ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ದಲಿತರು ಒಡಾಡುವ ರಸ್ತೆ ಸವರ್ಣಿಯರಿಂದ ಅಡ್ಡಿ ನ್ಯಾಯಕ್ಕಾಗಿ ಆಗ್ರಹಿಸಿ ದಲಿತ ಮುಖಂಡರಿಂದ ಧರಣಿ!

Spread the love

ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿಯ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ದಲಿತ ಕುಟುಂಬದವಾರಿಗೆ ಸಾರ್ವಜನಿಕ ರಸ್ತೆಯಲ್ಲಿ ಒಡಾಡಲು ಅಡ್ಡಿಪಡಿಸಿ ಸಾಮಾಜಿಕ ಬಹಿಷ್ಕಾರ ಹಾಕಿರು ಅಮಾನವಿಯ ಘಟನೆ ನಡೆದಿದ್ದು ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಭಾರಿ ಮನವಿ ಮಾಡಿದ್ದರು ಸಹ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ

ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮುಂಭಾಗ ಶುಕ್ರವಾರ ಸಂವಿಧಾನ ಶಿಲ್ಪಿ ಡಾ,ಬಿ,ಆರ್ ಅಂಬೇಡ್ಕರ್ ಭಾವಚಿತ್ರ ಇರಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಲಾಯಿತು ಘಟನೆಯ ವಿವರ;-ಸಂತೆಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ವಾಸಿಸುತ್ತಿರುವ ದಲಿತರಿಗೆ ಒಡಾಡಲು ರಸ್ತೆ ಬಿಡದಂತೆ ಸವರ್ಣಿಯರು ಅಡ್ಡಿಪಡಿಸಿರುವ ಅಮಾನವಿಯ ಘಟನೆ ನಡೆದಿದ್ದು ಈ ಬಗ್ಗೆ ಗ್ರಾಮದ ದಲಿತರು ಸ್ಥಳಿಯ ಗ್ರಾಮ ಪಂಚಾಯ್ತಿ ಹಾಗೂ ತಹಶೀಲ್ದಾರ್‌,ತಾಲ್ಲೂಕುಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ದೂರು ನೀಡಿ ಮೂರು ತಿಂಗಳುಗಳು ಕಳೆದರು ಸಹ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಗ್ರಾಮದಲ್ಲಿ ಸವರ್ಣಿಯರ ನಡುವೆ ಎರಡು ದಲಿತ ಕುಟುಂಬ ವಾಸಿಸುತ್ತಿರುವ ಕಾರಣಕ್ಕೆ ಒಡಾಡುವ ರಸ್ತೆಗೆ ಅಡ್ಡಿಪಡಿಸುತಿರುವ ಬಗ್ಗೆ ಆರೋಪ ಕೇಳಿಬಂದಿದೆ

ಇತ್ತಿಚೆಗೆ ಗ್ರಾಮ ಪಂಚಾಯ್ತಿ ವತಿಯಿಂದ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ ಆದರೆ ಗ್ರಾಮದ ಜಯರಾಮಯ್ಯ ಎಂಬುವವರು ಸಾರ್ವಜನಿಕರು ಒಡಾಡುವ ಮನೆಯ ಮುಂದಿನ ರಸ್ತೆಯಲ್ಲಿ ನೀರಿನ ಸಂಪ್‌ ನಿರ್ಮಿಸಿ ಮನೆಯ ಮೇಲ್ಛಾವಣಿಗೆ ಸೇರಿಸಿ ರಸ್ತೆಗೆ ಹೊಂದಿಕೊಂಡಂತೆ ಕಬ್ಬಿಣದ ಪೈಪ್ ನಿಲ್ಲಿಸಿ ಸೀಟ್‌ ಅಳವಡಿಸಿ ರಸ್ತೆಯಲ್ಲಿ ಕಲ್ಲುಗಳನ್ನು ಇರಿಸಿ ದಲಿತ ಕುಟುಂಬದವರಿಗೆ ಒಡಾಡಲು ಅಡ್ಡಿಪಡಿಸಿದ್ದು ಈ ಬಗ್ಗೆ ಪ್ರಶ್ನಿಸಲು ಹೊದರೆ ಇಲ್ಲಿ ನಿವುಗಳು ಒಡಾಡಬೇಡಿ ಎಂದು ದೌರ್ಜನ್ಯ ಮಾಡುವ ಮೂಲಕ ಪ್ರತಿನಿತ್ಯ ತೊಂದರೆ ನಿಡುತ್ತಿದ್ದಾರೆ ಎಂದು ದಲಿತ ಸಮುದಾಯದಕ್ಕೆ ಸೇರಿದ ಸೀಳ್ಳೆಕ್ಯಾತ ಜನಾಂಗದ ಲಕ್ಷ್ಮಿನರಸಿಂಹಯ್ಯ ತಿಳಿಸಿದ್ದಾರೆ ಈ ಬಗ್ಗೆ ಹಲವು ಭಾರಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಮೂರುಭಾರಿ ದೂರು ನೀಡಿದರು ಇದುವರೆಗೆ ಯಾವುದೆ ಕ್ರಮ ಕೈಗೋಳ್ಳದ ಹಿನ್ನೆಲೆಯಲ್ಲಿ ಶುಕ್ರವಾರ ದಲಿತ ಮುಖಂಡರು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ಕುಳಿತಿರುವ ಘಟನೆ ನಡೆದಿದೆ ಈ ವೇಳೆ ದಲಿತ ಮುಖಂಡರಾದ ಶಿವಶಂಕರ್,ರಾಮಲಿಂಗಯ್ಯ,ದಲಿತ್ ನಾರಯಣ್,ರಾಮಕೃಷ್ಣ,ರಾಜುವೆಂಕಟಪ್ಪ,ನರಸಿಂಹಮೂರ್ತಿ,ಕುಮಾರ್,ರಾಜು,ಶಶಿಕುಮಾರ್ ಕೆ,ಆರ್,ಎಸ್,ಪಕ್ಷದ ತಾಲ್ಲೂಕು ಅಧ್ಯಕ್ಷ ನಾಗರಾಜು,ಎಸ್,ಕಾರ್ಯದರ್ಶಿ ಮಂಜುನಾಥ್ ಸೆರಿದಂತೆ ಹಲವರು ಉಪಸ್ಥಿತರಿದ್ಧರು, @publicnewskunigal