ಕುಣಿಗಲ್;-ಸೌಜನ್ಯ ಪ್ರಕರಣ ಮರುತನಿಖೆಗೆ ಒತ್ತಾಯಿಸಿ ಕೆ,ಆರ್,ಎಸ್ ಪಕ್ಷದ ವತಿಯಿಂದ ಅಮ್ಮಿಕೋಳ್ಳಲಾಗಿರುವ ಪಾದಯಾತ್ರೆ ಮಂಗಳವಾರ ಕುಣಿಗಲ್ ಪಟ್ಟಣ ತಲುಪಿದೆ
ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಬೆಳ್ತಂಗಡಿಯ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿನವರೆಗೆ 14 ದಿನಗಳ ವರೆಗೆ ನಡೆಯುತ್ತಿರುವಪಾದಯಾತ್ರೆಯಲ್ಲಿ”ದೌರ್ಜನ್ಯದ ವಿರುದ್ಧ ಸೌಜನ್ಯ” ಎಂಬ ಘೋಷ ವಾಕ್ಯದೊಂದಿಗೆ ಪಾದಯಾತ್ರೆಯನ್ನು ಅಮ್ಮಿಕೋಳ್ಳಲಾಗಿದ್ದು ಪಾದಯಾತ್ರೆ 11ನೇ ದಿನಕ್ಕೆ ಕಾಲಿಟ್ಟಿದ್ದು ಮಂಗಳವಾರ ಕುಣಿಗಲ್ ತಲುಪಿದೆ
ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಕೆ,ಆರ್,ಎಸ್ ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮಾತನಾಡಿ, ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮರುತನಿಗೆ ಆಗಬೇಕು, ಸೌಜನ್ಯ ಮಹಿಳಾ ಸುರಕ್ಷಾ ಆಯೋಗ ಸ್ಥಾಪನೆ ಆಗಬೇಕು, ಕರ್ತವ್ಯಲೋಪವೆಸಗಿದ ತನಿಕಾಧಿಕಾರಿಯ ವಿರುದ್ಧ ತನಿಖೆಯಾಗಬೇಕು, ದೇಶದಲ್ಲಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಸಂಬಂಧಿತ ಪ್ರಕರಣಗಳು ಪ್ರಾಮುಖ್ಯತೆ ಮೇಲೆ ನಿಗದಿತ ಸಮಯದಲ್ಲಿ ಬಗೆಹರಿಯಬೇಕು, ಮಕ್ಕಳ ಮತ್ತು ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳನ್ನು ತನಿಖೆ ಮಾಡಲು ವಿಶೇಷ ತನಿಖಾ ಸಂಸ್ಥೆ ರಚನೆ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಅಗ್ರಹಿಸಿದರು. 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ 17 ವರ್ಷದ ಸೌಜನ್ಯ ಎಂಬ ಯುವತಿಯ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು ಪೊಲೀಸರು ಆರೋಪಿ ಎಂದು ಬಂಧಿಸಿದ್ದ ಸಂತೋಷ ರಾವ್ ನನ್ನು ಸಿ,ಬಿ,ಐ ನ್ಯಾಯಾಲಯ ನಿರ್ದೋಷಿ ಎಂದು ತೀರ್ಮಾನಿಸಿ ಬಿಡುಗಡೆಗೊಳಿಸಿದೆ ಆದರೆ ನಿಜವಾದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿರುವ ತನಿಕಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಹಾಗೂ ಈ ಪ್ರಕರಣವನ್ನು ರಾಜ್ಯ ಸರ್ಕಾರ ಮರುತನಿಖೆ ನಡೆಸಬೇಕೆಂದು
ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ ಆರ್ ಎಸ್) ಪಕ್ಷದ ವತಿಯಿಂದ “ದೌರ್ಜನ್ಯದ ವಿರುದ್ಧ ಸೌಜನ್ಯ” ಪಾದಯಾತ್ರೆಯನ್ನು ಕೆ ಆರ್ ಎಸ್ ಪಕ್ಷವು ನಡೆಸುತ್ತಿದ್ದು, ರಾಜ್ಯದ ಜನರು ಈ ವಿಚಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ರಾಜ್ಯ ಮಾಹಿತಿಯಕ್ಕೂ ಹೋರಾಟ ವೇವೇದಿಕೆಯ ರಾಜ್ಯಧ್ಯಕ್ಷರಾದ ರಮೇಶ್ ಪಾದಯಾತ್ರೆಗೆ ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು ಪಾದಯಾತ್ರೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಕೆ,ಆರ್,ಎಸ್, ಪಕ್ಷದ ಕಾರ್ಯಕರ್ತರು ಸೆರಿದಂತೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ. ಎನ್., ರಾಜ್ಯ ಜಂಟಿ ಕಾರ್ಯದರ್ಶಿ ರಘುಪತಿ ಭಟ್, ರಾಜ್ಯ ಉಪಾಧ್ಯಕ್ಷರಾದ ಲಿಂಗೇಗೌಡ ಎಸ್. ಎಚ್, ರಾಜ್ಯ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್ ಭಟ್ಟರಹಳ್ಳಿ ಮತ್ತು ನರಸಿಂಹಮೂರ್ತಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ನಂದಾರೆಡ್ಡಿ, ಆರೋಗ್ಯಸ್ವಾಮಿ, ಎಲ್. ಜೀವನ್, ಕೇಶವ್ ಮೂರ್ತಿ, ತಾಲೂಕು ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಾಗೇಂದ್ರ ವೈ. ಪಿ. ಶ್ರೀನಿವಾಸ್,ಟಿ ಸೆರಿದಂತೆ ಹಲವರು ಉಪಸ್ಥಿತರಿದ್ದರು,@publicnewskunigal