
ತಾವರೆಕೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆರ್.ಬ್ಯಾಡರಹಳ್ಳಿ ಗ್ರಾಮದ ಗೌರಮ್ಮ ಆಯ್ಕೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷೆ ಲಕ್ಷ್ಮಮ್ಮ ರಾಜೀನಾಮೆ ನೀಡಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಗೌರಮ್ಮ ಮತ್ತು ಜಯಣ್ಣ ಎಂಬುವವರು ನಾಮಪತ್ರ ಸಲ್ಲಿಸಿದ್ದರು ಹದಿನೈದು ಮಂದಿ ಸದಸ್ಯರ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಆರ್.ಬ್ಯಾಡರಹಳ್ಳಿ ಗ್ರಾಮದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಗೌರಮ್ಮ ಒಂಬತ್ತು ಮತಗಳನ್ನು ಪಡೆದು ಜಯಗಳಿಸಿದರೆ
ಬಂದಿಗೌಡನಪಾಳ್ಯ ಗ್ರಾಮದ ಜಯಣ್ಣ ಆರು ಮತಗಳನ್ನು ಪಡೆದು ಪರಾಜಿತಗೊಂಡರು ಈ ವೇಳೆ ಸ್ಥಳದಲ್ಲಿದ್ದ ಬೆಂಬಲಿಗರು ಪಟಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು ಹಾಗೂ ಸ್ಥಳಿಯ ಮುಖಂಡರು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು ಚುನಾವಣೆ ಅಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಎಸ್.ನಾರಾಯಣ್ ಕಾರ್ಯ ನಿರ್ವಹಿಸಿದರು ಈ ವೇಳೆ ಗ್ರಾಮ ಪಂಚಾಯ್ತಿ ಪಿ.ಡಿ.ಒ ಕೃಷ್ಣಯ್ಯ ಸದಸ್ಯರಾದ ರುದ್ರೆಗೌಡ.ನಾಗರಾಜು.ನಾಗೇಂದ್ರ.ಮೋಹನ್.ಲಕ್ಷ್ಮಮ್ಮ.ಚಲುವರಂಗಯ್ಯ.ಸೇರಿದಂತೆ ಸ್ಥಳಿಯ ಮುಖಂಡರಾದ ಸತೀಶ್.ಲೋಕೇಶ್.ಚನ್ನಪ್ಪ.ತಾವರೆಕೆರೆ ಸತೀಶ್ ಉಪಸ್ಥಿತರಿದ್ದರು @publicnewskunigal