ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

Spread the love

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಮೃತದೇಹ ಸಾಗಿಸಲು ಹಣವಿಲ್ಲದೆ ಪರದಾಡಿದ ತಾಯಿ,ಯುವಕನ ಕೀರುಕುಳಕ್ಕೆ ಬೆಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ!

ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ನಾಗೇಗೌಡನ ಪಾಳ್ಯ ಗ್ರಾಮದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಾಲೆಗೆ ತೆರಳಲು ತಯಾರಿಯಾಗುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಾಯಿಗೆ ಪೋನ್ ಮೂಲಕ ಕರೆ ಮಾಡಿ ತಿಳಿಸಿ ಸಮವಸ್ತ್ರದಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ

ಕುಣಿಗಲ್ ಪಟ್ಟಣದ ಮಹಾತ್ಮ ಗಾಂಧಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ (14) ವರ್ಷದ ಸುಮ ನೆಣು ಬಿಗಿದುಕೊಂಡ ಆತ್ಮ ಹತ್ಯೆಗೆ ಶರಣಾದ ವಿದ್ಯಾರ್ಥಿನಿ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮಗಳ ಮಾತಿನಿಂದ ಗಾಬರಿಗೊಂಡು ಮನೆಗೆ ಬರುವ ವೇಳೆಗೆ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಇದ್ದುದ್ದನ್ನು ಗಮನಿಸಿ ಸ್ಥಳಿಯರ ನೆರವಿನೊಂದಿಗೆ ತಕ್ಷಣ ಸ್ಥಳಿಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಅಷ್ಟರಲ್ಲಿ ಯುವತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ

ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಯುವತಿಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ಮೃತ ದೇಹವನ್ನು ಸಾಗಿಸಲು ಪರದಾಡುತ್ತಿದ್ದ ಯುವತಿಯ ತಾಯಿಗೆ ಶಾಲೆಯ ಶಿಕ್ಷಕರು ನೆರವಾಗಿದ್ದು ವಾಹನದ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿನಿಯ ಮೃತದೇಹವನ್ನು ಗ್ರಾಮಕ್ಕೆ ಕಳಿಸುವ ವ್ಯವಸ್ಥೆ ಕಲ್ಪಿಸಿದರು ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ಹಾಗೂ ಶಿಕ್ಷಕರು ಸಹ ಪಾಠಿಗಳು ಮೃತ ವಿದ್ಯಾರ್ಥಿನಿಯ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು,

ಯುವಕನ ಕೀರುಕುಳ ಆರೋಪ;-ಕುಣಿಗಲ್ ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಫ್ರೌಡಶಾಲೆಗೆ ಬರುತ್ತಿದ್ದ ಯವತಿಗೆ ಯುವಕನೊರ್ವ ಪ್ರೀತಿಸುವಂತೆ ಕೀರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ ಶಾಲೆಯ ಬಳಿಯು ಬಂದು ಯುವತಿಯನ್ನು ಪೀಡಿಸುತಿದ್ದ ಎಂದು ಸಹಪಾಠಿ ವಿದ್ಯಾರ್ಥಿನಿಯರು ತಿಳಿಸಿದ್ದು ಇದೆ ಕಾರಣಕ್ಕೆ ಯುವತಿಯನ್ನು ಕೆಲ ದಿನಗಳ ಹಿಂದೆ ಶಾಲೆ ಬಿಡಿಸಲಾಗಿತ್ತು ಆದರೆ ಶಿಕ್ಷಕರು ತಾಯಿಯ ಮನ ಒಲಿಸಿ ಮತ್ತೆ ಯುವತಿಯನ್ನು ಶಾಲೆಗೆ ಕರೆತಂದಿದ್ದಾರೆ ಆದರೆ ವಿದ್ಯಾಭ್ಯಾಸ ಮಾಡಿ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಯುವತಿ ನೇಣಿಗೆ ಶರಣಗಿರುವುದು ವಿಪರ್ಯಾಸ ಮಗಳ ಮೃತದೇಹದ ಮುಂದೆ ತಾಯಿ ಕಣ್ಣಿರು ಹಾಕುವ ದೃಷ್ಯ ನೊಡುಗರ ಮನ ಕಲಕುವಂತಿತ್ತು

ಘಟನೆಯ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal