ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನ ಸಮಾರಂಭ!

Spread the love

ಪಟ್ಟಣದ ರಮ್ಯಶ್ರೀ ಪಾರ್ಟಿ ಹಾಲ್ ನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಸಕರಿಗೆ ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕುಣಿಗಲ್ ಪಟ್ಟಣದಲ್ಲಿ ಬುಧವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ,ರಂಗನಾಥ್ ನಾನು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ವೇಳೆ ಬಹಳ ಶಾಂತಿ ಇರುತ್ತಿತ್ತು ಆದರೆ ನಾನು ಶಾಸಕನಾದ ಬಳಿಕ ಆತಂಕ ಹೆಚ್ಚಾಗಿದೆ ಜೋತೆಗೆ ನನ್ನ ಜವಾಬ್ದಾರಿಯು ಕೂಡ ಹೆಚ್ಚಿದೆ ಸಮಯಕ್ಕೆ ಸರಿಯಾಗಿ ನನ್ನ ಮತದಾರರ ಕೆಲಸ ಕಾರ್ಯಗಳಿಗೆ ಕೆಲಸದ ಒತ್ತಡದ ನಡುವೆ ಅವರಿಗೆ ಸ್ಪಂದಿಸುವುದು ನನ್ನ ಕರ್ತವ್ಯ ವಿರೊಧ ಪಕ್ಷದವರ ಟೀಕೆ ಟಿಪ್ಪಣಿಗಳ ನಡುವೆ ದ್ವೇಷ ಅಸೂಯೆ,ಟೀಕೆ,ಟಿಪ್ಪಣಿಗಳ ನಡುವೆ ಎಲ್ಲವನ್ನೂ ಮರೆತು ಅಭಿವೃದ್ದಿಗೆ ಒತ್ತು ನೀಡುವ ಮೂಲಕ ಮುಂದೆ ಸಾಗಬೇಕಿದೆ ಎಂದರು ಇದೆ ವೇಳೆ

ಎಸ್,ಎಲ್,ಸಿ,ಹಾಗೂ ಪಿಯುಸಿ ಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಶಾಸಕ ಡಾ,ರಂಗನಾಥ್ ಸಮ್ಮುಖದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ಮರಣ ಕಾಣಿಕೆ ನೀಡಿ ಶಾಸಕರನ್ನು ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ನ ತಾಲ್ಲೂಕು ಅಧ್ಯಕ್ಷ ಕಪನಿಪಾಳ್ಯ ರಮೇಶ್, ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ,ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಜೊಸೇಫ್,ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ನವೀನ್‌ಗೌಡ, ಸ್ನೇಹಕಲಾ ಪ್ರತಿಷ್ಠಾನದ ಅಧ್ಯಕ್ಷ ದಿನೇಶ್ ಕುಮಾರ್, ಸಾಹಿತಿ ಹಾಗೂ ಶಿಕ್ಷಕ ನಿಡಸಾಲೆ ಪ್ರಸಾದ್, ಕರ್ನಾಟಕ ಕಾರ್ಯನಿರ್ತಾ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಸಿದ್ದಲಿಂಗಸ್ವಾಮಿ,ಪತ್ರಕರ್ತರಾದ ಲೊಕೇಶ್,ಶಂಕರ್,ಎಂ.ಡಿ ಮೋಹನ್,ಸೆರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು @publicnewskunigal