
ರಾಜ್ಯ ಹೆದ್ದಾರಿ 33ರ ಕಂಪ್ಲಾಪುರ ಗ್ರಾಮದಬಳಿ ಭೀಕರ ರಸ್ತೆ ಅಪಘಾತ ಒರ್ವ ಮಹಿಳೆ ಸ್ಥಳದಲ್ಲಿ ಸಾವು ನಾಲ್ವರಿಗೆ ಗಂಭೀರ ಗಾಯ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ಕಂಪ್ಲಾಪುರ ಗ್ರಾಮದ ಬಳಿ ಸೋಮವಾರ ಬೆಳಗಿನ ಜಾವ ಕಾರು ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದ ಪರಿಣಾಮ ಒರ್ವ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ
ಮೈಸೂರಿನ ಬಿ.ಇ.ಎಂ.ಎಲ್ ನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಬಾದಮಿ ತಾಲ್ಲೂಕಿನಿಂದ ಕುಣಿಗಲ್ ಮಾರ್ಗವಾಗಿ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ ಹುಲಿಯೂರುದುರ್ಗ ಬಳಿ ಅವಘಡ ಸಂಭವಿಸಿದೆ ಬಾಗಲಕೋಟೆ ಜಿಲ್ಲೆ ಬಾದಮಿ ತಾಲ್ಲೂಕಿನ ಗುಳೆದಗುಡ್ಡ ನಿವಾಸಿಗಳಾದ ಬಸವರಾಜು (55) ಕಸ್ತೂರಿ (43) ಶಾಂತಮ್ಮ (60) ವಿಶ್ವನಾಥ(17) ಪಾವನಿ (11) ಕಾರಿನಲ್ಲಿ ಮೈಸೂರಿಗೆ ಪ್ರಯಾಣಿಸುತ್ತಿದ್ದರು

ಸೋಮವಾರ ಬೆಳಗಿನ ಜಾವ (4:55) ರಲ್ಲಿ ಕಾರು ಚಾಲಕ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಹಿನ್ನೆಲೆ ಸ್ಥಳದಲ್ಲಿ ಬಸವರಾಜು ಪತ್ನಿ ಕಸ್ತೂರಿ (43) ಸಾವನ್ನಪ್ಪಿದ್ದು ಬಸವರಾಜು,ಶಾಂತಮ್ಮ,ವಿಶ್ವನಾಥ್,ಪಾವನಿ,ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು ಗಾಯಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal