ರಸ್ತೆ ಬದಿಯಲ್ಲಿ ರಸ್ತೆ ದಾಟಲು ದ್ವಿಚಕ್ರ ವಾಹನದಲ್ಲಿ ನಿಂತಿದ್ದ ವೇಳೆ ಅಪಘಾತ ಗ್ರಾಮ ಪಂಚಾಯಿತಿ ವಾಟರ್ ಮ್ಯಾನ್ ಸಾವು ಪ್ರಕರಣ ದಾಖಲು,
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಳೆವೂರು ಗ್ರಾಮ ಪಂಚಾಯಿತಿಯಲ್ಲಿ ವಾಟರ್ ಮೆನ್ ಹಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬೂದಾನಹಳ್ಳಿ ಗ್ರಾಮದ ಲೋಕೇಶ್(40) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಶನಿವಾರ ರಾಜ್ಯ ಹೆದ್ದಾರಿ 33ರ ಹುಲಿಯೂರುದುರ್ಗ ಬೈಪಾಸ್ ನ ಹಳೆವೂರು ಜಂಕ್ಷನ್ ನಲ್ಲಿ ರಸ್ತೆ ದಾಟಲು ದ್ವಿಚಕ್ರ ವಾಹನದಲ್ಲಿ ನಿಂತಿದ್ದ ವೇಳೆ ಕುಣಿಗಲ್ ಕಡೆಯಿಂದ ಅತಿ ವೇಗವಾಗಿ ಬಂದ ಟಿ,ಟಿ ವಾಹನ ಚಾಲಕನ ಅಜಾಗರುಕತೆಯ ಕಾರಣದಿಂದಾಗಿ ರಸ್ತೆ ಬದಿಯಲ್ಲಿ ರಸ್ತೆ ದಾಟಲು ದ್ವಿಚಕ್ರ ವಾಹನದಲ್ಲಿ ನಿಂತಿದ್ದ ಲೋಕೇಶ್ ಗೆ ಗುದ್ದಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಲೋಕೇಶ್ ನನ್ನು ಸ್ಥಳಿಯರು ಕೂಡಲೆ 108 ಆಂಬುಲೆನ್ಸ್ ನಲ್ಲಿ ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಂತೆಮಾವತ್ತೂರು ಬಳಿ ಲೋಕೇಶ್ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ ಘಟನೆ ಸಂಭಂದ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೆಶೀಫ್ ಅಧಿಕಾರಿಗಳ ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾರಣದಿಂದಾಗಿ ರಾಜ್ಯ ಹೆದ್ದಾರಿ 33ರ ಹಳೆವೂರು ಜಂಕ್ಷನ್ ಬಳಿ ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸುತ್ತಿದ್ದು ಅಪಘಾತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡರೆ ಕೆಲವರು ಕೈ ಕಾಲು ಕಳೆದುಕೊಂಡು ಅಂಗವಿಕಲರಾಗಿದ್ದಾರೆ ಈ ಬಗ್ಗೆ ಹಲವು ಭಾರಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರು ಸಹ ಯಾವುದೆ ಪ್ರಯೋಜನ ಇಲ್ಲವಾಗಿದೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪರಿಶೀಲಿಸಿ ಅಪಘಾತ ತಡೆಗೆ ಕ್ರಮ ಕೈಗೊಳ್ಳಬೇಕೆಂಬುದು ಸ್ಥಳೀಯರ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ@publicnewskunigal