ಕುಣಿಗಲ್;- ಬಡ ಮಹಿಳೆಯ ಶಸ್ತ್ರಚಿಕಿತ್ಸೆಗೆ ನೆರವಾಗುವುದಲ್ಲದೆ ಸ್ವತಃ ತಾವೆ ನಿಂತು ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿರುವ ಕುಣಿಗಲ್ ಶಾಸಕ ಡಾ,ಹೆಚ್,ಡಿ ರಂಗನಾಥ್ ರವರು ಎಲ್ಲರ ಹುಬ್ಬೆರುವಂತೆ ಮಾಡಿದ್ದಾರೆ
ಕುಣಿಗಲ್ ತಾಲ್ಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಬಡ ಮಹಿಳೆಗೆ ಕಳೆದ ಹತ್ತು ವರ್ಷದ ಹಿಂದೆ ಕಾಲಿನ ಕೀಲು ತಪ್ಪಿ ತೊಂದರೆಯಾಗಿತ್ತು ಆಗ ಅವರು ಯಶಸ್ವಿನಿ ಯೋಜನೆಯಡಿಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಪಡೆದು ಕೀಲನ್ನು ಮರುಜೋಡಣೆ ಮಾಡಿಸಿಕೊಂಡಿದ್ದರು ಗುಣಮುಖರಾಗಿದ್ದರು ಆದರೆ ಹತ್ತು ವರ್ಷದ ಬಳಿಕ ಅವರಿಗೆ ಮತ್ತೆ ಕಾಲಿನ ಕೀಲಿನ ಡಿಸ್ಕ್ ಲೊಕೇಟ್ ಆಗಿತ್ತು ಮತ್ತೊಮ್ಮೆ ಹೋಗಿ ಆಪರೇಷನ್ ಮಾಡಿಸಿಕೊಳ್ಳೋಣ ವೆಂದರೆ ಒಂದೇ ಶಸ್ತ್ರ ಚಿಕಿತ್ಸೆಯನ್ನು ಎರಡು ಬಾರಿ ಮಾಡುವ ಹಾಗೆ ಇಲ್ಲ ಅದಕ್ಕೆ ವಿಮಾ ಯೋಜನೆ ಅನುಮತಿ ನೀಡುವುದಿಲ್ಲ ಹೀಗಾಗಿ ಮುಂದೇನು ಎಂಬ ಯೋಚನೆಯಲ್ಲಿದ್ದ ಆಶಾ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಕ್ಕೆ ಸುಮಾರು ನಾಲ್ಕರಿಂದ ಐದು ಲಕ್ಷ ರೂಪಾಯಿ ತಗಲುತ್ತದ್ದೆ ಎಂದು ತಿಳಿದು ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸಿ ಶಸ್ತ್ರ ಚಿಕಿತ್ಸೆಯನ್ನು ಪಡೆಯುವ ಚೈತನ್ಯ ಆಶಾ ಅಥಾವ ಅವರ ಕುಟುಂಬಕ್ಕೆ ಇರಲಿಲ್ಲ
ಆದರು ಚಲ ಬಿಡದ ಆಶಾ ಹಲವು ಕಡೆಗಳಲ್ಲಿ ಒಡಾಡಿ ಚಿಕಿತ್ಸೆಗೆ ನೆರವು ಕೆಳಿದ್ದಾರೆ ಆದರೆ ಅವರ ಮನವಿಗೆ ಯಾರು ಸ್ಪಂದಿಸಿಲ್ಲ ಜೊತೆಗೆ ಯಾರಿಂದಲು ನೆರವು ಸಹ ಸಿಕ್ಕಿಲ್ಲ ಈ ನಡುವೆ ಅವರು ಎರಡನೆ ಬಾರಿಗೆ ಆಯ್ಕೆಯಾದ ಕುಣಿಗಲ್ ಶಾಸಕ ಡಾ,ರಂಗನಾಥ್ ಅವರ ಬಳಿಗೆ ಬಂದು ತಮ್ಮ ನೋವು ತೋಡಿಕೊಂಡಿದ್ದರು ಕೂಡಲೆ ಮಹಿಳೆಯ ಮನವಿಗೆ ಸ್ಪಂದಿಸಿದ ವೈದ್ಯ ಶಾಸಕರು ತಪಾಸಣೆ ನಡೆಸಿ ಮೂಳೆ ಡಿಸ್ ಲೊಕೇಟ್ ಆಗಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ ಚಿಕಿತ್ಸೆಗೆ ನೆರವಾಗುವುದಾಗಿ ಮಹಿಳೆಗೆ ತಿಳಿಸಿದ್ದಾರೆ ಏಳಿ ಕೇಳಿ ತಾಲ್ಲೂಕಿನ ಮತದಾರರ ಕಷ್ಟಸುಖಗಳಲ್ಲಿ ಭಾಗಿಯಾಗುವ ಶಾಸಕರು ಖುದ್ದು ಶಸ್ತ್ರ ಚಿಕಿತ್ಸೆಯನ್ನು ಮಾಡಲು ತೀರ್ಮಾನಿಸಿ ಮಹಿಳೆಯನ್ನು ಭಾನುವಾರ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಸ್ವತಃ ತಾವೇ ಆಪರೇಷನ್ ಮಾಡಿ ಮಹಿಳೆಯ ಕೀಲು ಮತ್ತು ಮೂಳೆ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಮಾನವಿಯತೆ ಮೆರೆದಿದ್ದಾರೆ
ಜೊತೆಗೆ ನಾಲ್ಕರಿಂದ ಐದು ಲಕ್ಷ ರೂಪಾಯಿ ವೆಚ್ಚ ತಗಲುವ ಶಸ್ತ್ರ ಚಿಕಿತ್ಸೆಯನ್ನು ಬಡ ಮಹಿಳೆಗೆ ಉಚಿತವಾಗಿ ಮಾಡಿದ್ದಾರೆ ಡಾ,ರಂಗನಾಥ್ ರವರು ಶಾಸಕರಾಗುವ ಮೊದಲು ಕೆಂಪೇಗೌಡ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದವರು
ಮೂಲತಃ ಆರ್ಥೊ ಪೆಡಿಕ್ ಸರ್ಜನ್ ಆಗಿದ್ದಾರೆ ಶಾಸಕರಾಗುವ ಮೊದಲೇ ವೈದ್ಯರಾಗಿ ಹೆಸರಾಗಿದ್ದ ಡಾ, ರಂಗನಾಥ್ ರವರು ತಮ್ಮ ಕಾರಿನಲ್ಲಿ ಈಗಲು ಔಷಧಿ ಮಾತ್ರೆ ಸೆರಿದಂತೆ ಚಿಕಿತ್ಸೆಗೆ ಬೇಕಾಗುವ ಪರಿಕರಗಳನ್ನು ಒಯ್ಯುವುದುಂಟು ತಾಲ್ಲೂಕಿನಾದ್ಯಂತ ಪ್ರವಾಸದ ವೇಳೆ ಹಲವರಿಗೆ ವೈದ್ಯಕೀಯ ತಪಾಸಣೆ ನಡೆಸಿ ಸ್ಥಳದಲ್ಲಿ ಚಿಕಿತ್ಸೆಯನ್ನು ನೀಡುತ್ತ ಬಂದಿರುವ ಶಾಸಕ ಡಾ,ರಂಗನಾಥ್ ಅವರು 1989ರಿಂದ 1996ರ ವರೆಗೆ ಬೆಂಗಳೂರಿನ ಕಿಮ್ಸ್ ನಲ್ಲಿ ಮೆಡಿಕಲ್ ಶಿಕ್ಷಣ ಅಧ್ಯಯನ ನಡೆಸಿದ್ದರು ಬಳಿಕ ಮೈಸೂರಿನ ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನಲ್ಲಿ ಅರ್ಥೋಪೆಡಿಕ್ ನಲ್ಲಿ ಎಂ ಎಸ್ ಮಾಡಿದ್ದರು 2001ರಲ್ಲಿ ಅವರ ಎಂಎಸ್ ಮುಗಿದಿದ್ದು ಬಳಿಕ ವೈದ್ಯಕೀಯ ಸೇವೆ ಆರಂಭಿಸಿ 2018 ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಕುಣಿಗಲ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲವು ಸಾಧಿಸಿ ರಾಜಕಾರಣಿಯಾಗಿದ್ದಾರೆ ಆದರೆ ಇಂದಿಗೂ ವೈದ್ಯ ವೃತ್ತಿಯನ್ನು ಮರೆಯದ ಶಾಸಕರು ತಾಲ್ಲೂಕಿನಲ್ಲಿ ಕೊರೋನಾ ಬಂದ ವೇಳೆ ಹಾಗೂ ನಂತರದ ದಿನಗಳಲ್ಲಿ ಹಲವು ವೈದ್ಯಕೀಯ ಶಿಬಿರ ಆಯೋಜಿಸಿ ತಾಲ್ಲೂಕಿನ ಜನತೆಯ ಆರೋಗ್ಯದ ಬಗ್ಗೆ ಒತ್ತು ನೀಡುತ್ತಾ ಬಂದಿದ್ದಾರೆ, news desk @kunigalpublicnews