
ನವಜಾತ ಶಿಶು ಮಾರಾಟ ಪ್ರಕರಣ ಮಗುವಿನ ತಂದೆ-ತಾಯಿ ಸೇರಿ ಐವರ ಬಂಧನ!
ರಾಮನಗರ ಜಿಲ್ಲೆ ಮಾಗಡಿ ಮೂಲದ ಶ್ರೀನಂದ ಮತ್ತು ಮೊನಿಷಾ ಇಬ್ಬರು ಅವಿವಾಹಿತರಾಗಿದ್ದು ಫೆ- 20 ರಂದು ಮೊನಿಷಾಗೆ ಹೊಟ್ಟೆನೊವು ಕಾಣಿಸಿಕೊಂಡ ಹಿನ್ನೆಲೆ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು ಗಂಡು ಮಗು ಜನನವಾಗಿದೆ ಇನ್ನೂ ಮದುವೆಯಾಗದ ಕಾರಣ ಮಗುವನ್ನ ಮನೆಗೆ ಕರೆದೊಯ್ಯಲು ತಾಯಿ ನಿರಾಕರಿಸಿದ ಹಿನ್ನೆಲೆ ಮಗುವನ್ನು ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಮೂಲಕ ಮಗುವನ್ನು ತಾಲ್ಲೂಕಿನ ಕೊತ್ತಗೆರೆ ಗ್ರಾಮದ ಅಂಗನವಾಡಿ ಕಾರ್ಯಕರ್ತೆಯಾಗಿದ್ದ ಜ್ಯೋತಿ ಮೂಲಕ ಮಗು ಮಾರಾಟ.ಕೊತ್ತಗೆರೆ ಮೇಸ್ತ್ರಿರಾಮಣ್ಣನಪಾಳ್ಯ ಗ್ರಾಮದ ಮುಬಾರಕ್ ಪಾಷ ಎಂಬುವರಿಗೆ 60 ಸಾವಿರಕ್ಕೆ ಮಗು ಮಾರಾಟ ಮಾಡಲಾಗಿದೆ ಮಗು ಮಾರಾಟದ ಬಳಿಕ ಹಣಕಾಸಿನ ವ್ಯವಹಾರದಲ್ಲಿ ಮಾತುಕತೆ ನಡೆಯುತ್ತಿದ್ದ ಬಗ್ಗೆ ಆಸ್ಪತ್ರೆಯ ಸಿಬ್ಬಂದಿವರ್ಗ ನೀಡಿದ ಮಾಹಿತಿ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯಿಂದ ದೂರು ದಾಖಲಾದ ಹಿನ್ನೆಲೆ ಕುಣಿಗಲ್ ಪಟ್ಟಣದ ಪೊಲೀಸರು ಮಗುವಿನ ತಾಯಿ ಮೊನಿಷಾ (21), ತಂದೆ ಶ್ರೀನಂದ (24), ಅಂಗನವಾಡಿ ಕಾರ್ಯಕರ್ತೆ ಜ್ಯೋತಿ (45), ಮಗುವನ್ನ ಖರೀದಿಸಿದ್ದ ಮುಬಾರಕ್ ಪಾಷ (36), ಹಾಗೂ ಮಗುವಿನ ತಂದೆಯ ಸ್ನೇಹಿತೆ ಜ್ಯೋತಿ (32) ಕುಣಿಗಲ್ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ