ಕಿತ್ತಿನಾಮಂಗಲ ಗ್ರಾಮದ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಟ ಕ್ರಮ ಕೈಗೊಳ್ಳದ ಅಧಿಕಾರಿಗಳು!

Spread the love

ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕಿತ್ತಿನಾಮಂಗಲ ಗ್ರಾಮದ ಕೆರೆಯಲ್ಲಿ ನೀರು ಕಡಿಮೆಯಾದಂತೆ ಅಲ್ಲಿನ ಫಲವತ್ತಾದ ಮಣ್ಣಿನ ಮೇಲೆ ಪ್ರಭಾವಿಗಳ ಕಣ್ಣು ಬಿದ್ದಿದ್ದು ತಮ್ಮ ರಾಜಕೀಯ ಪ್ರಭಾವ ಬಳಸಿ ಕೆರೆಯ ಫಲವತ್ತಾದ ಮಣ್ಣನ್ನು ಅಕ್ರಮವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ಸ್ಥಳಿಯ ಗ್ರಾಮಸ್ಥರು ಆರೋಪಿಸಿದ್ದಾರೆ

ಈ ಬಗ್ಗೆ ಗ್ರಾಮಸ್ಥರು ಹಲವು ಭಾರಿ ಸಣ್ಣ ನೀರಾವರಿ ಇಲಾಖೆ, ಕಂದಾಯ ಇಲಾಖೆ,ಪೊಲೀಸರಿಗೆ ಪೋನ್ ಮೂಲಕ ದೂರು ನೀಡಿದರು ಯಾವುದೆ ಕ್ರಮ ಕೈಗೊಂಡಿಲ್ಲ

ಯಾವುದೆ ಅನುಮತಿ ಪಡೆಯದೆ ಅಕ್ರಮವಾಗಿ ಕೆರೆಯ ಫಲವತ್ತಾದ ಮಣ್ಣನ್ನು ಲೂಟಿ ಮಾಡುತ್ತಿದ್ದಾರೆ ಆದರೆ ಸ್ಥಳಕ್ಕೆ ಬರುವ ಅಧಿಕಾರಿಗಳು ಜೆಸಿಬಿ ಮತ್ತು ಟ್ರಾಕ್ಟರ್ ಮಾಲಿಕರ ಆಮಿಷಗಳಿಗೆ ಒಳಗಾಗಿ ಯಾವುದೆ ಕ್ರಮ ಕೈಗೊಂಡಿಲ್ಲ ಕೆರೆಯಲ್ಲಿ ಇರುವ ಕೆಂಪು ಮಣ್ಣಿಗೆ ಒಳ್ಳೆಯ ಬೇಡಿಕೆ ಇರುವ ಕಾರಣ ತುಂಬಿ ಮಾರಾಟ ಮಾಡಲಾಗುತ್ತಿದೆ 800 ರಿಂದ ಸಾವಿರ ರೂಪಾಯಿಗೆ ಒಂದು ಟ್ರಾಕ್ಟರ್ ಮಣ್ಣು ಮಾರಾಟ ರೈತರ ಸೋಗಿನಲ್ಲಿ ಕೆರೆಯ ಮಣ್ಣನ್ನು ತೊಟಗಳಲ್ಲಿ ಸ್ಟಾಕ್ ಮಾಡಿಕೊಂಡು ಇಟ್ಟಿಗೆ ಕಾರ್ಖಾನೆ ಸೆರಿದಂತೆ ಅಕ್ಕ ಪಕ್ಕದ ತಾಲ್ಲೂಕುಗಳಿಗೆ ಮಣ್ಣನ್ನು ಟಿಪ್ಪರ್ ಲಾರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ಸ್ಥಳಿಯರು ದೂರು ನೀಡಿದರು ಸಹ ಮಾತ್ರ ಜಾಣ ಮೌನ ವಹಿಸಿರುವುದನ್ನು ಗಮನಿಸಿದರೆ ಈ ಅಕ್ರಮದಲ್ಲಿ ಅಧಿಕಾರಿಗಳಿಗೂ ಪಾಲಿದೆಯ..? ಎಂಬ ಆರೋಪ ಸ್ಥಳಿಯರಲ್ಲಿ ಕೇಳಿಬರುತ್ತಿದೆ

ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕ್ರಮ ಕೈಗೊಳ್ಳುವಂತೆ ಸ್ಥಳಿಯರು ಮನವಿ ಮಾಡಿದರೆ ವಿಡಿಯೊ ಕಾಲ್ ಮಾಡಿ ಸಾಕ್ಷ್ಯ ನೀಡುವಂತೆ ಅಧಿಕಾರಿಗಳು ಕೇಳಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ

ಕಳೆದ ಹದಿನೈದು ದಿನಗಳಿಂದ 25 ರಿಂದ 30 ಟ್ರಾಕ್ಟರ್ ಮತ್ತು ಏಳೆಂಟು ಜೆಸಿಬಿ ಯಂತ್ರ ಬಳಸಿ ಮಣ್ಣು ಲೂಟಿ ಮಾಡಲಾಗುತ್ತಿದೆ ಇದರಿಂದ ಪ್ರತಿನಿತ್ಯ ಇಪ್ಪಾಡಿ ಕಡೆಯಿಂದ ಕುಣಿಗಲ್ ಕಡೆಗೆ ತೆರಳುವ ವಾಹನ ಸವಾರರಿಗೆ ಹೈರಾಣು ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಹೊಗುವ ಟ್ರಾಕ್ಟರ್‌ ಗಳಿಂದ ಬರುವ ದೂಳಿನಿಂದ ಹೈರಾಣಾಗಿದ್ದಾರೆ

ಕೆರೆಯಲ್ಲಿ ಮಣ್ಣು ತೆಗೆಯುತ್ತಿರುವುದರಿಂದ ಎಲ್ಲೆಂದರಲ್ಲಿ ಬೃಹತ್ ಗ್ರಾತ್ರದ ಗುಂಡಿಗಳು ನಿರ್ಮಾಣವಾಗಿರುವ ಕಾರಣಕ್ಕೆ ಮುಂದಿನ ದಿನಗಳಲ್ಲಿ ಕೆರೆಯಲ್ಲಿ ನೀರು ತುಂಬಿದರೆ ಕೆರೆಗೆ ದನಕರುಗಳಿಗೆ ನೀರು ಕುಡಿಸಲು ಅಥವಾ ಮೈ ತೋಳೆಯಲು ತೆರಳುವ ರೈತರಿಗೆ ಸಮಸ್ಯೆಯಾಗಲಿದೆ ಇನ್ನಾದರು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ರೈತರ ಭೂಮಿ ಸೇರಬೇಕಿದ್ದ ಕೆರೆಯ ಫಲವತ್ತಾದ ಮಣ್ಣು ಮಾರಾಟವಾಗುತ್ತಿರುವುದು ವಿಪರ್ಯಾಸವೆ ಸರಿ!@publicnewskunigal