
ಕೆನರಾ ಬ್ಯಾಂಕಿನ ನಕಲಿ ಸೀಲ್ ಬಳಸಿ ಪುರಸಭೆಗೆ ತೆರಿಗೆ ವಂಚನೆ ಆರೋಪ ಒರ್ವನ ಬಂಧನ ಪ್ರಕರಣ ದಾಖಲು!
ಕುಣಿಗಲ್ ಪಟ್ಟಣದ ಪುರಸಭೆಯ ಕೆನರಾ ಬ್ಯಾಂಕ್ ಖಾತೆಗೆ ಸೇರಬೇಕಿದ್ದ ತೆರಿಗೆ ಹಣವನ್ನು ಬ್ಯಾಂಕಿಗೆ ಪಾವತಿಸುವುದಾಗಿ ನಂಬಿಸಿ ಹಣವನ್ನು ಪಡೆದು ಬಳಿಕ ಚಲನ್ ಮೂಲಕ ಹಣವನ್ನು ಬ್ಯಾಂಕ್ ಗೆ ಪಾವತಿಸಿರುವುದಾಗಿ ಪುರಸಭೆಯ ಚಲನ್ ಗೆ ಕೆನರಾ ಬ್ಯಾಂಕಿನ ನಕಲಿ ಸಿಲ್ ಬಳಸಿ ಬ್ಯಾಂಕ್ ಖಾತೆಗೆ ಹಣ ಪಾವತಿಸಿರುವಂತೆ ಪುರಸಭೆಯಲ್ಲಿ ನೀಡಲಾಗಿದ್ದ ತೆರಿಗೆ ಪಾವತಿ ಚಲನ್ ಗಳಿಗೆ ನಕಲಿ ಸೀಲ್ ಹೊಡೆದು ಪಾವತಿ ಮಾಡಿರುವಂತೆ ದಾಖಲೆ ಸೃಷ್ಠಿಸುದಲ್ಲದೆ ಪುರಸಭೆಗೆ ಸೇರಬೇಕಿದ್ದ ತೆರಿಗೆ ಹಣವನ್ನು ವಂಚಿಸುತ್ತಿರುವ ಆರೋಪ

ಪುರಸಭೆಯ ಮುಖ್ಯಾಧಿಕಾರಿ ಜಿ.ಮಂಜುಳಾ ನೀಡಿದ ದೂರು ಹಿನ್ನೆಲೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ (BNS) 2023 U/s-336(2),336(3),340(2),318(4) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಸಾರ್ವಜನಿಕರಿಂದ ಹಣ ಪಡೆದು ಬ್ಯಾಂಕಿಗೆ ಜಮಾ ಮಾಡದೆ ವಂಚಿಸುತಿದ್ದ ಆರೋಪದಡಿಯಲ್ಲಿ ಕೃಷ್ಣ ಅಲಿಯಾಸ್ ಕಿಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯ ಕಾರಣದಿಂದ ಪುರಸಭೆಗೆ ತೆರಿಗೆ ಪಾವತಿ ಮಾಡಲು ಬರುವ ಸಾರ್ವಜನಿಕರ ಬಳಿ ಮಾತುಕತೆ ನಡೆಸಿ ಅಧಿಕಾರಿಗಳ ಬಳಿ ಮಾತನಾಡಿ ಹೆಚ್ಚು ಇರುವ ತೆರಿಗೆ ಹಣವನ್ನ ಕಡಿಮೆಮಾಡಿ ಪಾವತಿ ಮಾಡುವುದಾಗಿ ನಂಬಿಸಿ ಹಣ ಪಡೆದು ಬ್ಯಾಂಕ್ ಖಾತೆಗೆ ಜಮಾ ಮಾಡದೆ ಹಲವು ದಿನಗಳಿಂದ ವಂಚಿಸುತ್ತಿದ್ದ ದಲ್ಲಾಳಿಯ ಜೋತೆಗೆ ಪುರಸಭೆ ಅಧಿಕಾರಿಗಳ ಪಾಲು ಎಷ್ಟಿದೆ ಎಂಬುದು ತನಿಖೆಯಿಂದ ಬಯಲಾಗಬೇಕಿದೆ ಇನ್ನೂ ಬ್ಯಾಂಕಿಗೆ ಜಮಾ ಮಾಡಲಾಗಿರುವ ತೆರಿಗೆ ಹಣದ ಚಲನ್ ಗಳನ್ನು ಸಾರ್ವಜನಿಕರಿಂದ ಪಡೆದು ತೆರಿಗೆ ಪಾವತಿಸಿರುವ ಬಗ್ಗೆ ಪುರಸಭೆಯಲ್ಲಿ ಲೆಡ್ಜರ್ ಗಳಲ್ಲಿ ನಮೂದಿಸುವ ಅಧಿಕಾರಿಗಳು ಬ್ಯಾಂಕಿನಿಂದ ಪಾವತಿ ದಾಖಲೆಗಳನ್ನು ಪಡೆದು ಪರಿಸಿಲಿಸಿ ನಂತರ ಲೆಡ್ಜರ್ ಗಳಲ್ಲಿ ನಮೂದಿಸುವಲ್ಲಿ ವಿಫಲರಾಗಿದ್ದು ಇದರಿಂದ ದಲ್ಲಾಳಿಗಳಿಗೆ ತೆರಿಗೆ ವಂಚಿಸಲು ಪುರಸಭೆ ರಹದಾರಿಯಾಗಿದೆ ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಡಳಿತ ಹಾಗೂ ಆಡಳಿತ ಅಧಿಕಾರಿಗಳು ಇತ್ತ ಗಮನ ಹರಿಸಿ ಇದೆ ರೀತಿ ಕುಣಿಗಲ್ ಪಟ್ಟಣದ ಪುರಸಭೆಯಲ್ಲಿ ನಡೆದಿರುವ ಅಕ್ರಮಗಳನ್ನು ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ @publicnewskunigal