ಕುಣಿಗಲ್ ತಾಲ್ಲೂಕಿನ ಟಿ,ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪಸಂದ್ರ ಗ್ರಾಮದ ಸರ್ಕಾರಿ ಭೂಮಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಔಷದಿ ಮತ್ತು ಮಾತ್ರೆಗಳನ್ನು ಕಿಡಿಗೇಡಿಗಳು ತಂದು ಎಸೆದಿರುವ ಘಟನೆ ನಡೆದಿದೆ
ಸ್ಥಳಿಯರ ಮಾಹಿತಿ ಇನ್ನೆಲೆ ಸ್ಥಳಿಯ ವೈದ್ಯರೊಂದಿಗೆ ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ,ಮರಿಯಪ್ಪ ಪರಿಶೀಲನೆ ನಡೆಸಿದ್ದು ಘಟನೆ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ,ಹಾಗೂ ಕ್ರಮಕ್ಕೆ ಪರಿಸರ ಇಲಾಖೆ,ಔಷಧ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಹಾಗೂ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ,
ಟಿ,ಹೊಸಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆಪ್ಪಸಂದ್ರ ಗ್ರಾಮದಲ್ಲಿ ಕಿಡಿಗೇಡಿಗಳು ಔಷದಿ,ಮಾತ್ರೆ,ಸಿರಪ್,ಇಂಜೆಕ್ಷನ್,ವಿವಿಧ ಬಗೆಯ ಡ್ರಗ್ ಗಳನ್ನು ಎಸೆದು ಬೆಂಕಿ ಹಾಕಲು ಎತ್ನಿಸಿದ್ದಾರೆ ಬೆಂಕಿ ಅತ್ತಿಕೊಳ್ಳದ ಕಾರಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಇನ್ನೂ ಔಷದಿ ಮಾತ್ರೆಗಳು ಭೂಮಿಯಲ್ಲಿ ಹಾಗೂ ನೀರಿನಲ್ಲಿ ಬೆರೆತರೆ ಸ್ಥಳಿಯ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬಿರಲಿದೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ
ಅವಧಿ ಮುಗಿಯದ ಮತ್ತು ಅವಧಿ ಮುಗಿದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿ ಮಾತ್ರೆಗಳನ್ನು ತಂದು ಸುರಿದಿರುವವರ ವಿರುದ್ದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜೋತೆಗೆ ಈ ಸ್ಥಳದಿಂದ ಔಷದಿ ಮಾತ್ರೆಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯವಾಗಿದೆ ಈ ಹಿಂದೆ ಬೆಂಗಳೂರು ಸೆರಿದಂತೆ ವಿವಿಧ ಕಡೆಯಿಂದ ರಾತ್ರೊ ರಾತ್ರಿ ಕಸವನ್ನು ತಂದು ತಾಲ್ಲೂಕಿನ ವಿವಿಧ ಕಡೆಗಳಲ್ಲಿ ರಸ್ತೆ ಬದಿಯಲ್ಲಿ ಸುರಿದು ಹೊಗುತ್ತಿದ್ದ ಘಟನೆಗಳು ಮಾಸುವ ಮುನ್ನ ಈ ರೀತಿಯ ಔಷಧಿ ಮಾತ್ರೆಗಳನ್ನು ತಂದು ಸುರಿದಿರುವುದು ಸ್ಥಳಿಯರ ಆತಂಕಕ್ಕೆ ಕಾರಣವಾಗಿದೆ @publicnewskunigal