ಪೊಲೀಸ್ ಇಲಾಖೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಮಿ ಸಮಾಜ ಸೇವಕ ಕೆ,ಜಿ ಕೃಷ್ಣ ಬಂಧನ ಖಂಡಿಸಿ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಹಾಗೂ ಡಿ ವೈ ಎಸ್ ಪಿ ಕೃಷ್ಣಕುಮಾರ್ ಇವರ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳು ಹುಲಿಯೂರುದುರ್ಗ ಪಟ್ಟಣದ ನೂರಾರು ಮಂದಿ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಆಗ್ರಹಿಸಿದರು
ಕುಣಿಗಲ್ ತಾಲ್ಲೂಕಿನ ಹುಲಿಯೂರುರ್ಗದ ವ್ಯಾಪ್ತಿಯ ಕಂಪ್ಲಾಪುರ ಗ್ರಾಮದ ಸಮಾಜ ಸೇವಕ ಉದ್ಯಮಿ ಕೆ.ಜಿ. ಕೃಷ್ಣ ಅಭಿಮಾನಿಗಳು ಪಕ್ಷಾತೀತವಾಗಿ ಹಾಗೂ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ನಾಗರಿಕರು ಹುಲಿಯೂರುದುರ್ಗ ಪಟ್ಟಣದ ಹಳೆಪೇಟೆಯ ಹುಲಿಯೂರಮ್ಮ ದೇವಸ್ಥಾನದಿಂದ ಪ್ರತಿಭಟನಾ ಜಾಥಾ ಮೂಲಕ ಪ್ರತಿಭಟನಾಕಾರರು ಧಿಕ್ಕಾರ ಕೂಗುತ್ತಾ ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಹಾಗೂ ಡಿ ವೈ ಎಸ್ ಪಿ ಯು.ಡಿ.ಕೃಷ್ಣಕುಮಾರ್ ಅಧಿಕಾರ ದುರ್ಬಳಕೆ ಮಾಡಿಕೊಂಡು ಉದ್ಯಮಿ ಕೆ.ಜಿ ಕೃಷ್ಣ ಎಂಬುವರಿಗೆ ಉದ್ದೇಶಪೂರ್ವಕವಾಗಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಕಿರುಕುಳ ನೀಡಿ ಅವರ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಈ ಇಬ್ಬರು ಅಧಿಕಾರಿಗಳು ಪೊಲೀಸ್ ಇಲಾಖೆಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಕೆ,ಜಿ ಕೃಷ್ಣ ರವರಿಗೆ ರೌಡಿಶೀಟರ್ ಪಟ್ಟ ಕಟ್ಟಲು ಹೊರಟಿರುವ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಸುವ ಜೋತೆಗೆ ವಿಚಾರಣೆ ಕಾಯ್ದಿರಿಸಿ ಇಬ್ಬರು ಅಧಿಕಾರಿಗಳನ್ನು ಕೂಡಲೆ ರಾಜ್ಯ ಸರ್ಕಾರ ಅಮಾನತ್ತು ಮಾಡಬೇಕು
ಸುಳ್ಳು ಮೊಕದ್ದೊಮ್ಮೆ ದಾಖಲಿಸಿರುವುದನ್ನು ಕೈ ಬಿಡಬೇಕು ಪೊಲೀಸ್ ಅಧಿಕಾರವನ್ನು ದುರ್ಬಳ ಕೆ ಮಾಡಿಕೊಂಡು ಅಮಾಯಕರಿಗೆ ತೊಂದರೆ ನೀಡುವ ಜೊತೆಗೆ ದಕ್ಷತೆಗೆ ಪ್ರಾಮಾಣಿಕತೆಗೆ ಹೆಸರಾಗಿರುವ ಕರ್ನಾಟಕ ಪೊಲೀಸ್ ಇಲಾಖೆಗೆ ಕಳಂಕ ತರಲು ಹೊರಟಿರುವ ಈ ಅಧಿಕಾರಿಗಳ ವಿರುದ್ಧ ಈಗಾಗಲೇ ಭ್ರಷ್ಟಾಚಾರದ ಬಗ್ಗೆ ಖಾಸಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಹಾಗೂ ರೌಡಿಶೀಟರ್ ಬೆಮಲ್ ಕಾಂತರಾಜು ಕೂಡಲೇ ಬಂಧಿಸಬೇಕು ಅನ್ಯಾಯ ಕೊಳಗಾಗಿರುವ ಸಮಾಜ ಸೇವಕ ಉದ್ಯಮಿ ಕೆ.ಜಿ.ಕೃಷ್ಣ ಅವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ರಕ್ಷಣೆ ಕೊಡಬೇಕು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಸಿಬಿಐ ತನಿಖೆ ಒಳಪಡಿಸಬೇಕೆಂದು ಒತ್ತಾಯಪಡಿಸಿ ಹುಲಿಯೂರುದುರ್ಗ ಉಪ ತಹಶೀಲ್ದಾರ್ ಯಶೋಧ ರವರ ಮೂಲಕ ರಾಜ್ಯ ಪಾಲರಿಗೆ ಮನವಿ ಸಲ್ಲಿಸಿದರು,ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಆಮ್ ಆದ್ಮಿ ಪಕ್ಷದ ರೈತ ಮೋರ್ಚಾದ ಅಧ್ಯಕ್ಷ ಯೋಗೀಶ್ ಗೌಡ (ಕರಿಗೌಡ) ಕರ್ನಾಟಕ ರಾಜ್ಯ ಕೆಂಪೇಗೌಡ ರೈತರ ಸಂಘಟನೆ ಅಧ್ಯಕ್ಷ ಬಾಳೇನಹಳ್ಳಿ ಶಿವಣ್ಣ ಗೌಡ, ವೆಂಕಟೇಶ್,ಉಮೇಶ್, ನಾಗೇಶ್, ಚಂದ್ರಪ್ಪ, ವೆಂಕಟೇಶ್, ಪ್ರಕಾಶ್,ಶಿವಲಿಂಗಯ್ಯ, ಲಿಂಗರಾಜು,ಅತಿಕ್ ಅಹ್ಮದ್, ಶಿವಣ್ಣ,ಹರೀಶ್, ನೂರಾರು ಮಂದಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು @publicnewskunigal