ತುಮಕೂರು;-ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನ ವರ್ಗವಣೆಗೆ ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಹೊರಾಟಗಾರಿಂದ ಧರಣಿ!ತುಮಕೂರು ಜಿಲ್ಲಾಧಿಕಾರಿಗಳ ಕಚೆರಿಯಲ್ಲಿ ಕಳೆದ 24 ವರ್ಷಗಳಿಂದ ಒಂದೆ ಕಡೆಯಲ್ಲಿ ಬಿಡು ಬಿಟ್ಟಿರುವ ಆಪ್ತ ಸಹಾಯಕ ‘ಹೇರಂಭಾ’ ನನ್ನು ವರ್ಗಾವಣೆ ಮಾಡುವಂತೆ ಹಾಗೂ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಸುತ್ತಿರುವ ರಾಜಸ್ವ ನಿರೀಕ್ಷ ಹರೀಶ್ ಕುಮಾರ್ ವಿರುದ್ಧ ಕರ್ತವ್ಯ ಲೋಪದಡಿಯಲ್ಲಿ ಇದುವರೆಗೂ ಮೂರು ಪ್ರಕರಣಗಳು ದಾಖಲಾಗಿರುವ ಬಗ್ಗೆ ರೈತರು ದೂರುಗಳನ್ನು ನೀಡಿದರು ಸಹ ಇದುವರೆಗೂ ಕ್ರಮ ಕೈಗೊಂಡಿಲ್ಲ ಆದ್ದರಿಂದ ಈ ಕೂಡಲೆ ಇಬ್ಬರು ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಂಡು ಬೆರೆ ಕಡೆಗೆ ವರ್ಗವಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರ ವೇದಿಕೆಯ ರಾಜ್ಯಧ್ಯಕ್ಷ ಹೆಚ್,ಜಿ ರಮೇಶ್ ನೇತೃತ್ವದಲ್ಲಿ ಗುರುವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮಂಭಾಗ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ
ಬಳಿಕ ಮಧ್ಯಾಹ್ನ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಶುಭಕಲ್ಯಾಣ್ ರವರು ಹೊರಾಟಗಾರರಿಂದ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು ಇದಕ್ಕೆ ಒಪ್ಪದ ಹೋರಾಟಗಾರರ ಜಿಲ್ಲಾಧಿಕಾರಿಗಳಿಗೆ ಈ ಕೂಡಲೆ ನಿಮ್ಮ ಆಪ್ತ ಸಹಾಯಕ ಹೇರಂಭಾ ನನ್ನು ಬೆರೆ ಕಡೆಗೆ ವರ್ಗವಣೆ ಮಾಡಿ ಆದೇಶ ಪ್ರತಿಯನ್ನು ನಿಡುವಂತೆ ಪಟ್ಟು ಹಿಡಿದರು ಬಳಿಕ ಸ್ಪಂದಿಸುವುದಾಗಿ ತಿಳಿಸಿ ತೆರಳಿದ ಜಿಲ್ಲಾಧಿಕಾರಿಗಳು ಸಂಜೆ ಅಧಿಕಾರಿಗಳ ಸಭೆ ನಡೆಸಿ ಕಚೇರಿಯಿಂದ ವಾಪಸ್ ತೆರಳಿದ ಅವರು ಮತ್ತೆ ಕಚೇರಿಗೆ ಬಂದರು ಸಹ ಹೋರಾಟಗಾರರಿಗೆ ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ ಹೋರಾಟಗಾರರ ಮನವಿಗೆ ಸ್ಪಂದಿಸದ ಕಾರಣ ತಡ ರಾತ್ರಿಯ ವರೆಗೂ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಮಲಗಿ ಹೋರಾಟಗಾರರು ಧರಣಿ ಮುಂದುವರೆಸಿದ್ಧಾರೆ @publicnewskunigal