
ಚಾಲಕನ ಕೈಕಾಲು ಕಟ್ಟಿ ಕಾರು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುಲ್ಲಿ ಅಮೃತೂರು ಪೊಲೀಸರು ಯಶಸ್ವಿಯಾಗಿದ್ದಾರೆ!
ಕುಣಿಗಲ್ ತಾಲ್ಲೂಕಿನ ಯಡಿಯೂರು ವ್ಯಾಪ್ತಿಯ ವೆಂಕಟೇಗೌಡನ ಪಾಳ್ಯ ಗ್ರಾಮದ ಬಳಿ ಜನವರಿ 26 ರಂದು ಕಾರಿನ ಚಾಲಕನ ಕೈ, ಕಾಲು ಕಟ್ಟಿ ಹಾಕಿ ಬಳಿಕ ಕಾರು ಅಪಹರಿಸಿಕೊಂಡು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಅಮೃತ್ತೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಮಂಡ್ಯ ಜಿಲ್ಲೆ ಪಾಂಡವಪುರ ಮೂಲದ ಹೇಮಂತ್ ಸಾಗರ್, ಲೋಹಿತ್ ಬಂಧಿತ ಆರೋಪಿಗಳು,

ಬೆಂಗಳೂರಿನ ಕೆಂಗೇರಿಯಲ್ಲಿ ಪಾಂಡವಪುರದ ಹೇಮಂತ್ ಸಾಗರ್ ಮತ್ತು ಲೋಹಿತ್ ಇಬ್ಬರು ಪಾಂಡವಪುರಕ್ಕೆ ಹೋಗಬೇಕಾಗಿದೆ ಎಂದು ಬಾಡಿಗೆಗೆ ಕಾರು ಪಡೆದು ಚಾಲಕ ಅಜರತ್ ಅಲಿಯೊಂದಿಗೆ ಬಾಡಿಗೆ ಮಾತನಾಡಿಕೊಂಡು ಚಾಲಕ ಅಜರತ್ ಅಲಿಯೊಂದಿಗೆ ಕಾರಿನಲ್ಲಿ ಬರುವಾಗ ಮಾರ್ಗಮಧ್ಯೆ ರಾಷ್ಟ್ರೀಯ ಹೆದ್ದಾರಿ 75ರ ವೆಂಕಟೆಗೌಡನಪಾಳ್ಯ ಗ್ರಾಮದ ಬಳಿ ಕಾರು ನಿಲ್ಲಿಸುವಂತೆ ಕಾರು ಚಾಲಕ ಅಜರತ್ ಅಲಿಗೆ ಆರೋಪಿಗಳು ತಿಳಿಸಿದ್ದಾರೆ ಚಾಲಕ ಕಾರು ನಿಲ್ಲಿಸಿದ ಬಳಿಕ ಆತನ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಬಳಿಕ ಆತನ ಕೈ, ಕಾಲು ಕಟ್ಟಿ ಹಾಕಿ ಕಾರಿಂದ ಚಾಲಕನನ್ನು ಎಸೆದು ಕಾರು ಸಮೇತ ಪರಾರಿಯಾಗಿದ್ದರು,
ಚಾಲಕ ನೀಡಿದ ದೂರಿನ ಅನ್ವಯ ಅಮೃತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ ಅಶೋಕ್,ಎಎಸ್ಪಿ ಅಬ್ದುಲ್ ಖಾದರ್, ವಿ.ಮರಿಯಪ್ಪ, ಡಿವೈಎಸ್ಪಿ ಟಿ.ಎ ಓಂಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಅಮೃತ್ತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್ ರವರ ನೇತೃತ್ವದ ಪೊಲೀಸರ ತಂಡ ಮೈಸೂರಿನಲ್ಲಿ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ತಿರುಗಾಡುತ್ತಿದ್ದರು,ಖಚಿತ ಮಾಹಿತಿ ಪಡೆದ ಪೊಲೀಸರು ಮದ್ದೂರಿನಲ್ಲಿ ಆರೋಪಿಗಳನ್ನು ಕಾರು ಸಹಿತ ವಶಕ್ಕೆ ಪಡೆದು ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮನವಿ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾ ಲಯವು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡಿದೆ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಶಮಂತ್ ಗೌಡ,ಸೆಬ್ಬಂದಿಗಳಾದ ಪ್ರಶಾಂತ್, ಬಾಹುಬಲಿ, ನಾರಾಯಣಸ್ವಾಮಿ, ಮಂಜುನಾಥ್, ರಂಗನಾಥ್, ರಾಮಕೃಷ್ಣ ಭಾಗಿಯಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ@publicnewskunigal