ಕರ್ತವ್ಯಲೋಪದ ಹಿನ್ನೆಲೆ ಹುಲಿಯೂರುದುರ್ಗ ಪಿಎಸ್ಐ ಅಮಾನತ್ತು!

Spread the love

ಕರ್ತವ್ಯಲೊಪದ ಹಿನ್ನೆಲೆ ಹುಲಿಯೂರುದುರ್ಗ ಪಿ,ಎಸ್‌,ಐ ಸುನೀಲ್‌ ಕುಮಾರ್‌ ಅಮಾನತ್ತುಗೋಳಿಸಿ ಆದೇಶಿಸಿದ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ!

ಹುಲಿಯೂರುದುರ್ಗ ಪಟ್ಟಣದಲ್ಲಿ ನಡೆದ ರೌಡಿಶೀಟರ್‌ ಸೂರಿ(ಕ್ಯಾಪ್ಟನ್‌ ಸೂರಿ) ಹತ್ಯೆ ಪ್ರಕರಣ ಸಂಬಂಧಿಸಿದಂತೆ ಕರ್ತವ್ಯಲೋಪ ಹಿನ್ನೆಲೆ ಪಿ,ಎಸ್‌,ಐ ಸುನೀಲ್‌ ಕುಮಾರ್‌ ರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ,ವಿ ಅಶೋಕ್‌ ರವರು ಅಮಾನತ್ತುಗೋಳಿಸಿ ಆದೇಶಿಸಿದ್ದಾರೆ ರೌಡಿಶಿಟರ್‌ ಹತ್ಯೆಯಾದ ದಿನ ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ಪಿ,ಎಸ್‌,ಐ ಸುನೀಲ್‌ ಕುಮಾರ್‌,ಮತ್ತು ವೃತ್ತ ನಿರೀಕ್ಷಕ ಮಾಧ್ಯನಾಯಕ್‌ ಒಂದೆ ದಿನದಂದು ರಜೆಮೇಲೆ ತೆರಳಿದ್ದರು ಈ ಪ್ರಕರಣ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿತ್ತು ಹತ್ಯೆಯಾದ ರೌಡಿಶೀಟರ್‌ ಸೂರಿ ಅಲಿಯಾಸ್‌ (ಕ್ಯಾಪ್ಟನ್‌ ಸೂರಿ) ಪ್ರಕರಣ ಒಂದರಲ್ಲಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದ ಇತ್ತಿಚೆಗಷ್ಟೆ ಬಿಡುಗಡೆಯಾಗಿ ಬಂದು ಕಳೆದ ಆರು ತಿಂಗಳುಗಳಿಂದ ಹುಲಿಯೂರುದುರ್ಗ ಪಟ್ಟಣದಲ್ಲಿ ಕುಟುಂಬ ಸದಸ್ಯರೊಂದಿಗೆ ವಾಸವಿದ್ದ ಕೋಲೆ ನಡೆದ ಮೂರುದಿನಗಳ ಹಿಂದೆ ಹುಲಿಯೂರುದುರ್ಗ ಪಟ್ಟಣದ ಎಂ,ಎಸ್‌,ಐ,ಎಲ್‌ ಬಳಿ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರೌಡಿ ಶೀಟರ್‌ ಆಟೊ ರಾಮನ ಅಕ್ಕನ ಮಕ್ಕಳು ಸ್ನೇಹಿತರೊಬ್ಬರ ಬರ್ತಡೆ ಪಾರ್ಟಿ ಮಾಡುವ ವೇಳೆ ಕೋಲೆಯಾದ ಸೂರಿ ಅಲ್ಲಿಗೆ ಬಂದಿದ್ದ ಕುಡಿದ ಮತ್ತಿನಲ್ಲಿದ್ದ ಎಲ್ಲರೂ ಮಾತಿಗೆ ಮಾತು ಬೆಳೆಸಿ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಮಾತಿನ ಚಕಮಕಿ ನಡೆಸಿದ್ದರು ಅಲ್ಲಿಂದ ಶುರುವಾದ ಪ್ರಕರಣ ಕೊಲೆಯಲ್ಲಿ ಅಂತ್ಯ ಕಂಡಿದೆ

(ಬಾಕ್ಸ್‌;-ವಿವಾದದ ಸುಳಿಯಲ್ಲಿ ಪಿ,ಎಸ್‌,ಐ,ಕಳೆದ ಆರು ತಿಂಗಳುಗಳ ಹಿಂದೆ ಹುಲಿಯೂರುದುರ್ಗ ಪಟ್ಟಣಕ್ಕೆ ಕರ್ತವ್ಯಕ್ಕೆ ಬರುವ ಮುನ್ನವೆ ಪಟ್ಟಣದ ಪ್ರಭಾವಿ ವ್ಯಕ್ತಿಯೋಬ್ಬರ ಮನೆಯಲ್ಲಿ ಬಾಡಿಗೆ ಮನೆಮಾಡಿ ಬೆರೆ ಠಾಣೆಯಲ್ಲಿ ಕರ್ತವ್ಯ ಮಾಡುತ್ತಿರುವಾಗಲೆ ಸಮವಸ್ತ್ರದಲ್ಲೆ ಬಂದು ಮನೆಯ ಪೂಜೆಮಾಡಿ ಹೊಗಿದ್ದು ಚರ್ಚೆಗೆ ಗ್ರಾಸವಸಗಿತ್ತು ಇದಾದ ಬಳಿಕ ಪ್ರಭಾವಿ ವ್ಯಕ್ತಿಯ ವಿರುದ್ದ ಪ್ರಕರಣ ದಾಖಲಾಗಿ ಹಿರಿಯ ಪೊಲೀಸ್‌ ಅಧಿಕಾರಿಗಳ ಕರ್ತವ್ಯ ಲೊಪ ಹಾಗೂ ದುರುದ್ದೇಶದಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಅಲ್ಲಿಂದ ಮನೆ ಖಾಲಿ ಮಾಡಿ ಬಳಿಕ ಲಾಡ್ಜ್‌ ನಲ್ಲಿ ವಾಸವಿದ್ದ ಸುನಿಲ್‌ ಕುಮಾರ್‌ ಡಿಸೆಂಬರ್‌ ನಲ್ಲಿ ಗೃಹ ಪ್ರವೇಶವಾದ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ರೌಡಿ ಶೀಟರ್‌ ಆಟೊ ರಾಮನ ಮನೆಯಲ್ಲಿ ವಾಸ್ಥವ್ಯ ಮಾಡಿರುವುದು ಇಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ)

ಕೊಲೆ ಪ್ರಕರಣದ ಬಳಿಕ ಕೆಲವು ಆರೋಪಿಗಳು ಪೊಲೀಸರ ಮುಂದೆ ಶರಣಗಿದ್ದರು ಆದರೆ ಪ್ರಕರಣದ ಎ1 ಮತ್ತು ಎ2 ತಲೆಮರೆಸಿಕೊಂಡಿದ್ದು ಮಂಗಳವಾರ ಕುಣಿಗಲ್‌ ಪಟ್ಟಣದ ಜೆ,ಎಂ,ಎಫ್,ಸಿ ನ್ಯಾಯಲಯದಲ್ಲಿ ಎ1 ಆರೋಪಿ ಶರಣಾಗಿದ್ದ ಹುಲಿಯೂರುದುರ್ಗ ಪಿ,ಎಸ್‌,ಐ ಸುನಿಲ್‌ ಕುಮಾರ್‌ ಕೊಲೆ ಪ್ರಕರಣದ ಎ1 ಆರೋಪಿ ರೌಡಿಶೀಟರ್‌ ಆಟೊ ರಾಮನ ಜೋತೆಗೆ ಪೋನ್‌ ನಲ್ಲಿ ಸಂಪರ್ಕ ಇರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಶೋಕ್‌ ರವರು ಹುಲಿಯೂರುದುರ್ಗ ಪಿ,ಎಸ್‌,ಐ, ರವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ

ಇನ್ನೂ ಮೂಲಗಳ ಪ್ರಕಾರ ಕೊಲೆಯಾದ ಸೂರಿ ಮತ್ತು ಆಟೊರಾಮ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು ಕಳೆದ ಮೂರು ವರ್ಷಗಳಿಂದ ಯಾವುದೆ ಪ್ರಕರಣದಲ್ಲಿ ಭಾಗಿಯಾಗದೆ ತನ್ನ ಪಾಡಿಗೆ ಕುಟುಂಬದವರೊಂದಿಗೆ ಇದ್ದ ರೌಡಿಶೀಟರ್ ಆಟೊರಾಮ ತನ್ನ ಸಂಬಂಧಿ ಪ್ರಭಾವಿ ವ್ಯಕ್ತಿಯೊಬ್ಬರ ಬಂಧನ ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧದ ನಡೆದ ಪ್ರತಿಭಟನೆಯ ನೆತೃತ್ವ ವಹಿಸಿದ್ದು ಸಹ ಇತನಿಗೆ ಮೂಳುವಾಗಿದೆ ರೌಡಿಶೀಟರ್ ಆಗಿರುವ ಕಾರಣಕ್ಕೆ ಕೊಲೆ ಪ್ರಕರಣದಲ್ಲಿ ಉದ್ದೇಶ ಪೂರಕವಾಗಿ ಸಿಲುಕಿಸಿ ಎ1 ಆರೋಪಿ ಮಾಡಲಾಗಿದೆ ಎಂಬೆಲ್ಲ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಸೂರಿ ಕೊಲೆಯ ಮೂರುದಿನಗಳ ಹಿಂದಷ್ಟೇ ಆಟೊರಾಮನ 7ತಿಂಗಳ ಮಗು ಸಾವನ್ನಪ್ಪಿತ್ತು ಅಂತ್ಯ ಸಂಸ್ಕಾರದಲ್ಲಿ ಕ್ಯಾಪ್ಟನ್ ಸೂರಿಯು ಸಹಾ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಸ್,ಪಿ ಅಶೋಕ್ ತುಮಕೂರು ನಗರ ಸೆನ್ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ, ಪ್ರಕರಣವನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿದ್ದಲ್ಲಿ ಹಲವರ ತಲೆದಂಡವಾಗುವ ಸಾಧ್ಯತೆ ಇದೆ!

ಕಾನೂನು ಸುವ್ಯವಸ್ಥೆ ಕಾಪಡಬೇಕಿದ್ದ ಪೊಲೀಸರು ರೌಡಿಶಿಟರ್‌ ಮನೆಯಲ್ಲಿ ವಾಸ್ಥವ್ಯ ಹೂಡಿದರೆ ರೌಡಿಗಳಿಗೆ ಕಾನೂನಿನ ಭಯ ಎಲ್ಲಿದೆ ಎಂಬುದು ನಾಗರೀಕರ ಪ್ರಶ್ನೆಯಾಗಿತ್ತು ಹುಲಿಯೂರುದುರ್ಗ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 52 ಮಂದಿ ರೌಡಿ ಆಸಮಿಗಳಿದ್ದು ಪಟ್ಟಣ ಬೆಳೆದಂತೆ ರೌಡಿ ಚಟುವಟಿಕೆ ಲ್ಯಾಂಡ್ ಮಾಫಿಯಾ ಹೆಚ್ಚುತಲೆ ಇವೆ ಆದರೆ ಇದನ್ನೆಲ್ಲ ಮಟ್ಟ ಆಕಬೇಕಿದ್ದ ಪೊಲೀಸರು ಮಾತ್ರ ಕಾನೂನಿನ ಭಯವಿಲ್ಲದೆ ರಾಜಕಾರಣಿಗಳ ಚೆಲಾಗಳು ಹಾಗೂ ಪೋಲಿ ಪುಡಾರಿಗಳಿಗೆ ಶ್ರೀ ರಕ್ಷೆ ನಿಡುತ್ತಿದ್ದಾರೆ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದ್ದ ಹುಲಿಯೂರುದುರ್ಗ ಪೊಲೀಸ್ ಠಾಣೆ ಇತ್ತಿಚೆಗೆ ಒಂದಲ್ಲ ಒಂದು ವಿವಾದಗಳಿಗೆ ಕಾರಣವಾಗಿದೆ ಇನ್ನಾದರು ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ಠಾಣೆಗೆ ಅಂಟಿರುವ ಕಳಂಕ ಸ್ವಚ್ಚಗೊಳಿಸಿ ಪಟ್ಟಣದ ನಾಗರೀಕರ ಹಿತ ಕಾಯಬೇಕೆಂಬುದು ಪಟ್ಟಣದ ನಾಗರೀಕರ ಒತ್ತಾಯವಾಗಿದೆ, @publicnewskunigal