ಇತ್ತಿಚೇಗೆ ವಿದ್ಯುತ್ ಅವಘಡದಿಂದ ಹಾನಿಗೊಳಗಾದ ಎಲೆಕಡಕಲು ಗ್ರಾಮಕ್ಕೆ ಅಧಿಕಾರಗಳೊಂದಿಗೆ ಶಾಸಕ ಡಾ,ರಂಗನಾಥ್ ಬೇಟಿ ಪರಿಶೀಲನೆ
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ವಿದ್ಯುತ್ ಅವಘಡ ಸಂಭವಿಸಿ ಗ್ರಾಮದ ನೂರಾರು ಮನೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಹೊಗಿದ್ದು ಮಾಹಿತಿ ತಿಳಿದು ಮಂಗಳವಾರ ಶಾಸಕ ಡಾ,ರಂಗನಾಥ್ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ಬೇಟಿ ನೀಡಿ ವಿದ್ಯುತ್ ಅವಘಡದಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ ನಡೆಸಿದ್ದಾರೆ
ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ಹಾನಿಗೊಳಗಾಗಿರುವ ಮನೆಗಳಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ನಿಡುವಂತೆ ಸ್ಥಳದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು ವಿದ್ಯುತ್ ತಗುಲಿ ಗಾಯಗೊಂಡಿದ್ದ ಮಹಿಳೆ ಚಿಕ್ಕತಾಯಮ್ಮ ಮನೆಗೆ ತೆರಳಿ ಮಹಿಳೆಯ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ಬೆಸ್ಕಾಂ ಇಲಾಖೆಯಲ್ಲಿ ಮೂಲಸೌಕರ್ಯ ನಿರ್ವಹಣೆಯಲ್ಲಿ ಬಹಳಷ್ಟು ಸಮಸ್ಯೆ ತೊಂದರೆ ಇದ್ದು
ಮುಂದಿನ ದಿನಗಳಲ್ಲಿ ವಿದ್ಯುತ್ ಅವಘಡದಿಂದ ಗ್ರಾಮದಲ್ಲಿ ಫ್ರೀಜ್ಜ್,ಟಿವಿ,ಪಂಪ್ ಸೆಟ್, ಹಾಗೂ ಇತರೆ ಪರಿಕರಗಳು ಹಾನಿಗೊಳಗಾಗಿರುವುದನ್ನು ಪರಿಶೀಲಿಸಿ ಸರ್ಕಾರದಿಂದ ಬರುವಂತಹ ಪರಿಹಾರ ಕೊಡಿಸಲು ತುರ್ತಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಈ ವೇಳೆ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾದ ಪುರುಷೋತ್ತಮ್,ವಿರಭದ್ರಚಾರಿ ಹುಲಿಯೂರುದುರ್ಗ ಪಿಎಸ್ಐ ಸುನಿಲ್ ಕುಮಾರ್,ಸ್ಥಳಿಯ ಮುಖಂಡರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು