ಕುಣಿಗಲ್ ಸುದ್ದಿ;-ಮಾಹಿತಿ ನಿಡದ ಮಿನುಗಾರಿಕೆ ಸಹಾಯಕ ನಿರ್ದೇಶಕರಿಗೆ ಮಾಹಿತಿ ಆಯೋಗದಿಂದ 25 ಸಾವಿರ ದಂಡ! ಕುಣಿಗಲ್ ತಾಲ್ಲೂಕಿನ ಮಿನುಗಾರಿಕೆ ಸಹಾಯಕ ನಿರ್ದೇಶಕಿ ದೀಪಾಲಿ ರವರಿಗೆ ಮಾಹಿತಿ ಹಕ್ಕು ನಿಯಮದಡಿಯಲ್ಲಿ ಅರ್ಜಿದಾರನಿಗೆ ಮಾಹಿತಿ ದಾಖಲೆಗಳನ್ನು ನಿಗದಿತ ಅವದಿಯಲ್ಲಿ ನೀಡದ ಹಿನ್ನೆಲೆಯಲ್ಲಿ ಮಾಹಿತಿ ಆಯೋಗದಿಂದ 25 ಸಾವಿರ ದಂಡ ವಿಧಿಸಿ ಒಂದೆ ಕಂತಿನಲ್ಲಿ ಸರ್ಕಾರಕ್ಕೆ ಪಾವತಿಸಲು ಆದೇಶ ಮಾಡಲಾಗಿದೆ ತಪ್ಪಿದ್ದಲ್ಲಿ ನಾಗರೀಕ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ,
ಏನಿದು ಪ್ರಕರಣ;-ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಹೊರಟಗಾರರ ವೇದಿಕೆಯ ರಾಜ್ಯದ್ಯಕ್ಷ ಹೆಚ್,ಜಿ ರಮೇಶ್ (ಕುಣಿಗಲ್) ರವರು ಮಾಹಿತಿ ಹಕ್ಕು ಅಧಿನಿಯಮದಡಿಯಲ್ಲಿ ಮಿನುಗಾರಿಕೆ ಇಲಾಖೆಯಲ್ಲಿ ಬರುವಂತಹ ಸೌಲಭ್ಯಗಳನ್ನು ಪಡೆದುಕೊಂಡ ಪಲನುಭವಿಗಳ ಪಟ್ಟಿ (ದಾಖಲೆ) ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ 2005ರ ಅಡಿಯಲ್ಲಿ ಅರ್ಜಿಸಲ್ಲಿಸಲಾಗಿತ್ತು ಆದರೆ ನಿಗದಿತ ಅವಧಿಯ ನಂತರವು ಯಾವುದೆ ರೀತಿಯ ಸ್ಪಂದನೆ ಮಾಡದ ಕಾರಣ ತುಮಕೂರು ಜಿಲ್ಲಾ ಮಿನುಗಾರಿಕೆ ಉಪ ನಿರ್ದೇಶಕರಿಗೆ ಪ್ರಥಮ ಮೆಲ್ಮನವಿ ದೂರು ಸಲ್ಲಿಸಲಾಗಿತ್ತು ಅವರು ಸಹ ದಾಖಲೆ ಕೊಡಿಸದ ಕಾರಣ ಮಾಹಿತಿ ಹಕ್ಕು ಆಯೋಗಕ್ಕೆ ಎರಡನೆ ಮೇಲ್ಮನವಿ ಸಲ್ಲಿಸಲಾಗಿತ್ತು ಆಯೋಗದಲ್ಲಿ ವಿಚಾರಣೆ ನಡೆಸಿದ ಆಯುಕ್ತರಾದ ಹೆಚ್,ಸಿ ಸತ್ಯನ್ ರವರು 25 ಸಾವಿರ ರೂಪಾಯಿ ದಂಡ ವಿಧಿಸಿ ನಿಗದಿತ ಅವಧಿಯೊಳಗೆ ಸರ್ಕಾರಕ್ಕೆ ಪಾವತಿಸುವಂತೆ ತಪ್ಪಿದಲ್ಲಿ ನಾಗರೀಕ ಸೇವಾ ನಿಯಮಗಳ ಪ್ರಕಾರ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದೆಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ, @publicnewskunigal