ಕೊಡವತ್ತಿ ಗ್ರಾಮದ ಎರಡು ಶಾಲೆಗಳ ಬೀಗ ಮುರಿದು ಅಡುಗೆ ಸಿಲಿಂಡರ್ ಹಾಗೂ ದಿನಸಿ ಪದಾರ್ಥಗಳ ಕಳವು ದೂರು ದಾಖಲು
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕೊಡವತ್ತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಹಾಗೂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಬೀಗ ಮುರಿದು ಅಡುಗೆ ಸಿಲಿಂಡರ್ ಹಾಗೂ ದಿನಸಿ ಸಾಮಗ್ರಿಗಳ ಕಳವು ಮಾಡಿರುವ ಘಟನೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ ಶಾಲೆಯ ಅಡಿಗೆ ಕೋಣೆ ಹಾಗೂ ದಾಸ್ತಾನು ಮಳಿಗೆಯನ್ನು ಬಾಗಿಲಿನ ಬೀಗ ಮುರಿದು ಕಳ್ಳರು ಮಕ್ಕಳ ಬಿಸಿಯೂಟಕ್ಕೆ ಬಳಸುತ್ತಿದ್ದ ಐದು ಅಡುಗೆ ಸಿಲಿಂಡರ್ ಹಾಗೂ 150 ಕೆಜಿ ಅಕ್ಕಿ ಇಪ್ಪತ್ತು ಕೆ.ಜಿ ಗೋಧಿ ಹತ್ತು ಲೀಟರ್ ಅಡುಗೆ ಎಣ್ಣೆ ಸೇರಿದಂತೆ ಇತ್ತೀಚೆಗೆ ಶಾಲೆಗೆ ಸರಬರಾಜಾಗಿದ್ದ 140 ಕೆ.ಜಿ ಯಷ್ಟು ಹಾಲಿನ ಪುಡಿ ಪ್ಯಾಕೆಟ್ ಗಳನ್ನು ಸಹ ಕಳವು ಮಾಡಲಾಗಿದೆ ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕ ಬಿ,ಕೆ ಬೋರೆಗೌಡ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ ಸ್ಥಳಕ್ಕೆ ಪಿಎಸ್ಐ ವೆಂಕಟೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ
ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಾಗೂ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಇತ್ತೀಚಿಗೆ ಮಕ್ಕಳಿಗೆ ಹಾಲಿನ ಪುಡಿ ಪ್ಯಾಕೆಟ್ಗಳನ್ನು ಸರಬರಾಜು ಮಾಡಲಾಗಿತ್ತು ದಿನಸಿ ಪದಾರ್ಥಗಳು ಮತ್ತು ಸಿಲಿಂಡರ್ ಕಳವಾದ ಹಿನ್ನೆಲೆ ಮಂಗಳವಾರ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟ ವ್ಯವಸ್ಥೆ ಕಲ್ಪಿಸಲಾಗದೆ ಮಕ್ಕಳನ್ನು ಮಧ್ಯಾಹ್ನದ ಊಟಕ್ಕೆಂದು ಮನೆಗೆ ಕಳುಹಿಸಲಾಗಿತ್ತು ಎಂದು ಮುಖ್ಯ ಶಿಕ್ಷಕ ಬಿ.ಕೆ ಬೋರೇಗೌಡ ಮಾಹಿತಿ ತಿಳಿಸಿದ್ದಾರೆ ಇತ್ತಿಚೆಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಗ್ರಾಮೀಣ ಪ್ರದೇಶದ ಬೀಟ್ ಪೊಲೀಸ್ ವ್ಯವ್ಯಸ್ಥೆಯನ್ನು ಹೆಚ್ಚುಗೊಳಿಸಬೇಕು ಎಂಬುದು ಸ್ಥಳಿಯರ ಆಗ್ರಹವಾಗಿದೆ,news desk @publicnewskunigal