ಕಸವಿಲೇವಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಗ್ರಾ.ಪಂ ಬಿಲ್ ಕಲೆಕ್ಟರ್

Spread the love

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕಸ ವಿಲೇವಾರಿಗಾಗಿ ನೀಡಿರುವ ಕಸ ತುಂಬುವ ವಾಹನವನ್ನು ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ರಾಜೇಶ್ ಎಂಬುವವರು ತಮ್ಮ ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ ಹುಲಿಯೂರುದುರ್ಗದಿಂದ ಗ್ರಾಮಕ್ಕೆ ವಾಹನದಲ್ಲಿ ಪೈಪ್ ತುಂಬಿಕೊಂಡು ಬರುವ ಸಮಯದಲ್ಲಿ ರಾಜೇಂದ್ರಪುರ ಅರಣ್ಯ ಪ್ರದೇಶ ವ್ಯಾಪ್ತಿಯಯಲ್ಲಿ ಸಾರ್ವಜನಿಕರು ಕಸವಿಲೇವಾರಿ ವಾಹನದಲ್ಲಿ ಪೈಪ್ ತುಂಬಿದ್ದನ್ನು ಗಮನಿಸಿ ವಾಹನ ಚಾಲಕನನ್ನು ತಡೆದು ಪ್ರಶ್ನಿಸಿದ್ದಾರೆ.

ತಾಲೂಕಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಉಚಿತ ಸಿಇಟಿ ಪೂರ್ವಭಾವಿ ಪರೀಕ್ಷೆ (ಪ್ರಾಕ್ಟೀಸ್ ಟೆಸ್ಟ್) ಈಗಲೇ ರಿಜಿಸ್ಟರ್ ಮಾಡಿಕೊಳ್ಳಿ https://docs.google.com/forms/d/e/1FAIpQLScVihZG3MawNh3ZmoClV5dXfUzTB5dlkYkPMVyC6zwJqg5Hqg/viewform?usp=sf_link

ಈ ವೇಳೆ ಆರ್. ಬ್ಯಾಡರಹಳ್ಳಿ ವ್ಯಾಪ್ತಿಯ ನೀರುಘಂಟಿಯಾಗಿರುವ ವಾಹನ ಚಾಲಕ ತಿಮ್ಮೆಗೌಡ ಸಾರ್ವಜನಿಕರ ಪ್ರಶ್ನೆಗೆ ಬಡಬಡಾಯಿಸುತ್ತ ತಾವರೆಕೆರೆ ಗ್ರಾಮ ಪಂಚಾಯ್ತಿಯ ಬಿಲ್ ಕಲೇಕ್ಟರ್ ರಾಜೇಶ್ ರವರಿಗೆ ಕೃಷಿ ಇಲಾಖೆಯಿಂದ ನೀಡಿರುವ ತುಂತುರು ನೀರಾವರಿಯ ಪೈಪ್ ಗಳನ್ನು ತುಂಬಿಕೊಂಡು ಬರುವ ಸಲುವಾಗಿ ವಾಹನವನ್ನು ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದ್ದು

ಗ್ರಾಮ ಪಂಚಾಯ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನೀಡಲಾಗಿರುವ ವಾಹನವನ್ನು ಬಿಲ್ ಕಲೆಕ್ಟರ್ ರಾಜೇಶ್ ತಮ್ಮ ಸ್ವಂತ ಕೆಲಸಕ್ಕಾಗಿ ಬಳಸಿಕೊಳ್ಳುವ ಮೂಲಕ ಯೋಜನೆಯ ಮಹತ್ವ ಹರಿಯದೆ ಎಳ್ಳು ನೀರು ಬಿಟ್ಟಿವುದು ಕಂಡುಬಂದಿದ್ದು ಕ್ರಮಕ್ಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.