ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಮಧ್ಯಾಹ್ನ ತುಮಕೂರು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಹಾಗೂ ತಾಲ್ಲೂಕು ಪಂಚಾಯತ್ ನ ಆಡಳಿತ ಅಧಿಕಾರಿ ನರಸಿಂಹಮೂರ್ತಿ ಯವರ ಅಧ್ಯಕ್ಷತೆಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಪ್ರಗತಿ ಪರಿಶೀಲನ ಸಭೆಯನ್ನು ಕರೆಯಲಾಗಿತ್ತು
ಸಭೆಯಲ್ಲಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಳದ ಬದು ನಿರ್ಮಾಣ ಕೊಟ್ಟಿಗೆ ನಿರ್ಮಾಣ,ರೈತರ ಭೂಮಿಗಳಲ್ಲಿ ಗಿಡ ನೀಡುವುದು ಸೆರಿದಂತೆ ಇತರೆ ಕಾಮಗಾರಿಗಳಲ್ಲಿ ಪ್ರಗತಿ ಸಾಧಿಸದ ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳು ಹಾಗೂ ಪಿ,ಆರ್,ಇ,ಡಿ ಇಂಜಿನಿಯರ್ ಮತ್ತು ನರೇಗಾ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು
ತಾಲ್ಲೂಕಿನಲ್ಲಿ ಮಳೆಯ ಕೊರತೆಯ ಕಾರಣದಿಂದ ರೈತರು ಸಾಕಷ್ಟು ಸಮಸ್ಯೆಯಲ್ಲಿ ಇದ್ದಾರೆ ಅವರಿಗೆ ನೆರವಾಗುವ ನಿಟ್ಟಿನಲ್ಲಿ ನರೇಗಾ ಯೋಜನೆಯ ಕಾಮಗಾರಿಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸಿ ಜೋತೆಗೆ ಯೋಜನೆಯಿಂದಾಗುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಾಮಾಗಾರಿಗಳ ಅನುಷ್ಠಾನ ಮಾಡಿ ಗ್ರಾಮ ಪಂಚಾಯ್ತಿಗೆ ನಿಗದಿ ಪಡಿಸಿರುವ ಮಾನವ ದಿನಗಳನ್ನು ಪೂರ್ಣಗೊಳಿಸದಿದ್ದಲ್ಲಿ ಅಂತಹ ಪಿಡಿಒಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಜೋತೆಗೆ ಪ್ರತಿವಾರ ಪಿಡಿಒಗಳ ಸಭೆ ಕರೆದು ನರೇಗಾ ಯೋಜನೆಯ ಪ್ರಗತಿ ಪರಿಶೀಲನೆ ನಡೆಸುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಜೋಸೆಫ್ ಗೆ ಸಭೆಯಲ್ಲಿ ಸೂಚಿಸಿದರು
ಗ್ರಾಮ ಪಂಚಾಯಿತಿಯಲ್ಲಿ ಕಂದಾಯ ವಸೂಲಿಯಲ್ಲಿ ಹಿಂದೆ ಉಳಿದಿರುವ ಗ್ರಾಮ ಪಂಚಾಯಿತಿ ಗಳಿಗೆ ನೋಟಿಸ್ ಜಾರಿಮಾಡುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು ಅನಗತ್ಯವಾಗಿ ಕಚೇರಿಯಲ್ಲಿ ಕುಳಿತಿರುವವರಿಗೆ ಸಂಬಳ ನಿಡಲಾಗುತ್ತಿದ್ದೆ ಕೆಲ ಗ್ರಾಮ ಪಂಚಾಯ್ತಿಗಳು ಮಾತ್ರ ಕಂದಾಯ ವಸೂಲಾತಿಯಲ್ಲಿ ಹಿಂದೆ ಉಳಿದಿವೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯನಿರ್ವಹಣ ಅಧಿಕಾರಿಗಳಿಗೆ ತಿಳಿಸಿದರು
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಕಂದಾಯ ಅಧಿಕಾರಿಗಳ ಹಾಗೂ ಕಾನುನೂ ಸೇವೆಗಳ ಪ್ರಾಧಿಕಾರ ಅಧ್ಯಕ್ಷರು ಆಗೂ ಸದಸ್ಯ ಕಾರ್ಯದರ್ಶಿಗಳ ಜೋತೆಗೆ ಸಭೆ ನಡೆಸಿ ಮೌಡ್ಯಚರಣೆ ಆಚರಿಸುವವರಿಗೆ ಮನವರಿಕೆ ಮಾಡಿ ಮೌಡ್ಯ ಆಚರಣೆ ಹೆಸರಲ್ಲಿ ಬಾಣಂತಿ ಹಸುಗೂಸನ್ನು ಊರಿನಿಂದ ಹೊರಗೆ ಇರಿಸಿ ಮೌಡ್ಯ ಆಚರಿಸುವವರ ಬಗ್ಗೆ ಗಮನ ಹರಿಸಿ ಮನವೊಲಿಸಿ ಇದಕ್ಕು ಸ್ಪಂದಿಸದಿದ್ದರೆ ಮುಂದಿನ ಕ್ರಮಕ್ಕೆ ತಾಲ್ಲೂಕು ಮತ್ತು ಜಿಲ್ಲಾಡಳಿತದ ಗಮನಕ್ಕೆ ತನ್ನಿ ಎಂದು ಪಿಡಿಒ ಗಳಿಗೆ ತಿಳಿಸಿದರು
ವಿದ್ಯುತ್ ಬಾಕಿ ಬಾಗೇನಹಳ್ಳಿ ಗ್ರಾಮ ಪಂಚಾಯ್ತಿ ಒಂದು ಕೊಟಿ ಹತ್ತು ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿದ್ದು ಸಭೆಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು ವಿದ್ಯುತ್ ಬಾಕಿ ಇರುವ ಗ್ರಾಮ ಪಂಚಾಯ್ತಿಗಳು ಕೂಡಲೆ ಬಾಕಿ ಪಾವತಿಸುವಂತೆ ತಾಕೀತು ಮಾಡಿದರು ಅಧಿಕಾರಿಗಳು ಗಂಭೀರವಾಗಿ ಚರ್ಚೆ ನಡೆಸುತ್ತಿದ್ದರೆ ಸಭೆಗೆ ಬಂದಿದ್ದ ಕೆಲ ಅಧಿಕಾರಿಗಳು ಮಾತ್ರ ಮೊಬೈಲ್ ಪೊನ್ ನೋಡುವುದರಲ್ಲಿ ಬಿಸಿಯಾಗಿದ್ದರು ಇನ್ನೂ ಅಮೃತೂರು ಪಿಡಿಒ ಶಿವಣ್ಣ ಮೋಬೈಲ್ ನಲ್ಲಿ ಕ್ಯಾಂಡಿ ಕ್ರಶ್ ಹಾಡುತ್ತಿರುವುದು ಕಂಡುಬಂತು ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಣ ಅಧಿಕಾರಿ ಜೋಸೆಫ್,ಸಹಾಯಕ ನಿರ್ದೇಶಕ ಸುನೀಲ್,ಸೆರಿದಂತೆ ಗ್ರಾಮ ಪಂಚಾಯ್ತಿ ಪಿಡಿಒ ತಾ,ಪಂ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು, @publicnewskunigal