ಕುಣಿಗಲ್;-ಸಾರ್ವಜನಿಕ ಸ್ಮಶಾನದಲ್ಲಿ ದಲಿತ ಮಹಿಳೆಯ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಮಧ್ಯಪ್ರವೇಶಸಿ ದಲಿತ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟ ಘಟನೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕೋಡಿಹಳ್ಳಿಪಾಳ್ಯ ಗ್ರಾಮದ ಕಾಲೋನಿಯಲ್ಲಿ ಸೋಮವಾರ ನಡೆದಿದೆ
ಕೋಡಿಹಳ್ಳಿಪಾಳ್ಯ ಗ್ರಾಮದಲ್ಲಿ ಅನಾರೋಗ್ಯದಿಂದ ಮೃತಪಟ್ಟ ದಲಿತ ಮಹಿಳೆ ಕಾಡಮ್ಮ (30) ಶವ ಸಂಸ್ಕಾರ ಮಾಡಲು ದಲಿತ ಸಮುದಾಯದವರು ಸಾರ್ವಜನಿಕ ಸ್ಮಶಾನಕ್ಕೆ ತಂದಿದ್ದರು ಇದಕ್ಕೆ ಗ್ರಾಮದ ಕರಿಯಪ್ಪ ಎಂಬುವರು ತಕರಾರು ಎತ್ತಿದರು ಈ ವಿಚಾರವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಿ.ಡಿ ಕುಮಾರ್ ರವರು ಕೂಡಲೆ ಕರೆ ಮಾಡಿ ತಹಶೀಲ್ದಾರ್ ಮಹಾಬಲೇಶ್ವರ ಗಮನಕ್ಕೆ ತಂದ ಕಾರಣ ತಕ್ಷಣ ಎಚ್ಚೆತ್ತ ತಹಶೀಲ್ದಾರ್ ಮಹಾಬಲೇಶ್ವರ್ ರವರು ಕೋತ್ತಗೆರೆ ಹೋಬಳಿಯ ಉಪ ತಹಸಿಲ್ದಾರ್ ರುದ್ರಳಮ್ಮ ಹಾಗೂ ರಾಜಸ್ವ ನಿರೀಕ್ಷಕರಾದ ಮಹೇಶ್ ಗ್ರಾಮ ಲೆಕ್ಕೀಗರಾದ ಅಜಯ್ ರವರನ್ನು ಗ್ರಾಮಕ್ಕೆ ಕಳಿಸಿದ್ದಾರೆ ಸ್ಥಳದಲ್ಲಿ ಇದ್ದು ಶವ ಸಂಸ್ಕಾರ ನಡೆಸುವಂತೆ ಸೂಚಿಸಿದ್ದಾರೆ,
ಹಾಗೂ ಸ್ಥಳಕ್ಕೆ ಕುಣಿಗಲ್ ಪೊಲೀಸರು ಬಂದು ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮಖದಲ್ಲಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವನ್ನು ಜಾಗ ಗುರುತಿಸಿ ಶವ ಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನಕ್ಕೆ ಎಂದು ಗುರುತಿಸ ಗುರುತಿಸಲಾಗಿದ್ದ ಜಾಗದಲ್ಲಿ ಗ್ರಾಮದ ಕರಿಯಪ್ಪ ಎಂಬುವರು ಉಳುಮೆ ಮಾಡಿ ತೆಂಗಿನ ಗಿಡಗಳನ್ನು ನೆಟ್ಟಿದ್ದರು ಎಂದು ತಿಳಿದುಬಂದಿದ್ದು, ನಾನು ಉಳುಮೆ ಮಾಡುತ್ತಿರುವ ಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಬಿಡುವುದಿಲ್ಲ ಎಂದು ಕರಿಯಪ್ಪ ತಕರಾರು ತೆಗೆದಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಇದು ಸಾರ್ವಜನಿಕ ಸ್ಮಶಾನಕ್ಕೆ ಗುರುತಿಸಿರುವ ಜಾಗವಾಗಿದೆ ಇದನ್ನು ಸಾರ್ವಜನಿಕ ಸ್ಮಶಾನವೆಂದು ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸುವುದಾಗಲಿ ತಕರಾರು ಮಾಡುವುದಾಗಲಿ ಸರಿ ಇರುವುದಿಲ್ಲ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನಿಡಿದ್ದಾರೆ ಹಾಗೂ ಸ್ಥಳೀಯ ಮುಖಂಡರುಗಳು ಮನವರಿಕೆ ಮಾಡಿಕೊಟ್ಟ ಬಳಿಕ ಕರಿಯಪ್ಪ ಸುಮ್ಮನಾಗಿದ್ದಾರೆ ಬಳಿಕ ಅಧಿಕಾರಿಗಳು ಹಾಗೂ ಪೊಲೀಸರ ಸಮ್ಮುಖದಲ್ಲಿ ದಲಿತ ಮಹಿಳೆಯ ಅಂತ್ಯ ಸಂಸ್ಕಾರ ನಡೆದಿದೆ
ಈ ಹಿಂದೆ ಮೃತ ಕಾಡಮ್ಮರ ತಂದೆ ತೀರಿಕೊಂಡ ವೇಳೆ ಶವ ಸಂಸ್ಕಾರ ಮಾಡಲು ಗ್ರಾಮದ ಕೆಲವು ಕಿಡಿಗೇಡಿಗಳು ಅಡ್ಡಿಪಡಿಸಿದ ಕಾರಣ ಗಲಾಟೆ ಆಗಿತ್ತು ಆಗ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದರು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಗ್ರಾಮದಲ್ಲಿ ಇಂತಹ ಅಮಾನವಿಯ ಘಟನೆಗಳು ಮರುಕಳಿಸುತ್ತಿವೆ ಎಂದು ಗ್ರಾಮದ ದಲಿತರು ಆರೋಪಿಸಿದ್ದು ಕೋಡಿಹಳ್ಳಿ,ಕೋಡಿಹಳ್ಳಿಪಾಳ್ಯ ಲಕ್ಷ್ಮಣನಪಾಳ್ಯ,ಗ್ರಾಮದಲ್ಲಿ ಶವ ಸಂಸ್ಕಾರಕ್ಕಾಗಿ ಕೋಡಿಹಳ್ಳಿ ಗ್ರಾಮದ ಸರ್ವೆ ನಂಬರ್ 22ರಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಲಾಗಿದೆ ಸಾರ್ವಜನಿಕ ಸ್ಮಶಾನಕ್ಕೆ ಮಂಜುರಾತಿಗಾಗಿ ಪ್ರಸ್ತಾವನೆ ಸಲ್ಲಿಸಿದ ಹಿನ್ನೆಲೆಯಲ್ಲಿ 2018 ರಲ್ಲಿ ಜಾಗ ಮಂಜೂರಾಗಿತ್ತು ಆದರೆ ಅಧಿಕಾರಿಗಳು ಮಾತ್ರ ಸಾರ್ವಜನಿಕ ಸ್ಮಶಾನದ ಭೂಮಿ ಮಂಜೂರಾದ ಬಳಿಕ ಗಡಿ ಗುರುತಿ ವಶಕ್ಕೆ ಪಡೆಯದೆ ನಿರ್ಲಕ್ಷ್ಯ ವಹಿಸಿದ್ದ ಕಾರಣ ಎಲ್ಲಾ ಗೊಂದಲಕ್ಕೂ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ
ಇನ್ನೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದಿರುವುದು ಕಂಡುಬಂದಿದ್ದು ತಾಲ್ಲೂಕು ಆಡಳಿತ ಇನ್ನಾದರು ಎಚ್ಚೆತ್ತು ಇಂತಹ ಘಟನೆಗಳು ಮರುಕಳಿಸಿದ ರೀತಿಯಲ್ಲಿ ಸ್ಮಶಾನ ಇಲ್ಲದ ಗ್ರಾಮಗಳಿಗೆ ತುರ್ತಾಗಿ ಸ್ಮಶಾನ ಮಂಜೂರು ಮಾಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ,