
ಜಮೀನಿನಲ್ಲಿ ಉಳುಮೆ ಮಾಡುತಿದ್ದ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲೆ ಸಾವು!
ಕುಣೆಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ನಾಗನಹಳ್ಳಿ ಗ್ರಾಮದಲ್ಲಿ ಸೋಮವಾರ ಉಳುಮೆ ಮಾಡುತಿದ್ದ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ರೈತ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ ರಾಮಕೃಷ್ಣಯ್ಯ (62) ಮೃತ ರೈತ ಇತ್ತಿಚೇಗೆ ಮಳೆ ಬಿದ್ದ ಕಾರಣ ತಮ್ಮ ಜಮೀನಿನಲ್ಲಿ ಎಂದಿನಂತೆ ಉಳುಮೆ ಮಾಡುತಿರುವಾಗ ಟ್ರಾಕ್ಟರ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದು ಈ ವೇಳೆ ಟ್ರಾಕ್ಟರ್ ಕೆಳಗೆ ಸಿಲುಕಿದ್ದ ರೈತ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ@publicnewskunigal