
ಎಸ್.ಎಸ್.ಎಲ್.ಸಿ ಫಲಿತಾಂಶ ತುಮಕೂರು ಜಿಲ್ಲೆಗೆ ಮೂರನೆ ಸ್ಥಾನ ಪಡೆದ ಕುಣಿಗಲ್ ತಾಲ್ಲೂಕು!
2024/25ನೇ ಶೈಕ್ಷಣಿಕ ಸಾಲಿನ ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ಕುಣಿಗಲ್ ತಾಲ್ಲೂಕು ತುಮಕೂರು
ಜಿಲ್ಲೆಗೆ ಮೂರನೆ ಸ್ಥಾನ ಪಡೆಯುವ ಮೂಲಕ ಈ ಭಾರಿ ತಾಲ್ಲೂಕಿಗೆ ಶೇಕಡ 72% ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೋರೆಗೌಡ ತಿಳಿಸಿದ್ದಾರೆ ಕುಣಿಗಲ್ ಪಟ್ಟಣದ ಸರ್ವೋದಯ ಶಾಲೆಯ ಆಯಾನ್ ಖಾನ್ 622 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು. ಸ್ಟೆಲ್ಲಾ ಮೇರಿಸ್ ಶಾಲೆಯ ತೇಜಶ್ರೀ 621 ಅಂಕ ಪಡೆದು ತಾಲ್ಲೂಕಿಗೆ ದ್ವಿತಿಯ ಸ್ಥಾನ ಪಡೆದಿದ್ದಾಳೆ ಹಾಗೂ ಹುಲಿಯೂರುದುರ್ಗ ಪಟ್ಟಣದ ಜ್ಞಾನ ಭಾರತಿ ಶಾಲೆಯ ಭುವನ್ ಗೌಡ 619 ಅಂಕ ಪಡೆಯುವ ಮೂಲಕ ತಾಲ್ಲೂಕಿಗೆ ತೃತಿಯ ಸ್ಥಾನ ಪಡೆದಿದ್ದಾನೆ @publicnewskunigal