
ನಿರ್ಜನ ಪ್ರದೇಶಕ್ಕೆ ಪ್ರೇಯಸಿಯನ್ನು ಕರೆದೊಯ್ದು ಹತ್ಯೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದ ಬಳಿ ದಿನಾಂಕ 03/02/2019 ರಂದು ಅಪರಿಚಿತ ಮಹಿಳೆಯ ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಕರಣವನ್ನ ಭೇಧಿಸುವಲ್ಲಿ ಯಶಸ್ವಿಯಾಗಿದ್ದರು
ತುಮಕೂರು ಜಿಲ್ಲೆಯ ಮಾನ್ಯ ಎರಡನೆ ಅಪರ ಸತ್ರ ನ್ಯಾಯಾಧೀಶರಾದ ಶ್ರೀಯುತ ಅನಂತ ಹೆಚ್ ರವರು ಪ್ರಕರಣದ ಆರೋಪಿ ಲೋಹಿತ್ ಅಲಿಯಾಸ್ ಬುಲ್ಲಿ ನನ್ನು ತಪ್ಪಿತಸ್ಥರೆಂದು ತೀರ್ಮಾನಿಸಿ ಕಲಂ 302 ಐಪಿಸಿ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಹಾಗೂ ರೂ.1,00,000/- ದಂಡ ಹಾಗೂ ಕಲಂ 201 ಐಪಿಸಿ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಹಾಗೂ ರೂ.10000/- ದಂಡದ ಕಠಿಣ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ
ಘಟನೆಯ ವಿವರ ಬೆಂಗಳೂರು ನಗರದ ಕಮಲ ನಗರದಲ್ಲಿ ವಾಸವಾಗಿದ್ದ ಅರ್ಪಿತಾ ಮತ್ತು ಲೋಹಿತ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸಿ ಇಬ್ಬರೂ ಒಟ್ಟಿಗೆ ಬಾಡಿಗೆ ಮನೆ ಮಾಡಿಕೊಂಡು 5-6 ತಿಂಗಳು ವಾಸವಾಗಿದ್ದರು ನಂತರ ಇಬ್ಬರ ನಡುವೆ ಅನ್ಯೋನ್ಯತೆ ಇಲ್ಲದಕಾರಣ ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದು ಈ ನಡುವೆ ಅರ್ಪಿತಳ ಅಣ್ಣ ಸಾಗರ್ ಮತ್ತು ಆತನ ಸ್ನೇಹಿತರು ಸೇರಿ ತಂಗಿಯ ವಿಷಯಕ್ಕೆ ಲೋಹಿತನ ಮೇಲೆ ಹಲ್ಲೆ ನಡೆಸಿದ್ದಾರೆ ಇದಾದ ಬಳಿಕ ಲೋಹಿತನು ಚಿಕಿತ್ಸೆ ಪಡೆದು ಗುಣಮುಖ ಹೊಂದಿ ದಿನಾಂಕ 02-02-2019 ರಂದು ಅರ್ಪಿತಾ ಕೆಲಸ ಮಾಡುತ್ತಿದ್ದ ಬೆಂಗಳೂರು ನಗರದ ಯಶವಂತಪುರದ ಶ್ರೀ ಗೌತಮ್ ಸರ್ವೀಸ್ ಸ್ಟೇಷನ್ ಗೆ ಪೆಟ್ರೋಲ್ ಬಂಕ್ ಗೆ ಬಂದು ತನ್ನ ದ್ವಿಚಕ್ರ ವಾಹನಕ್ಕೆ ಅರ್ಪಿತಳಿಂದ ಪೆಟ್ರೋಲ್ ಹಾಕಿಸಿಕೊಂಡು ಬಳಿಕ ಅರ್ಪಿತಳ ಕೆಲಸ ಮುಗಿದ ನಂತರ ಸಂಜೆ ಸುಮಾರು 5-30 ರಲ್ಲಿ ಲೋಹಿತ್ ತನ್ನ ದ್ವಿಚಕ್ರ ವಾಹನದಲ್ಲಿ ಅರ್ಪಿತಳನ್ನು ಕರೆದುಕೊಂಡು ಹಲವು ಕಡೆಗಳಲ್ಲಿ ಸುತ್ತಾಡಿಸಿ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಮಾವತ್ತೂರು ಬಳಿ ನಿರ್ಜನ ಪ್ರದೇಶಕ್ಕೆ ಅರ್ಪಿತಳನ್ನು ಕರೆತಂದು ದಿನಾಂಕ 02-02-2019 ರಂದು ರಾತ್ರಿ ದ್ವಿಚಕ್ರ ವಾಹನವನ್ನು ಯು-ಟರ್ನ್ ಮಾಡಿ, ಅರ್ಪಿತಳನ್ನು ಬೈಕಿನಿಂದ ಕೆಳಗೆ ಬಿಳಿಸಿ ಬಳಿಕ ಅರ್ಪಿತಳ ಕುತ್ತಿಗೆಯ ಮೇಲೆ ಕಾಲನ್ನು ಇಟ್ಟು ಉಸಿರುಗಟ್ಟಿಸಿ ಪಕ್ಕದಲ್ಲಿ ಬಿದ್ದಿದ್ದ ಕಾಡುಕಲ್ಲನ್ನು ತೆಗೆದುಕೊಂಡು ಅರ್ಪಿತಳ ಮುಖದ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ ಆರೋಪ ಧೃಡಪಟ್ಟ ಹಿನ್ನೆಲೆ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಮಾಡಿದೆ,ಪ್ರಕರಣ ತನಿಖೆ ನಡೆಸಿದ ಸಿಪಿಐ ಬಾಲಾಜಿ ಸಿಂಗ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿರುತ್ತಾರೆ ತನಿಖ ಸಹಾಯಕರಾಗಿ ಕೆ.ಎಸ್ ಪುಟ್ಟರಾಮು ಹಾಗೂ ಗಿರೀಶ್ ಕಾರ್ಯ ನಿರ್ವಹಿಸಿದ್ದು ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕಿ ವಿ.ಎ ಕವಿತ ರವರು ವಾದ ಮಂಡಿಸಿರುತ್ತಾರೆ @publicnewskunigal