
ರಾಜ್ಯ ಹೆದ್ದಾರಿ 33ರಲ್ಲಿ ರಸ್ತೆ ಅಪಘಾತ ಯುವತಿ ಸ್ಥಳದಲ್ಲೇ ಸಾವು ಆಸ್ಪತ್ರೆಯ ಬಳಿ ಮುಗಿಲು ಮುಟ್ಟಿದ ಪೋಷಕರ ಆಕ್ರಂದನ!
ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಶನಿಮಹಾತ್ಮ ದೇವಾಲಯದ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬಾಗೇನಳ್ಳಿ ಗ್ರಾಮದ 16 ವರ್ಷದ ಇಂದುಶ್ರೀ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಜೆ ನಡೆದಿದೆ ಕುಣಿಗಲ್ ಪಟ್ಟಣದ ಸ್ಟೇಲ್ಲಾಮೇರಿಸ್ ಶಾಲೆಯಲ್ಲಿ ಎಸ್,ಎಸ್,ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಇಂದುಶ್ರೀ ಶಾಲೆಯಲ್ಲಿ ಸೋಮವಾರ ನಡೆದ ಬಿಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ ನಂತರ ಸಂಬಂಧಿ ಯೋಬ್ಬರ ಬೈಕ್ ನಲ್ಲಿ ಗ್ರಾಮಕ್ಕೆ ತೆರಳುವ ವೇಳೆ ಹಿಂಬದಿಯಿಂದ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ
ಬೈಕ್ ನಲ್ಲಿ ಕುಳಿತಿದ್ದ ಯುವತಿ ಕೆಳಗೆ ಬಿದ್ದಗಾ ಯುವತಿಯ ತಲೆ ಮೇಲೆ ಟ್ರ್ಯಾಕ್ಟರ್ ಚಕ್ರ ಹರಿದ ಪರಿಣಾಮ ಸ್ಥಳದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಡಲಾಗಿತ್ತು ಆಸ್ಪತ್ರೆಯ ಬಳಿ ಬಂದ ಯುವತಿಯ ತಂದೆ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಘಟನೆ ಸಂಭಂದ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಗ್ರಾಮದಲ್ಲಿ ಮಾರಮ್ಮ ದೇವಿಯ ಹಬ್ಬವಿದ್ದು ಯುವತಿಯ ಸಾವಿನಿಂದ ಸೂತಕದ ಚಾಯೆ ಮೂಡಿದ್ದು ಇದ್ದ ಒಬ್ಬ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮನ ಕಲಕುವಂತಿತ್ತು,
ಕಂಬನಿ ಮಿಡಿದ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆಸ್ಪತ್ರೆಯ ಬಳಿ ಬಂದ ಯವತಿಯ ಸಹಪಾಠಿಗಳು ಮೃತದೇಹ ಕಂಡು ಕಂಬನಿ ಮಿಡಿದರು @publicnewskunigal