ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅವರಣದಲ್ಲಿ ಕಾಟಾಚಾರಕದ ಜನ ಸಂಪರ್ಕ ಸಭೆ!

Spread the love

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಪೊಲೀಸ್ ಠಾಣೆಯ ಅವರಣದಲ್ಲಿ ಶನಿವಾರ ಸಂಜೆ ಸಾರ್ವಜನಿಕರ ಕುಂದು ಕೊರತೆಯನ್ನು ಹಾಲಿಸುವ ಸಲುವಾಗಿ ಜನ ಸಂಪರ್ಕ ಸಭೆಯನ್ನು ಕರೆಯಲಾಗಿತ್ತು ಕಾರ್ಯಕ್ರಮದಲ್ಲಿ ಅಮೃತೂರು ವೃತ್ತ ನಿರೀಕ್ಷಕ ಅರುಣ್ ಸಾಲುಂಕೆ ಮಾತನಾಡಿ ಇತ್ತಿಚೇಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಿಂದ 16 ಮಂದಿ ಸಾವನ್ನಪ್ಪಿದ್ದು

ವಾಹನ ಚಲಾಯಿಸುವ ಸಂದರ್ಭದಲ್ಲಿ ಎಲ್ಲರೂ ತಪ್ಪದೆ ಸುರಕ್ಷತ ಕ್ರಮಗಳನ್ನು ಅನುಸರಿಸುವ ಮೂಲಕ ಸಂಚಾರಿ ನಿಯಮಗಳನ್ನು ಪಾಲಿಸಿ ರಸ್ತೆಯಲ್ಲಿರುವ ನಾಮ ಫಲಕಗಳನ್ನು ಗಮನಿಸಿ ವಾಹನ ಚಲಾಯಿಸಿ ವಾಹನ ಚಲಯಿಸುವ ಸಮಯದಲ್ಲಿ ನಿಂದ್ರೆಗೆ ಜಾರಿದರೆ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಕೆಲ ಕಾಲ ವಿಶ್ರಾಂತಿ ಪಡೆದು ನಂತರ ವಾಹನ ಚಲಾಯಿಸಿ ಅಪಘಾತ ಪ್ರಕರಣಗಳು ಹೆಚ್ಚುವುದನ್ನು ತಡೆಯಿರಿ ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳ ಬಗ್ಗೆ ಪೋಷಕರು ಜಾಗೃತಿ ವಹಿಸಿ ಇತ್ತಿಚೇಗೆ ಮಕ್ಕಳು ಸೀಗರೇಟ್ ಗಾಂಜಾ ಸೇವನೆಯಂತ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ ಆಂದರಿಂದ ಮಕ್ಕಳ ಚಲನ ವಲನಗಳ ಬಗ್ಗೆ ಪೋಷಕರು ಜಾಗೃತಿ ವಹಿಸುವ ಮೂಲಕ ಮಕ್ಕಳು ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ತಡೆಯಿರಿ

ಕುಣಿಗಲ್ ಪಟ್ಟಣದ ಹಲವು ಕಡೆಗಳಲ್ಲಿ ಕೊಳವೆ ಬಾವಿಗೆ ಅಳವಡಿಸಿದ್ದ ಕೆಬಲ್ ಕಳವು https://kunigalnews.com/2023/05/235/: ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅವರಣದಲ್ಲಿ ಕಾಟಾಚಾರಕದ ಜನ ಸಂಪರ್ಕ ಸಭೆ!

ಯಾವುದೆ ತುರ್ತು ಸಂಧರ್ಭದಲ್ಲಿ 112 ಕರೆ ಮಾಡಿ ಮಾಹಿತಿ ನೀಡಿ ಎಂದರು ಬಳಿಕ ಪಿಎಸ್ಐ ವೆಂಕಟೇಶ್ ಮಾತನಾಡಿ ಕಳ್ಳತನ ಪ್ರಕರಣಗಳು ನಡೆಯುವ ಮುನ್ನ ಸಾರ್ವಜನಿಕರು ಜಾಗೃತಿ ವಹಿಸಿ ಮನೆಯಿಂದ ಎಲ್ಲಾದರು ಹೊರ ಹೊಗುವ ಮುನ್ನ ಅಕ್ಕ ಪಕ್ಕದವರಿಗೆ ಮಾಹಿತಿ ನೀಡಿ ಮನೆಯ ಬಾಗಿಲನ್ನು ಸರಿಯಾಗಿ ಲಾಕ್ ಮಾಡಿ ಬೆಲೆ ಬಾಳುವ ವಸ್ತುಗಳು ಆಭರಣ ಮತ್ತು ಹಣದ ಬಗ್ಗೆ ಜಾಗೃತಿ ಇರಲಿ ಆನ್ ಲೈನ್ ವ್ಯಹಾರದ ಬಗ್ಗೆ ಹಾಗೂ ಮೊಬೈಲ್ ಪೋನ್ ಗಳಿಗೆ ಬರುವ ಒಟಿಪಿಗಳ ಬಗ್ಗೆ ಜಾಗೃತರಾಗಿರಿ

ದೇವಾಲಯದ ಹುಂಡಿಯನ್ನು ಪ್ರತಿ ತಿಂಗಳು ತೆರೆಯಿರಿ ಹುಂಡಿಯನ್ನು ತೆರೆಯದ ಸಂದರ್ಭಗಳಲ್ಲಿ ಕಳ್ಳರು ಹುಂಡಿಗೆ ಕನ್ನಹಾಕುವ ಸಾಧ್ಯತೆಗಳಿವೆ ಗ್ರಾಮೀಣ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ ಅಳವಡಿಸುವ ಮೂಲಕ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಿ ಹಾಗೂ ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ಸಹಕಾರ ನೀಡಿದ ಎಲ್ಲಾ ಸಾರ್ವಜನಿಕರ ಧನ್ಯವಾದ ತಿಳಿಸಿದರು ಈ ಸಂದರ್ಭದಲ್ಲಿ ಠಾಣೆಯ ಎ.ಎಸ್.ಐ ಹನುಮಂತರಾಯಪ್ಪ ಸೇರಿದಂತೆ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು

ಕಾಟಾಚಾರಕ್ಕೆ ನಡೆದ ಜನ ಸಂಪರ್ಕ ಸಭೆ;- ಹುಲಿಯೂರುದುರ್ಗ ಪೊಲೀಸ್ ಠಾಣೆಯ ಅವರಣದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬೆರಳೆಣಿಕೆ ಮಂದಿ ಭಾಗಿಯಾಗಿದ್ದು ಸಭೆ ಕಾಟಾಚಾರಕ್ಕೆ ನಡೆಸಿದಂತೆ ಕಾಣುತ್ತಿತ್ತು ತರಾತುರಿಯಲ್ಲಿ ಸಂಜೆ ವೇಳೆ ಸಭೆ ನಡೆಸಲು ಮುಂದಾದ ಪೊಲೀಸರು ಠಾಣೆಗೆ ದೂರು ನೀಡಲು ಬಂದಿದ್ದ ನಾಗರೀಕರು ಹಾಗೂ ಪೊಲೀಸ್ ಠಾಣೆಯ ಮುಂಭಾಗ ನಡೆಯುವ ಸಂತೆಗೆ ಬಂದಿದ್ದವರನ್ನು ಕರೆದು ಕುಳ್ಳಿರಿಸಿ ಸಭೆ ನಡೆಸಿದ ಪ್ರಸಂಗ ಜರುಗಿತು

ಇನ್ನೂ ಸಭೆಯಲ್ಲಿ ಭಾಗಿಯಾಗಿದ್ದವರ ಸಮಸ್ಯೆಗಳನ್ನು ಕೆಳದ ಅಧಿಕಾರಿಗಳು ಬಂದಿದ್ದವರಿಗೆ ಟೀ,ಬಿಸ್ಕೆಟ್ ನೀಡಿ ತರಾತುರಿಯಲ್ಲಿ ಸಭೆ ಮುಗಿಸಿ ಕೈ ತೊಳೆದುಕೊಂಡು ಕಾಟಚಾರಕ್ಕೆ ಸಭೆಯನ್ನು ಕರೆದಂತೆ ಕಾಣುತ್ತಿತ್ತು ಇನ್ನೂ ಹುಲಿಯೂರುದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಗೆ 152 ಹಳ್ಳಿಗಳು ಒಳಪಡಲಿದ್ದು ಯಾವುದೆ ಮಾಹತ್ವದ ವಿಚಾರಗಳು ಸಭೆಯಲ್ಲಿ ಚರ್ಚೆಯಾಗದಿರುವುದು ಮೆಲ್ನೊಟಕ್ಕೆ ಕಾಟಾಚಾರದ ಸಭೆಯಾಗಿತ್ತು