
ಪುರಸಭೆಯಲ್ಲಿ ನಡೆದ ಆಸ್ತಿ ತೆರಿಗೆ ವಂಚನೆ ಪ್ರಕರಣ ಶಾಸಕರ ಆಡಳಿತ ವೈಫಲ್ಯ ಕಾರಣ ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್!
ಕುಣಿಗಲ್ ಪಟ್ಟಣದ ಪುರಸಭೆಯಲ್ಲಿ ನಡೆದ ತೆರಿಗೆ ವಂಚನೆ ಪ್ರಕರಣ ಶಾಸಕರ ಆಡಳಿತ ವೈಫಲ್ಯ ಕಾರಣ ಎಂದು ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಿ.ಎನ್ ಜಗದೀಶ್ ಆರೋಪಿಸಿದ್ದಾರೆ ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಪುರಸಭೆಯಲ್ಲಿ ಹಲವು ದಿನಗಳಿಂದ ತೆರಿಗೆ ವಂಚನೆ ನಡೆಯುತ್ತಿದ್ದು ಇದರಲ್ಲಿ ಅಧಿಕಾರಿಗಳು ಹಾಗೂ ಕೆಲ ಸದಸ್ಯರ ಪಾತ್ರವಿದ್ದು ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಶಾಸಕರಿಗೆ ಒತ್ತಾಯಿಸಿದ್ದಾರೆ ಕೆಲ ದಲ್ಲಾಳಿಗಳು ಪುರಸಭೆಗೆ ಬರುವ ಬಡ ಕೂಲಿ ಕಾರ್ಮಿಕರನ್ನು ನಂಬಿಸಿ ತೆರಿಗೆ ಪಾವತಿ ಮಾಡುವುದಾಗಿ ನಂಬಿಸಿ ಕೆನರಾ ಬ್ಯಾಂಕಿನ ನಕಲಿ ಸಿಲ್ ಬಳಸಿ ಪುರಸಭೆಗೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ತೆರಿಗೆಯ ಜೋತೆಗೆ ಸಾರ್ವಜನಿಕರಿಗೆ ವಂಚಿಸಿದ್ದರು ಸಹ ಇದುವರೆಗೂ ಶಾಸಕರು ಪುರಸಭೆಗೆ ಭೇಟಿ ನೀಡಿ ಒಂದು ಸಭೆ ನಡೆಸಿಲ್ಲ ಈ ಬಗ್ಗೆ ಉನ್ನತ ತನಿಖೆಗೆ ಆದೇಶ ಮಾಡಿಲ್ಲ ಈ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ರಕ್ಷಿಸುವ ಹುದ್ದೆಶದಿಂದ ಶಾಸಕರು ತುಟಿ ಬಿಚ್ಚುತ್ತಿಲ್ಲ ಕಳೆದ ಏಳು ವರ್ಷಗಳಿಂದ ಪುರಸಭೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಅಧಿಕಾರಿಗಳ ಕೊರತೆ ಇದೆ ಪುರಸಭೆಯ ವಾಹನಗಳ ನೊಂದಣಿಯಾಗಿಲ್ಲ ರಾಜಕೀಯ ಇತಿಹಾಸದಲ್ಲೆ ಇದೆ ಮೊದಲ ಬಾರಿಗೆ ಪುರಸಭೆಯ ತೆರಿಗೆ ವಂಚನೆ ಪ್ರಕರಣ ಕುಣಿಗಲ್ ತಾಲ್ಲೂಕಿನ ಮಾನ ಹರಾಜಾಗುತ್ತಿದೆ ಶಾಸಕರು ಇದಕ್ಕೆಲ್ಲ ಉತ್ತರ ನೀಡಬೇಕು ಇದನ್ನು ತಾಲ್ಲೂಕು ಜೆಡಿಎಸ್ ಘಟಕ ತೀವ್ರವಾಗಿ ಖಂಡಿಸುತ್ತದೆ ಜೋತೆಗೆ ತೆರಿಗೆ ವಂಚನೆ ಪ್ರಕರಣವನ್ನು ಉನ್ನತಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು ಈ ವೇಳೆ ಮುಖಂಡರಾದ ರಂಗಸ್ವಾಮಿ.ವಾಸು.ಗುರು.ನವೀನ್.ಮಂಜುನಾಥ್.ಬಾಲುನಾಯ್ಕ್.ಮನೋಜ್ ಹಾಗೂ ಜೆಡಿಎಸ್ ವಕ್ತಾರ ತರಿಕೆರೆ ಪ್ರಕಾಶ್ ಉಪಸ್ಥಿತರಿದ್ದರು@publicnewskunigal