ಪೋಲಿಸರ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ! ಕುಣಿಗಲ್ ಪೊಲೀಸರ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ,

Spread the love

ಆತ್ಮಹತ್ಯೆಗೆ ಎತ್ನಿಸುತ್ತಿದ್ದ ಯುವಕನನ್ನು ಪತ್ತೆಹಚ್ಚಿ ಯುವಕನ ಪ್ರಾಣ ಉಳಿಸಿದ ಕುಣಿಗಲ್ ಪೊಲೀಸರ ಕರ್ತವ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ!

ಕುಣಿಗಲ್;- ತಾಯಿ ಬುದ್ದಿವಾದ ಹೆಳಿದ್ದಕ್ಕೆ ಮಗ ಮನನೊಂದು ಆತ್ಮಹತ್ಯೆಗೆ ಎತ್ನಿಸಿದ್ದು ಬಳಿಕ ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಯುವಕನೊಬ್ಬ ಜೀವ ಉಳಿದಿದೆ ಕುಣಿಗಲ್ ಮೂಲದ ಪ್ರಸ್ತುತ ಹಾಸನದಲ್ಲಿ ವಾಸವಿರುವ ಗುರುಪ್ರಸಾದ್ ಎಂಬ ಯುವಕ ತಾಲ್ಲೂಕಿನ ಅಂಚೆಪಾಳ್ಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಸೂಪರ್ವೈಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಂಗಳವಾರ ತಾಯಿಯೊಂದಿಗೆ ಕರೆಮಾಡಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಗನಿಗೆ ತಾಯಿ ಬೈದು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಾಯಿಗೆ ಫೋನ್ನಲ್ಲಿ ಮೆಸೇಜ್ ಕಳುಹಿಸಿ ಬಳಿಕ ಫೋನ್ ಸಂಪರ್ಕ ಕಡಿತಗೊಳಿಸಿದ್ದ

ಹಾಸನದಲ್ಲಿದ್ದ ತಾಯಿ ಹಲವು ಬಾರಿ ಮಗನಿಗೆ ಕರೆ ಮಾಡಿದ್ದರು ಸಹ ಮಗ ಕರೆ ಸ್ವೀಕರಿಸಿದ ಹಿನ್ನೆಲೆ ಗಾಬರಿಗೊಂಡ ತಾಯಿ ಕೂಡಲೇ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಗುರುಪ್ರಸಾದ್ ರವರಿಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ತಕ್ಷಣ ಎಚ್ಚೆತ್ತುಕೊಂಡ ಪಟ್ಟಣದ ಪೊಲೀಸರು ಯುವಕನ ಮೊಬೈಲ್ ಟವರ್ ಲೊಕೇಶನ್ ಪತ್ತೆ ಹಚ್ಚಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಅಷ್ಟೊತ್ತಿಗೆ ಆಗಲೇ ಯುವಕ ಗುರುಪ್ರಸಾದ್ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ಇರುವ ನಿರ್ಜನ ಪ್ರದೇಶದ ಮಾವಿನ ತೋಪಿನಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಮೊಬೈಲ್ ಟವರ್ ಲೋಕೆಶನ್ ಆಧರಿಸಿ ಮಾರುವೇಷದಲ್ಲಿ ಸ್ಥಳಕ್ಕೆ ಕುಣಿಗಲ್ ಪೊಲೀಸ್ ಠಾಣೆಯ ಪೆದೆ ರವಿಯವರ ಕಳುಹಿಸಿದ್ದಾರೆ ಜಮೀನಿನ ಮಾಲೀಕನೆಂದು ಯುವಕನಿಗೆ ಪರಿಚಯಿಸಿಕೊಂಡು ಪೇದೆ ರವಿ ಗುರುಪ್ರಸಾದ್ ನನ್ನು ವಿಚಾರಿಸಿದ್ದಾರೆ ತಾಯಿ ಫೋನ್ನಲ್ಲಿ ಬೈದು ಬುದ್ದಿವಾದ ಹೇಳಿದ್ದಕ್ಕೆ ಬೇಸರದಿಂದ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವುದಾಗಿ ತಿಳಿಸಿದ್ದಾನೆ

ಬಳಿಕ ಗುರುಪ್ರಸಾದ್ ಗೆ ಬುದ್ಧಿವಾದ ಹೇಳಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಅಷ್ಟೊತ್ತಿಗಾಗಲೆ ಹಾಸನದಿಂದ ಇವನ ತಾಯಿ ಹಾಗೂ ತಂಗಿ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ ಠಾಣೆಯಲ್ಲಿ ಯುವಕನಿಗೆ ಮುಂದೆ ಈ ರೀತಿ ಮಾಡದಂತೆ ಬುದ್ಧಿವಾದ ಹೇಳಿ ಬಳಿಕ ತಾಯಿಯೊಂದಿಗೆ ಯುವಕನನ್ನು ಕಳುಹಿಸಿಕೊಟ್ಟಿದ್ದು ಪೊಲೀಸರ ಸಮಯ ಪ್ರಜ್ಞೆಯ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಬೇಕಿದ್ದ ಯುವಕನ ಪ್ರಾಣ ಉಳಿದಿದ್ದು ಕುಟುಂಬವನ್ನು ಸೇರಿಕೊಂಡಿದ್ದಾನೆ ಪೊಲೀಸರ ಈ ಕಾರ್ಯಕ್ಕೆ ತಾಲ್ಲೂಕಿನ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ, news desk @publicnewskunigal