವಿಫಲರಾದರೆ ಮತ್ತೆ ಒಂದು ತಿಂಗಳು ಸಾದ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟ ಪಡಿಸಿದೆ.
ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿರುವುದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡು ನ್ಯಾಯಾಲಯದ ಆದೇಶ ಉಲ್ಲಂಘನೆ ಆಕ್ರಮವಾಗಿ ತೆರವು ಕಾರ್ಯಚರಣೆ ನಡೆಸಿದ್ದಲ್ಲದೆ ಅರ್ಜಿದಾರರಿಗೆ ಉಂಟಾಗಿರುವ ನಷ್ಟ ಪರಿಹಾರವನ್ನು ಪಾವತಿಸಿಲ್ಲ ಸರ್ಕಾರಿ ಅಧಿಕಾರಿಗಳಾಗಿರುವ ಆರೋಪಿಗಳು ನ್ಯಾಯಾಲಯದ ಆದೇಶಗಳಿಗೆ ಬದ್ಧರಾಗಿರಬೇಕಿತ್ತು ಆದರೆ ಅವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಕಾನೂನು ಕೈಗೆ ತೆಗೆದುಕೊಂಡು ಕಟ್ಟಡಗಳನ್ನು ನೆಲಸಮಗೊಳಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಇದು ಸಾರ್ವಜನಿಕ ಆಡಳಿತದಲ್ಲಿ ಮಧ್ಯ ಪ್ರವೇಶಿಸಿದಂತೆ ಹಾಗೂ ನ್ಯಾಯಾಂಗವನ್ನು ಅಣಕಿಸಿದಂತೆ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.