ಯಡಿಯೂರಿನಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟಿಸಿದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ!
ಕುಣಿಗಲ್ ತಾಲ್ಲೂಕಿನ ಯಡಿಯೂರು ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಶಿವದರ್ಶನ ಭವನದಲ್ಲಿ ಕಲಾ ನಿರಂಜನ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಹಾಗೂ ಕಲಾ ನಿರಂಜನ ಸೇವಾ ಟ್ರಸ್ಟ್ ಉದ್ಘಾಟನಾ ಕಾರ್ಯಕ್ರಮ ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮವನ್ನು ಅರೆ ಶಂಕರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮಿಜಿ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಕಲಾ ನಿರಂಜನ ಸೇವಾ ಟ್ರಸ್ಟ್ ವತಿಯಿಂದ ಕಲೆ ಸಾಹಿತ್ಯದಲ್ಲಿ ತೊಡಗಿರುವ ನೂರಾರು ಸಾಧಕರನ್ನು ಗುರುತಿಸುವಂತಾಗಲಿ,ಸೇವೆ ನಿರಂತರವಾಗಿರಲಿ ಕಲೆಗೆ ನಾನಾರೀತಿಯ ಅರ್ಥಗಳಿವೆ ಮೂರು ಪ್ರಕಾರದ ಕಲೆಗಳಿವೆ ಸಮಾಜ ಅಂಕು ಡೊಂಕುಗಳನ್ನು ತಿದ್ದುವುದು ಒಬ್ಬ ವ್ಯಕ್ತಿಯ ಅಂತರಂಗದ ಭಾವನೆಗಳನ್ನು ಅಭಿವ್ಯಕ್ತಿ ಪಡಿಸುವುದೆ ಸಾಹಿತ್ಯ, ಜಗತ್ತಿನ ಅತಿ ಶ್ರೇಷ್ಠ ಸಾಹಿತ್ಯ ಎಂದರೆ ಅದು ವಚನ ಸಾಹಿತ್ಯ, ಸಾಹಿತ್ಯ ಇಲ್ಲದಿದ್ದರೆ ಇತಿಹಾಸ ತಿಳಿಯಲು ಸಾಧ್ಯವಾಗುತ್ತಿರಲಿಲ್ಲ ಕಲೆ ಮನುಷ್ಯನಿಗೆ ಎರಡು ರಿತಿಯ ಅನುಭವನ್ನು ನೀಡುತ್ತೆ ಕಲೆ ಎಂಬುದು ಒಬ್ಬ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ,ಕಲೆ ಸಾಹಿತ್ಯ ಬೋಧನೆಗೆ ಮಾತ್ರವಲ್ಲ ತನ್ನನ್ನು ತಾನು ತಿದ್ದಿಕೋಳ್ಳಲು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಕಲೆ ಸಾಹಿತ್ಯ ಸಹಕಾರಿಯಾಗಲಿದೆ,ಅವಕಾಶ ಇಲ್ಲದವರಿಗೆ ಕಲಾ ನಿರಂಜನ ಸೇವ ಟ್ರಸ್ಟ್ ವತಿಯಿಂದ ಅವಕಾಶ ನೀಡಲಿ ನಿಮ್ಮ ಕಲಾ ಸೇವೆ ನಿರಂತರವಾಗಿ ನಡೆಯಲಿ ಎಂದರು ಇದೇ ವೇಳೆ ಸಾಹಿತಿ ಸೋಮಶೇಖರ್ ರವರ ಕೃತಿ ನಾಡಿನ ಊರಣ ಬದುಕಿನ ಹೊಂಗಿರಣ ಕೃತಿಯನ್ನು ಈಶ್ವರಿ ವಿಶ್ವವಿದ್ಯಾಲಯ ಯಡಿಯೂರು ಶಾಖೆಯ ರಾಜಯೋಗಿನಿ ಬಿ.ಕೆ ಪೂರ್ಣಿಮ ಅಕ್ಕನವರು ಬಿಡುಗಡೆ ಮಾಡಿದರು,ಕಾರ್ಯಕ್ರಮದ ಅಂಗವಾಗಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು ಸೈನಿಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ರಾಜಣ್ಣ. ನಾಗರಾಜು. ಎಂ.ಎಸ್ ತಿಪ್ಪೇಸ್ವಾಮಿ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹೇಶ್.ಎನ್ ಸಮಾಜ ಸೇವಕಿ ಶಿಲ್ಪ ಸೂಲಗಿತ್ತಿ ನಂಜಮ್ಮ. ಸುನಿತಾ ಕೃಷ್ಣಪ್ಪ ರೈತ್ ಸಂಘದ ಅಧ್ಯಕ್ಷ ಗೌರೀಶ್ ಅಂತರಾಷ್ಟ್ರೀಯ ಚಿತ್ರಕಾರ ನವೀನ್ ಕುಮಾರ್ ರಾಜಣ್ಣ ಗೋವಿಂದಯ್ಯ ಜಾನಪದ ಕವಲಾ ವಿಧ ಮಂಜೇಶ್ ಗೌಡ ರವರನ್ನು ಇದೆ ವೇಳೆ ಸನ್ಮಾನಿಸಿ ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಮಣ್ಣೆಮೋಹನ್. ನೂರುದ್ದೀನ್ ರಮೇಶ್ ಕಾಸಾಪ ಅಧ್ಯಕ್ಷ ಕಂಪನಿ ಪಾಳ್ಯ ರಮೇಶ್, ರಂಗಕರ್ಮಿ ರಾಜು, ಡಾ. ವಿಜಯ್ ಕುಮಾರ್ ಎಂ.ಎಸ್ ಲೋಕೇಶ್ ಅನುಪಮಾ ಚಂದ್ರು ಪರಿಮಳ ಪ್ರಕಾಶ್. ಐ.ಸಿ ಬಸವರಾಜ್ ಹೆಚ್ಎಂ ಮೊಹಮ್ಮದ್ ರಫಿ ರಾಮಕೃಷ್ಣಯ್ಯ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪದಾಧಿಕಾರಿಗಳಾದ ಸಿದ್ದೇಶ್ ಕುಮಾರ್ ಸೋಮಶೇಖರ್ ನಾಗರಾಜು ಚಂದ್ರಪ್ಪ ಗಂಗರಾಜು,ಸುರೇಶ್,ಉಮಾಪತಿ,ಶೇಷಾದ್ರಿ,ಪ್ರಭುಲಿಂಗ ಸ್ವಾಮಿ,ಮಂಜಪ್ಪ,ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು